ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಮೈಸೂರು ಮೃಗಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ ಎಸ್. ಮತಿದೇವಕುಮಾರ್ ಜಿಲ್ಲಾ ರಾಜ್ಯಪಾಲರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಣಿಗಳ ಸಂರಕ್ಷಣೆ, ಅವುಗಳ ಆರೈಕೆ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಸಾರ್ವಜನಿಕರು ಮತ್ತು ಸೇವಾ ಸಂಸ್ಥೆಗಳು ಕೈಜೋಡಿಸುವ ಅಗತ್ಯದ ಕುರಿತು ಕಾರ್ಯಕ್ರಮದಲ್ಲಿ ಸಂದೇಶ ನೀಡಲಾಯಿತು.

ಪ್ರಾಣಿ ದತ್ತು ಸ್ವೀಕಾರದ ಮೂಲಕ ವನ್ಯಜೀವಿಗಳ ಸಂರಕ್ಷಣೆ, ಅವುಗಳ ಆರೈಕೆ ಮತ್ತು ಪರಿಸರ ಸಮತೋಲನದ ಮಹತ್ವವನ್ನು ಸಾರ್ವಜನಿಕರಲ್ಲಿ ಮೂಡಿಸುವ ಉತ್ತಮ ಸಂದೇಶವನ್ನು ಲಯನ್ಸ್ ಸಂಸ್ಥೆಗಳು ನೀಡಿವೆ. ಕೇವಲ ಮಾನವ ಸೇವೆಯಷ್ಟೇ ಅಲ್ಲದೆ, ಪ್ರಾಣಿ, ಪಕ್ಷಿ ಹಾಗೂ ಪ್ರಕೃತಿ ಸಂರಕ್ಷಣೆಯೂ ಸಮಾಜ ಸೇವೆಯ ಅವಿಭಾಜ್ಯ ಅಂಗವಾಗಿದೆ ಎಂದು ಮೈಸೂರು ಮೃಗಾಲಯದ ಎಕ್ಸಿಕ್ಯೂಟಿವ್ ಆಫೀಸರ್ ಅನುಷಾ IFS ರವರು ದತ್ತು ಸ್ವೀಕಾರ ಮಾಡಿ ತಿಳಿಸಿದರು.ಕಾರ್ಯಕ್ರಮಕ್ಕೆ PDG ಹಾಗೂ MD-GET ಸಂಯೋಜಕರಾದ ಲಯನ್ ಡಾ. ಜಿ.ಎ. ರಮೇಶ್, ಪ್ರಥಮ ಉಪ ಜಿಲ್ಲಾ ರಾಜ್ಯಪಾಲ ಲಯನ್ ಟಿ. ನಾರಾಯಣಸ್ವಾಮಿ, PDG ಹಾಗೂ PMCC ಲಯನ್ ಡಾ. ಎನ್. ಕೃಷ್ಣೇಗೌಡ, ದ್ವಿತೀಯ ಉಪ ಜಿಲ್ಲಾ ರಾಜ್ಯಪಾಲ ಲಯನ್ ಎಂ. ಸಿದ್ದೇಗೌಡ, PDG ಲಯನ್ ಎಂ.ಎನ್. ಜೈಪ್ರಕಾಶ್ ಅವರು ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು. ಪ್ರಾಣಿ ದತ್ತು ಸ್ವೀಕಾರ ಕಾರ್ಯಕ್ರಮದ ಅಂಗವಾಗಿ LCM Palace City ವತಿಯಿಂದ ₹2,00,000 ಮೊತ್ತಕ್ಕೆ ಸಿಂಹವನ್ನು ದತ್ತು ಸ್ವೀಕರಿಸಲಾಗಿದೆ. LCM Palace City Queens ವತಿಯಿಂದ ₹20,000 ಮೊತ್ತಕ್ಕೆ ಆಸ್ಟ್ರಿಚ್‌ (ಉಷ್ಟ್ರಪಕ್ಷಿ) ದತ್ತು ಪಡೆಯಲಾಗಿದೆ.

ಅದೇ ರೀತಿ LCM Paramapare ವತಿಯಿಂದ ₹10,000 ಮೊತ್ತಕ್ಕೆ ಕಿಂಗ್ ಕೋಬ್ರಾ ಹಾಗೂ ರೆಟಿಕ್ಯುಲೇಟೆಡ್ ಪೈಥಾನ್‌ (ಹೆಬ್ಬಾವು)ಗಳನ್ನು ದತ್ತು ಸ್ವೀಕರಿಸಲಾಗಿದೆ. LCM Green City ವತಿಯಿಂದ ₹5,000 ಮೊತ್ತಕ್ಕೆ ಬಿಳಿ ನವಿಲು (Peacock White) ದತ್ತು ಪಡೆಯಲಾಗಿದೆ.ವಿಶೇಷ ಆಹ್ವಾನಿತರಾಗಿ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಲಯನ್ ಟಿ.ಹೆಚ್. ವೆಂಕಟೇಶ್, ಜಿಲ್ಲಾ ಕ್ಯಾಬಿನೆಟ್ ಖಜಾಂಚಿ ಲಯನ್ ಎ.ಪಿ. ಭರತೇಶ್, ರೀಜನ್–IV ಅಧ್ಯಕ್ಷ ಲಯನ್ ಎ.ವಿ. ಮೃತ್ಯುಂಜಯ, ಝೋನ್–1 ಅಧ್ಯಕ್ಷ ಲಯನ್ ಎ.ಎಸ್. ಪ್ರಭಾಕರ್, LCM Palace City ಅಧ್ಯಕ್ಷ ಲಯನ್ ಕೆ.ಆರ್. ಮಹದೇವಮೂರ್ತಿ ಹಾಗೂ LCM Palace City Queens ಅಧ್ಯಕ್ಷೆ ಲಯನ್ ಶ್ರೀಮತಿ ಶಶಿಕಲಾ ಮೋಹನ್ ಹಾಗೂ ಜಿಲ್ಲಾ PST ಫೋರಂ ಅಧ್ಯಕ್ಷ ಲಯನ್ ಜಯಕುಮಾರ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪ್ರಾಣಿ ದತ್ತು ಸ್ವೀಕಾರ ಸಮಿತಿಯ ಅಧ್ಯಕ್ಷ ಲಯನ್ ಡಿ.ಪಿ. ಪ್ರಕಾಶ್ ವಹಿಸಿ ಮಾತನಾಡಿದ

ಲಯನ್ಸ್ ಸಂಸ್ಥೆಯ ಸೇವಾ ಚಟುವಟಿಕೆಗಳ ಭಾಗವಾಗಿ ಪ್ರಾಣಿಗಳ ದತ್ತು ಸ್ವೀಕಾರದಂತಹ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಾಣಿಗಳು ಮತ್ತು ಪಕ್ಷಿಗಳು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪ್ರಾಣಿ ಸಂರಕ್ಷಣೆ–ಪರಿಸರ ಸಂರಕ್ಷಣೆ–ಮಾನವೀಯತೆ ಎಂಬ ಆಶಯದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮ ಲಯನ್ಸ್ ಸದಸ್ಯರ ಸೇವಾ ಮನೋಭಾವಕ್ಕೆ ಮತ್ತೊಂದು ಸಾಕ್ಷಿಯಾಯಿತು ಎಂದು ಲಯನ್ಸ್ ಜಿಲ್ಲಾ ಅಧ್ಯಕ್ಷ ಸಾರ್ವಾಜನಿಕ ಸಂಪರ್ಕ ಅಧಿಕಾರಿ ಲಯನ್ ಸಿ.ಆರ್. ದಿನೇಶ್ ರವರು ಮಾಹಿತಿ ನೀಡಿದ್ದಾರೆ.

Spread the love

Related post

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ… ಮೈಸೂರು,ಸೆ15,Tv10 ಕನ್ನಡ ಸಾಹಸಸಿಂಹ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 18ರಂದು…
ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…

Leave a Reply

Your email address will not be published. Required fields are marked *