ವಿಶ್ವವಿಖ್ಯಾತ ದಸರಾ ಮಹೋತ್ಸವ…ಗಜಪಯಣಕ್ಕೆ ಕ್ಷಣಗಣನೆ…ಅಭಿಮನ್ಯು ನೇತೃತ್ವದ ತಂಡ ಸಜ್ಜು…
- TV10 Kannada Exclusive
- August 7, 2022
- No Comment
- 117
ವಿಶ್ವವಿಖ್ಯಾತ ದಸರಾ ಮಹೋತ್ಸವ…ಗಜಪಯಣಕ್ಕೆ ಕ್ಷಣಗಣನೆ…ಅಭಿಮನ್ಯು ನೇತೃತ್ವದ ತಂಡ ಸಜ್ಜು…
ಮೈಸೂರು,ಆಗಸ್ಟ್7,Tv10 ಕನ್ನಡ
ಸಾಂಸ್ಕೃತಿಕ ನಗರಿ ಮೈಸೂರು ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿದೆ.ಎರಡು ವರ್ಷಗಳ ನಂತರ ವಿಜೃಂಬಣೆ ದಸರಾ ನೋಡುವ ಅವಕಾಶ ನಾಡಿನ ಜನರಿಗೆ ಬಂದಿದೆ.ಕೊರೊನಾ ಹಿನ್ನಲೆ ಕಳೆದ ಎರಡು ವರ್ಷ ಸರಳ ಸಂಪ್ರದಾಯಕ ದಸರಾ ಗೆ ಒತ್ತು ನೀಡಲಾಗಿತ್ತು.ಈ ಬಾರಿ ಅದ್ದೂರಿ ದಸರಾ ಆಚರಣೆ ನಡೆಯಲಿದೆ. ದಸರಾ ಮಹೋತ್ಸವದ ಮೊದಲ ಹಂತದ ಗಜಪಯಣಕ್ಕೆ ಕ್ಷಣಗಣನೆ ಆರಂಭವಾಗಿದೆ.ಅಭಿಮನ್ಯು ನೇತೃತ್ವದ 14 ಆನೆಗಳ ತಂಡ ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿದೆ.
ಮೈಸೂರಿನ ನಾಗರಹೊಳೆಯ ಹೆಬ್ಬಾಗಿಲು ವೀರನಹೊಸಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಟಿ.ಸೋಮಶೇಖರ್ ಅವರು ಗಜಪಯಣಕ್ಕೆ ಇಂದು ಬೆಳಿಗ್ಗೆ 8.30 ಗಂಟೆಗೆ ಚಾಲನೆ ನೀಡಲಿದ್ದಾರೆ.
ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿದೆ.
ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕ್ಯಾಪ್ಟನ್ ಅಭಿಮನ್ಯು ಜೊತೆಗೆ
ಭೀಮ, ಗೋಪಾಲ ಸ್ವಾಮಿ, ಅರ್ಜುನ, ವಿಕ್ರಮ, ಧನಂಜಯ, ಗೋಪಿ, ಮಹೇಂದ್ರ,ಕಾವೇರಿ, ಶ್ರೀರಾಮ, ವಿಜಯ, ಚೈತ್ರ, ಲಕ್ಷ್ಮಿ, ತಮ್ಮ ಕರ್ತವ್ಯ ನಿರ್ವಹಿಸಲಿವೆ.
ಎರಡನೇ ಹಂತದಲ್ಲಿ ಐದು ಆನೆಗಳು ಮೈಸೂರಿಗೆ ಆಗಮಿಸಲಿವೆ…