ಅರಣ್ಯಾಧಿಕಾರಿಗೆ ಧಂಕಿ ಪ್ರಕರಣ…ಶಾಸಕ ಸುರೇಶ್ ಗೌಡ ಸೇರಿದಂತೆ 10 ಮಂದಿ ವಿರುದ್ದ ಪ್ರಕರಣ ದಾಖಲು…
- TV10 Kannada Exclusive
- August 7, 2022
- No Comment
- 171
ಅರಣ್ಯಾಧಿಕಾರಿಗೆ ಧಂಕಿ ಪ್ರಕರಣ…ಶಾಸಕ ಸುರೇಶ್ ಗೌಡ ಸೇರಿದಂತೆ 10 ಮಂದಿ ವಿರುದ್ದ ಪ್ರಕರಣ ದಾಖಲು…

ನಾಗಮಂಗಲ,ಆಗಸ್ಟ್7,Tv10 ಕನ್ನಡ
ಜಮೀನು ರಕ್ಷಣೆ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯಾಧಿಕಾರಿಗಳಿಗೆ ಧಂಕಿ ಹಾಕಿದ ವಿಚಾರಕ್ಕೆ ಸಂಭಂಧಿಸಿದಂತೆ ನಾಗಮಂಗಲ ಶಾಸಕ ಸುರೇಶ್ ಗೌಡ ಸೇರಿದಂತೆ ಹತ್ತು ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅರಣ್ಯಾಧಿಕಾರಿ ಸತೀಶ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ.ಸರ್ಕಾರಿ ಜಾಗದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಟ್ರೆಂಚ್ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ವೇಳೆ ಕೆಲವು ವ್ಯಕ್ತಿಗಳ ಜೊತೆ ಬಂದ ಶಾಸಕ ಸುರೇಶ್ ಗೌಡ ಅರಣ್ಯಾಧಿಕಾರಿಗಳಿಗೆ ಧಂಕಿ ಹಾಕಿ ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದರು.ಜೀಪ್ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ್ದರು.ಈ ಹಿನ್ನಲೆ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಕ್ಷಣೆ ಕೋರಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅರಣ್ಯಾಧಿಕಾರಿ ಸತೀಶ್ ರವರು ಶಾಸಕ ಸುರೇಶ್ ಗೌಡ ಹಾಗೂ 10 ಮಂದಿ ಮೇಲೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…




