ಮೈಸೂರಿನಲ್ಲಿ ಮೈ ಕೊರೆವ ಚಳಿ…ಹೊದಿಕೆ ವಿತರಿಸಿ ಸಾಮಾಜಿಕ ಕಳಕಳಿ…
- TV10 Kannada Exclusive
- December 2, 2025
- No Comment
- 4


ಮೈಸೂರಿನಲ್ಲಿ ಮೈ ಕೊರೆವ ಚಳಿ…ಹೊದಿಕೆ ವಿತರಿಸಿ ಸಾಮಾಜಿಕ ಕಳಕಳಿ…
ಮೈಸೂರು,ಡಿ2,Tv10 ಕನ್ನಡ
ಮೈಸೂರಿನಲ್ಲಿ ಮೈ ಕೊರೆಚ ಚಳಿ ಶುರುವಾಗಿದೆ.ರಸ್ತೆ ಬದಿ ಮಲಗುವ ನಿರಾಶ್ರಿತರು ಹೊದಿಕೆ ಇಲ್ಲದೆ ಪರದಾಡುತ್ತಿದ್ದಾರೆ.ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಮೂಲಕ ಕೆಎಂಪಿಕೆ ಟ್ರಸ್ಟ್ ಸಾಮಾಜಿಕ ಕಳಕಳಿ ಪ್ರದರ್ಶಿಸಿದೆ.ಮೈಸೂರಿನ ವಿವಿದ ಭಾಗಗಳಲ್ಲಿ ರಸ್ತೆ ಬದಿ ಮಲಗುವ ನಿರಾಶ್ರಿತರಿಗೆ ಹೊದಿಕೆ ವಿತರಿಸಲಾಗಿದೆ.ಮೈಸೂರು ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಲಿಂಗರಾಜು ರವರು ಸಾಮಾಜಿಕ ಕಳಕಳಿಗೆ ಕೈ ಜೋಡಿಸಿದ್ದಾರೆ.ಈ ಸಂದರ್ಭದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬಿಜೆಪಿ ಮುಖಂಡ ಜೋಗಿ ಮಂಜು, ನಿರೂಪಕ ಅಜಯ್ ಶಾಸ್ತ್ರಿ, ಎಸ್ ಬಿ ರಾಮು,ಎಸ್ ಎನ್ ರಾಜೇಶ್, ಕಡಕೋಳ ಆರೋಗ್ಯ ಅಧಿಕಾರಿ ಮಂಜುನಾಥ್, ಸಚಿನ್ ನಾಯಕ್, ಅಮಿತ್ ಹಾಗೂ ಇನ್ನಿತರರು ಹಾಜರಿದ್ದರು..