ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್

  • Crime
  • October 25, 2025
  • No Comment
  • 54

ವರುಣ ನಾಲೆ ಜಾಗ ಭೂ ಪರಿವರ್ತನೆ ಆರೋಪ ಸಾಬೀತು…ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ…Tv10 ಇಂಪ್ಯಾಕ್ಟ್

ಶ್ರೀರಂಗಪಟ್ಟಣ,ಅ25,Tv10 ಕನ್ನಡ

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸರ್ವೇ ನಂ. 44ರಲ್ಲಿ 2.13 ಎಕರೆ ವಿಸ್ತೀರ್ಣದ ಜಮೀನಿಗೆ ಸರ್ಕಾರಿ ನಾಲಾ ಜಾಗವನ್ನೂ ಸಹ ಸೇರಿಸಿ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿದ್ದಾರೆನ್ನಲಾದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನಲೆ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಆಡಳಿತಾಧಿಕಾರಿ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅನುಮತಿ ನೀಡಿದ್ದಾರೆ.
ಬೆಳಗೊಳದ ಹಿಂದಿನ ರಾಜಸ್ವ ನಿರೀಕ್ಷಕ ಜಯರಾಮಮೂರ್ತಿ ಹಾಗೂ ಹಿಂದಿನ ಗ್ರಾಮ ಆಡಳಿತ ಅಧಿಕಾರಿ ಪುಟ್ಟಸ್ವಾಮಿ ಅವರನ್ನು ಪ್ರಾಸಿಕ್ಯೂ ಷನ್‌ಗೆ ಒಳಪಡಿಸಲು ಅನುಮತಿ ನೀಡಿದ್ದಾರೆ.ಆದರೆ ಜಯಮೂರ್ತಿ ರವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಪ್ರಾಸಿಕ್ಯೂಷನ್ ಅನುಮತಿ ನೀಡಿದರೂ ವಿಚಾರಣೆಗೆ ಸಹಕರಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವುದರಿಂದ ಕೈಬಿಡಲಾಗಿದೆ.
ಬೆಳಗೊಳ ಗ್ರಾಮದ ಸರ್ವೆ ನಂ 44 ರ 2.13 ಎಕರೆ ವಿಸ್ತೀರ್ಣದ ಪೈಕಿ 14 ಗುಂಟೆ ವಿಸ್ತೀರ್ಣ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಜಾಗ ಎಂದು ಭೂಸ್ವಾಧೀನವಾಗಿದೆ. ಈ ಜಾಗವನ್ನೂ ಸಹ ಸೇರಿಸಿ ವಸತಿ ಉದ್ದೇಶಕ್ಕಾಗಿ ಆಕ್ರಮವಾಗಿ ಸರ್ಕಾರಕ್ಕೆ ತಪ್ಪು ಮಾಹಿತಿ ಸುಳ್ಳು ದಾಖಲೆಗಳನ್ನು ನೀಡಿ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದ ವೀರಭದ್ರಯ್ಯ ನವರಿಗೆ ಭೂ ಪರಿವರ್ತನೆ ಮಾಡಲಾಗಿದೆ. ಹೀಗಾಗಿ ಇವರ ವಿರುದ್ಧ ಭೂ ಕಂದಾಯ ಕಾಯಿದೆ 1964ರ ಕಲಂ 19: ಎ ಮತ್ತು 95ದಂತೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವಂತೆ ಬೆಳಗೊಳ ರೆವೆನ್ಯೂ ಇನ್ಸ್ಪೆಕ್ಟರ್ ಸಿ.ಬಸವರಾಜು ಕೆ ಆರ್ ಸಾಗರ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು.ಈ ಸುದ್ದಿ ಕೆಲವು ದಿನಗಳ ಹಿಂದೆ Tv10 ಕನ್ನಡ ವಾಹಿನಿಯಲ್ಲಿ ವರದಿ ಮಾಡಲಾಗಿತ್ತು.
ಈ ವಿಚಾರವಾಗಿ ನೌಕರರನ್ನು ವಿಚಾರಣೆಗೆ ಒಳಪಡಿಸಿದಾಗ ಪುಟ್ಟಸ್ವಾಮಿ ಅವರು ಭೂ ಪರಿವರ್ತನೆ ಸಂಬಂಧ ಅರ್ಜಿದಾರರ ಸಮಕ್ಷಮದಲ್ಲಿ ಮಹಜರ್ ಜರುಗಿಸಿ ತಾವು ಮಹಜರ್ ಗೆ ಸಹಿ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, ಕಾವೇರಿ ನೀರಾವರಿ ನಿಗಮದ 14 ಕುಂಟೆ ಭೂ ಸ್ವಾಧೀನವಾಗಿದ್ದರು ಅದನ್ನು ನಮೂದಿಸದಿರುವುದು ಕರ್ತವ್ಯ ಲೋಪಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಹಿಂದಿನ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗ ಪುಟ್ಟಸ್ವಾ ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಅನುಮತಿ ನೀಡುವಂತೆ ಕೆ ಆರ್ ಸಾಗರ ಪೊಲೀಸ್ ಸಬ್‌ಇನ್ಸ್ಪೆಕ್ಟ‌ರ್ ಅವರು ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳಿಗೆ ಒದಗಿಸಿದ್ದರು.

ಬೆಳಗೊಳ ಗ್ರಾಮದ ಸ.ನಂ. 44ರಲ್ಲಿನ 14 ಗುಂಟೆ ವರುಣ ನಾಲಾ ನಿರ್ಮಾಣಕ್ಕೆ 28.8.199 ಅನ್ವಯದಂತೆ ಅಧಿಸೂಚನೆಯಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿದೆ. ವರುಣಾ ನಾಲೆಗಂದು ಭೂಸ್ವಾಧೀನವಾದ ಜಮೀನು ಭೂ ಪರಿಹಾರವಾಗಿ 29.199 ರು.ಗಳನ್ನು ವೆಂಕಟಲಕ್ಷ್ಮಮ್ಮ ಅವರು ಪಡೆದುಕೊಂಡಿರುವುದು ದಾಖಲೆಗಳಿಂದ ಕಂಡು ಬಂದಿರುತ್ತದೆ, ಕಂದಾಯ ದಾಖಲೆಗಳಲ್ಲಿ ಇಂಡೀಕರಣವಾದ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡು 2013ರ ವೇಳೆ ಜಮೀನಿನ ಮಾಲೀಕತ್ವ ಹೊಂದಿದ್ದ ಬಸವರಾಜು 10.1.2013ರಲ್ಲಿ 14 ಗುಂಟೆಯನ್ನು ಒಳಗೊಂಡಂತೆ ಪೂರ್ಣ 2.13 ಗುಂಟೆ ಜಮೀನನ್ನು ವೀರಭದ್ರಯ್ಯ ನವರಿಗೆ ಮಾರಾಟ ಮಾಡಿರುವುದು ಕಂಡುಬಂದಿರುತ್ತದೆ.
ಜಮೀನಿನ ಸ್ಥಳ ತನಿಖೆ ನಡೆಸಿ ವಸ್ತು ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದು ಭೂ ಪರಿವರ್ತನೆಗೆ ಶಿಫಾರಸ್ಸು ಮಾಡಿದೆ. 2.13 ಎಕರೆ ಜಮೀನಿಗೆ ಭೂ ಪರಿವರ್ತನೆ ಮಾಡಲು ರಾಜಸ್ವ ನಿರೀಕ್ಷಕರಾಗಿದ್ದ ಜಯರಾಮಮೂರ್ತಿ ಹಾಗೂ ಗ್ರಾಮ ಲೆಕ್ಕಿಗೆ ಪುಟ್ಟಸ್ವಾಮಿ ಸಲ್ಲಿಸಿ ಕರ್ತವ್ಯ ಲೋಪವೆಸಗಿ ರುವುದು ಸ್ಪಷ್ಟವಾಗಿದೆ ಎಂದು ತಿಳಿಸಲಾಗಿದೆ.ಇದು Tv10 ಕನ್ನಡ ವಾಹಿನಿ ವರದಿಯ ಫಲಶೃತಿಯಾಗಿದೆ…

Spread the love

Related post

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು… ಹುಣಸೂರು,ಡಿ20,Tv10 ಕನ್ನಡ ಸುಡುತ್ತಿರುವ ಬಿಸಿನೀರಿನ ಪಾತ್ರೆಗೆ ಬಿದ್ದು ಹೆಣ್ಣುಮಗು ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ. ಆದಿವಾಸಿ…
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ… ಹುಣಸೂರು,ಡಿ19,Tv10 ಕನ್ನಡ ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.ನಿಜಾಂ ಮೊಹಲ್ಲಾದ ನಿವಾಸಿ ಖಾಜಾಪೀರ್(44)ಕೊಲೆಯಾದ…
ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ… ಮಂಡ್ಯ,ಡಿ19,Tv10 ಕನ್ನಡ ಜಮೀನು ವಿಚಾರದಲ್ಲಿ ಮಾಜಿ ಶಾಸಕ ಹಾಗೂ ಪುತ್ರ ವ್ಯಕ್ತಿ ಮೇಲೆ…

Leave a Reply

Your email address will not be published. Required fields are marked *