ಹುಲಿ ಸೆರೆಗೆ ಕಾರ್ಯಾಚರಣೆ ಆರಂಭ…ದಸರಾ ಆನೆಗಳ ಮೂಲಕ ಕೂಂಬಿಂಗ್…ಎಸಿಎಫ್ ಪರಮೇಶ್ ನೇತೃತ್ವದಲ್ಲಿ ಆಪರೇಷನ್ ಟೈಗರ್…
- TV10 Kannada Exclusive
- August 2, 2022
- No Comment
- 144
ಹುಲಿ ಸೆರೆಗೆ ಕಾರ್ಯಾಚರಣೆ ಆರಂಭ…ದಸರಾ ಆನೆಗಳ ಮೂಲಕ ಕೂಂಬಿಂಗ್…ಎಸಿಎಫ್ ಪರಮೇಶ್ ನೇತೃತ್ವದಲ್ಲಿ ಆಪರೇಷನ್ ಟೈಗರ್…
ನಂಜನಗೂಡು,ಆಗಸ್ಟ್2,Tv10 ಕನ್ನಡ
ಕೊನೆಗೂ ಅರಣ್ಯಾಧಿಕಾರಿಗಳು ನರಭಕ್ಷಕ ವ್ಯಾಘ್ರನ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.ದನಗಾಹಿಯನ್ನ ಬಲಿ ಪಡೆದ ನರಭಕ್ಷಕನ ಸೆರೆ ಹಿಡಿಯಲು ಮುಂದಾಗದ ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದ ಹಾದನೂರು ಒಡೆಯನಪುರ ಗ್ರಾಮಸ್ಥರಿಗೆ ಸ್ಪಂದಿಸಿದ್ದಾರೆ.ಹಾದನೂರು ಒಡೆಯನಪುರ,ನಂಜದೇವರಬೆಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಕಾರ್ಯಾಚರಣೆ ನಡೆಯಲಿದೆ.ಎಸಿಎಫ್ ಪರಮೇಶ್ ನೇತೃತ್ವದಲ್ಲಿ ಕೂಂಬಿಂಗ್ ಆಪರೇಷನ್ ಆರಂಭವಾಗಿದೆ.ಸುಮಾರು 20 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.ದಸರಾದಲ್ಲಿ ಭಾಗವಹಿಸುವ ನಾಲ್ಕು ಆನೆಗಳನ್ನ ಆಪರೇಷನ್ ಟೈಗರ್ ಗೆ ಬಳಸಿಕೊಂಡಿದ್ದಾರೆ.ಹುಲಿಹೆಜ್ಜೆ ಗುರುತುಗಳ ಜಾಡನ್ನ ಹಿಡಿದು ಕಾರ್ಯಾಚರಣೆ ನಡೆಸಲಾಗುತ್ತಿದೆ.ಕೆಲವೆಡೆ ಸಿಸಿ ಕ್ಯಾಮರಾಗಳನ್ನ ಅಳವಡಿಸಲಾಗಿದೆ.ದನಗಾಹಿ ಪುಟ್ಟಸ್ವಾಮಿ ಗೌಡ ರನ್ನ ಬಲಿ ಪಡೆದ ಜಮೀನಿನ ಬಳಿ ಬೋನು ಇರಿಸಿದ್ದ ಅರಣ್ಯಾಧಿಕಾರಿಗಳು ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿರಲಿಲ್ಲ.ಹೀಗಾಗಿ ಗ್ರಾಮಸ್ಥರು ಭಯದ ವಾತಾವರಣದಲ್ಲಿದ್ದರು.ಮನೆಯಂದ ಹೊರಬರಲು ಹೆದರುತ್ತಿದ್ದರು.ಈ ಬಗ್ಗೆ Tv10 ಕನ್ನಡ ವಾಹಿನಿ ಗ್ರಾಮಸ್ಥರ ಆತಂಕವನ್ನ ಸುದ್ದಿ ಮಾಡಿತ್ತು.ಕೂಡಲೇ ಎಚ್ಚೆತ್ತ ಅರಣ್ಯಾಧಿಕಾರಿಗಳು ಆಪರೇಷನ್ ಟೈಗರ್ ಆರಂಭಿಸಿದ್ದಾರೆ…