• July 26, 2022

ಸಿಸಿಬಿ ಪೊಲೀಸರ ಕಾರ್ಯಾಚರಣೆ…ಇಬ್ಬರು ಮನೆಗಳ್ಳರ ಬಂಧನ…ಏರ್ ಗನ್ ಸೇರಿದಂತೆ 10.15 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಮೈಸೂರು,ಜುಲೈ26,Tv10 ಕನ್ನಡ
ಸಿಸಿಬಿ ಪೊಲೀಸರು ನಡಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಇಬ್ಬರು ಮನೆಗಳ್ಳರು ಅಂದರ್ ಆಗಿದ್ದಾರೆ.ಬಂಧಿತರಿಂದ ಒಂದು ಏರ್ ಗನ್ ಹಾಗೂ 10.15 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಕೃತ್ಯದಲ್ಲಿ ಭಾಗಿಯಾದ ಮತ್ತೋರ್ವ ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.ಮೈಸೂರು,ಮಂಡ್ಯ,ಬೆಂಗಳೂರು ಸೇರಿದಂತೆ ವಿವಿದ ಠಾಣಾ ವ್ಯಾಪ್ತಿಯ 9 ಮನೆಗಳವು ಪ್ರಕರಣಗಳು ಪತ್ತೆಯಾಗಿದೆ.

ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣವನ್ನ ಜಾಲಾಡಿದ ಸಿಸಿಬಿ ಪೊಲೀಸರಿಗೆ ಮೊದಲ ಆರೋಪಿ ಸಿಕ್ಕಿಬಿದ್ದಿದ್ದಾನೆ.ಬಾಲ್ಯಾವಸ್ಥೆಯಿಂದಲೂ ಈತ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ.ಬಾಲಮಂದಿರದಲ್ಲಿದ್ದ ಈತ ಬಿಡುಗಡೆಯಾದ ನಂತರ ಪ್ರಾಪ್ತನಾಗಿ ನಂತರವೂ ತನ್ನ ಚಾಳಿ ಮುಂದುವರೆಸಿದ್ದಾನೆ.ಇಬ್ಬರು ಸಹಚರರೊಂದಿಗೆ ಸೇರಿ ಏರ್ ಗನ್ ಬಳಸಿ ಕೃತ್ಯವೆಸಗಿದ್ದಾನೆ.ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು ಮತ್ತೋರ್ವ ಆರೋಪಿಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.ಡಿಸಿಪಿ ಗೀತಾ ಪ್ರಸನ್ನ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ…

Spread the love

Leave a Reply

Your email address will not be published.