• August 18, 2022

ಟ್ರಾನ್ಫರ್ ಸರ್ಟಿಫಿಕೇಟ್ ಗೆ 8 ಸಾವಿರ ಡಿಮ್ಯಾಂಡ್…ಪೋಷಕ ಹೈರಾಣು…ನ್ಯಾಯಕ್ಕಾಗಿ ಬಿಇಓ ಕಚೇರಿ ಮುಂದೆ ಕುಳಿತ ತಂದೆ…

ಟ್ರಾನ್ಫರ್ ಸರ್ಟಿಫಿಕೇಟ್ ಗೆ 8 ಸಾವಿರ ಡಿಮ್ಯಾಂಡ್…ಪೋಷಕ ಹೈರಾಣು…ನ್ಯಾಯಕ್ಕಾಗಿ ಬಿಇಓ ಕಚೇರಿ ಮುಂದೆ ಕುಳಿತ ತಂದೆ…

ಟ್ರಾನ್ಫರ್ ಸರ್ಟಿಫಿಕೇಟ್ ಗೆ 8 ಸಾವಿರ ಡಿಮ್ಯಾಂಡ್…ಪೋಷಕ ಹೈರಾಣು…ನ್ಯಾಯಕ್ಕಾಗಿ ಬಿಇಓ ಕಚೇರಿ ಮುಂದೆ ಕುಳಿತ ತಂದೆ…

ನಂಜನಗೂಡು,ಆಗಸ್ಟ್18,Tv10 ಕನ್ನಡ
ಶಾಲೆ ವರ್ಗಾವಣೆ ಪತ್ರ(TC) ನೀಡಲು ಖಾಸಗಿ ಶಾಲೆ 8 ಸಾವಿರಕ್ಕೆ ಬೇಡಿಕೆ ಇಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ.ಖಾಸಗಿ ಶಾಲೆಯ ಸುಲಿಗೆ ಕ್ರಮಕ್ಕೆ ಪೋಷಕ ಹೈರಾಣರಾಗಿದ್ದಾರೆ.ನ್ಯಾಯಕ್ಕಾಗಿ ಬಿಇಓ ಕಚೇರಿ ಬಾಗಿಲ ಬಳಿ ಕುಳಿತಿದ್ದಾರೆ.

ನಂಜನಗೂಡು ತಾಲೂಕಿನ ತಾಂಡವಪುರದ ಜಾಫರ್ ಎಂಬುವರಿಗೆ ಇಂತಹ ಕಹಿ ಅನುಭವ ಆಗಿದೆ.ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಜಾಫರ್ ಮೂರು ಮಕ್ಕಳ ತಂದೆ.ತಮ್ಮ ಮೂರು ಮಕ್ಕಳನ್ನ ತಾಂಡವಪುರದ ಕ್ರೈಸ್ಟ್ ಶಾಲೆಯಲ್ಲಿ ಓದಿಸುತ್ತಿದ್ದರು.ಕಾರಣಾಂತರದಿಂದ ಮೂರು ಮಕ್ಕಳನ್ನ ಕ್ರೈಸ್ಟ್ ಶಾಲೆಯಿಂದ ನಂಜನಗೂಡಿನ ಯೂನಿಟಿ ಆಂಗ್ಲ ಶಾಲೆಗೆ ದಾಖಲಿಸಿದ್ದಾರೆ.ಈ ಹಿನ್ನಲೆ ಕ್ರೈಸ್ಟ್ ಶಾಲೆಯಿಂದ ವರ್ಗಾವಣೆ ಪತ್ರಕ್ಕಾಗಿ ಮನವಿ ಮಾಡಿದ್ದಾರೆ.ವರ್ಗಾವಣೆ ಪತ್ರ ನೀಡಲು ತಲಾ 8 ಸಾವಿರದಂತೆ ಮೂರು ಮಕ್ಕಳಿಗೆ 24 ಸಾವಿರ ಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ.ಶುಲ್ಕದ ನೆಪದಲ್ಲಿ ಅನಗತ್ಯವಾಗಿ ಹಣ ಸುಲಿಗೆ ಮಾಡುತ್ತಿದ್ದಾರೆಂದು ಪೋಷಕ ಜಾಫರ್ ಆರೋಪಿಸಿದ್ದಾರೆ.ನಿಯಮಾನುಸಾರದಂತೆ ಯೂನಿಟಿ ಆಂಗ್ಲ ಮಾಧ್ಯಮ ಶಾಲೆಯಿಂದ ವರ್ಗಾವಣೆ ಪತ್ರ ನೀಡುವಂತೆ ಪತ್ರ ಬರೆದರೂ ಕ್ರೈಸ್ಟ್ ಶಾಲೆಯಿಂದ ಮನ್ನಣೆ ನೀಡಿಲ್ಲ.ಕ್ರೈಸ್ಟ್ ಶಾಲೆಯ ವರ್ತನೆ ಖಂಡಿಸಿ ನ್ಯಾಯಕ್ಕಾಗಿ ಜಾಫರ್ ಬಿಇಓ ಮೊರೆ ಹೋಗಿದ್ದಾರೆ.ಬಿಇಓ ಕಚೇರಿ ಮುಂದೆ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ…

Spread the love

Leave a Reply

Your email address will not be published.