ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…
- TV10 Kannada Exclusive
- January 21, 2026
- No Comment
- 7


ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…
ಮಂಡ್ಯ,ಜ21,Tv10 ಕನ್ನಡ
ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ಕಾಲುಜಾರಿ ನೀರುಪಾಲಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಂಚೆಬೀರನಹಳ್ಳಿಯಲ್ಲಿ ನಡೆದಿದೆ.
ಆನೆಗೋಳ ಗ್ರಾಮದ ರೈತ ಯೋಗೇಶ್ (49) ಕಟ್ಟೆಯಲ್ಲಿ ಕಾಲು ಜಾರಿ ಸಾವಿಗೀಡಾದ ದುರ್ದೈವಿ.ಕುರಿ ಮೇಯಿಸಲು ಹೋಗಿದ್ದ ಯೋಗೇಶ್ ಕಟ್ಟೆಯಲ್ಲಿ ಕುರಿ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಸಾವನ್ನಪ್ಪಿದ್ದಾರೆ.
ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…