ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್…ಒಂದು ತಿಂಗಳ ಹಿಂದೆ ಉದ್ಯೋಗಿ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದ ಕಾರ್ಖಾನೆ ಮಾಲೀಕ…ಸಂಸ್ಥೆಗೆ 27 ಲಕ್ಷ ವಂಚಿಸಿದ್ದ ಮಹಿಳೆ…
- CrimeTV10 Kannada Exclusive
- December 10, 2025
- No Comment
- 233




ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್…ಒಂದು ತಿಂಗಳ ಹಿಂದೆ ಉದ್ಯೋಗಿ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದ ಕಾರ್ಖಾನೆ ಮಾಲೀಕ…ಸಂಸ್ಥೆಗೆ 27 ಲಕ್ಷ ವಂಚಿಸಿದ್ದ ಮಹಿಳೆ…
ಮೈಸೂರು,ಡಿ10,Tv10 ಕನ್ನಡ
ಕೂರ್ಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಿಸೈಸ್ ಗೇರ್ಸ್ ಅಂಡ್ ಟರ್ಬೈನ್ ಸಲ್ಯೂಷನ್ ಸಂಸ್ಥೆ ಮಾಲೀಕ ಮುರಳೀಧರ್ ವಿರುದ್ದ ಮಹಿಳಾ ಉದ್ಯೋಗಿಯೊಬ್ಬರು ಲೈಂಕಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ.ಒಂದು ತಿಂಗಳ ಹಿಂದೆ ಕಾರ್ಖಾನೆ ಮಾಲೀಕರಾದ ಮುರಳಿಧರ್ ಮಹಿಳಾ ಉದ್ಯೋಗಿ ಸೇರಿದಂತೆ ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.ಗಿರೀಶ್ ಹಾಗೂ ಅಜಯ್ ಎಂಬುವರ ಜೊತೆ ಸೇರಿಕೊಂಡು ಮಹಿಳಾ ಉದ್ಯೋಗಿ ಸಂಸ್ಥೆಗೆ ಸೇರಿದ 27 ಲಕ್ಷ ಹಣ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.ಅಲ್ಲದೆ ಸಂಸ್ಥೆಗೆ ಸೇರಿದ ಗೌಪ್ಯ ವ್ಯವಹಾರಗಳನ್ನ ಬಹಿರಂಗಪಡಿಸಿದ್ದಾರೆ.ಒಳಸಂಚು ನಡೆಸಿ ಸಂಸ್ಥೆಗೆ ನಂಬಿಕೆ ದ್ರೋಹ ಬಗೆದಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.ಈ ಬೆಳವಣಿಗೆಯ ನಂತರ ಮಹಿಳೆ ಮಾಲೀಕನ ವಿರುದ್ದ ಲೈಂಗಿಕ ಕಿರುಕುಳ ದಾಖಲಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.ಈ ಸಂಬಂಧ ಪೊಲೀಸರು ಕೂಲಂಕುಶವಾಗಿ ಪರಿಶೀಲನೆ ನಡೆಸಿ ನಿಜವಾದ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ…