ಜಲಾವೃತವಾದ ಕಾಲೇಜು ಆವರಣ…ವಿಧ್ಯಾರ್ಥಿಗಳ ಪರದಾಟ…ಕಾಂಪೌಂಡ್ ಹತ್ತಿ ಕಾಲೇಜು ಪ್ರವೇಶ…
- TV10 Kannada Exclusive
- September 1, 2022
- No Comment
- 92
ಜಲಾವೃತವಾದ ಕಾಲೇಜು ಆವರಣ…ವಿಧ್ಯಾರ್ಥಿಗಳ ಪರದಾಟ…ಕಾಂಪೌಂಡ್ ಹತ್ತಿ ಕಾಲೇಜು ಪ್ರವೇಶ…
ನಂಜನಗೂಡು,ಸೆ1,Tv10 ಕನ್ನಡ
ಮೈಸೂರಿನಲ್ಲಿ ಮಳೆ ಅವಾಂತರಗಳು ಹೆಚ್ಚಾಗುತ್ತಿದೆ.ನಿರಂತರ ಮಳೆಯಿಂದಾಗಿ ನಂಜನಗೂಡಿನ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣ
ಕೆರೆಯಂತಾಗಿದೆ.
ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ವಿಧ್ಯಾರ್ಥಿಗಳು ಹಿಡಿಶಾಪ ಹಾಕಿದ್ದಾರೆ.
ಕಾಲೇಜಿಗೆ ಹೋಗಲಾಗದೆ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ.
ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದುಃಸ್ಥಿತಿ ಇದಾಗಿದೆ.
ಸಾಮಾನ್ಯ ಮಳೆಗೆ ಕಾಲೇಜು ಆವರಣ ಸಂಪೂರ್ಣ ಕೆಸರು ಗದ್ದೆಯಾಗುತ್ತಧ.
ಕಾಲೇಜು ಜೊತೆಗೆ ಸರ್ಕಾರಿ ಪ್ರೌಢಶಾಲೆಯು ಇದ್ದು ಶಾಲೆಗೂ ತೆರಳಲಾಗದೆ ವಿಧ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಶಾಲಾ ಕಾಲೇಜಿಗೆ ಹೋಗಲು ಉಪನ್ಯಾಸಕರು, ಶಿಕ್ಷಕರು ಮತ್ತು ಮಕ್ಕಳು ಕಾಂಪೌಂಡ್ ಹಾರಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಲೇಜು ಆವರಣ ದುರಸ್ತಿಗೊಳಿಸುವಂತೆ ಮನವಿ ಮಾಡಿದ್ರು ಪ್ರಯೋಜನವಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆಂದು ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಅಪಾಯವಾದರೆ ಯಾರು ಜವಾಬ್ದಾರರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾಲೇಜಿನ ಕಾಂಪೌಂಡ್ ಮುಂಭಾಗದಲ್ಲಿ ಚರಂಡಿ ನಿರ್ಮಿಸಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕಂದು ಪೋಷಕರು ಮತ್ತು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ…