- July 26, 2022
ಒಂದು ತಿಂಗಳಲ್ಲಿ ನಾಡದೇವಿ ಚಾಮುಂಡೇಶ್ವರಿಗೆ 3.35 ಕೋಟಿ ಸಂಗ್ರಹ…

ಮೈಸೂರು,ಜುಲೈ26,Tv10 ಕನ್ನಡ
ಚಾಮುಂಡಿ ಬೆಟ್ಟದ ದೇವಾಲಯದ ಹುಂಡಿ ಎಣಿಕೆಯಲ್ಲಿ ಒಂದೇ ತಿಂಗಳಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಮೂರುವರೆ ಕೋಟಿ ಸಂಗ್ರಹವಾಗಿದೆ.
ಆಶಾಡ ಮಾಸದಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ದಾಖಲೆ ಆದಾಯ ಬಂದಿದೆ.
2 ಕೋಟಿ, 33 ಲಕ್ಷದ , 51 ಸಾವಿರದ 270 ರೂ ಹುಂಡಿಯಲ್ಲಿ ಸಂಗ್ರಹವಾಗಿದೆ.
270 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ.1 ಕೋಟಿ, 3 ಲಕ್ಷದ, 69 ಸಾವಿರದ ,270 ರೂ ಪ್ರವೇಶದ ಟಿಕೆಟ್ ನಲ್ಲಿ ಆದಾಯವಾಗಿ ಬಂದಿದೆ.100 ಕ್ಕೂ ಹೆಚ್ಚು ಮಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.
ವಿದೇಶಿಯರಿಂದಲೂ ಹುಂಡಿಗೆ ಕಾಣಿಕೆ ಸಲ್ಲಿಕೆಯಾಗಿದೆ. ರದ್ದಾದ 500, 1000 ಮುಖ ಬೆಲೆಯ ನೋಟುಗಳು ಕಾಣಿಕೆಯಾಗಿ ಬಂದಿದೆ.
ಒಂದು ಲಕ್ಷಕ್ಕೂ ಅಧಿಕ ಬೆಲೆಯ ರದ್ದಾದ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದೆ.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಸಮ್ಮುಖದಲ್ಲಿ ನಡೆದ ಹುಂಡಿ ಹಣ ಎಣಿಕೆ ನಡೆದಿದೆ…