50 ಕೆ.ಜಿ.ತೂಕದ ಬೂದುಬಾಳೆ ಗೊನೆ ಫಲ…ದಾಖಲೆ ಬೆಳೆ ಬೆಳೆದ ಹುಣಸೂರು ನಿವಾಸಿ…
- TV10 Kannada Exclusive
- September 4, 2022
- No Comment
- 177
50 ಕೆ.ಜಿ.ತೂಕದ ಬೂದುಬಾಳೆ ಗೊನೆ ಫಲ…ದಾಖಲೆ ಬೆಳೆ ಬೆಳೆದ ಹುಣಸೂರು ನಿವಾಸಿ…
ಹುಣಸೂರು,ಸೆ4,Tv10 ಕನ್ನಡ
ಸಹಜವಾಗಿ 15 ರಿಂದ 20 ಕೆ.ಜಿ.ತೂಕದ ಬೂದು ಬಾಳೆ ಗೊನೆ ನೋಡಿದ್ದೇವೆ.ಆದ್ರೆ ಹುಣಸೂರಿನ ಬಿಳಿಕೆರೆಯ ಹುಸೇನ್ ಪುರ ಗ್ರಾಮದ ಮಂಜುನಾಥ್ ಎಂಬುವರ ಬಾಳೆ ತೋಟದಲ್ಲಿ ಬೆಳೆದ ಬೂದುಬಾಳೆ 50 ಕೆ.ಜಿ.ಗೂ ಹೆಚ್ಚು ತೂಕ ಹೊಂದಿದೆ.ಸಹಜವಾಗಿ ಬೂದುಬಾಳೆ ಗೊನೆಯಲ್ಕಿ 40 ರಿಂದ 50 ಹಣ್ಣು ಫಲ ನೀಡುತ್ತದೆ.ಆದ್ರೆ ಈ ಗೊನೆಯಲ್ಲಿ 120 ಕ್ಕೂ ಹೆಚ್ಚು ಹಣ್ಣುಗಳು ಇವೆ.ಮೈಸೂರು ಸಿಟಿ ಸರ್ವೆಯರ್ ಆಗಿರುವ ಮಂಜುನಾಥ್ ರವರಿಗೆ ಸೇರಿದ ಬಾಳೆ ತೋಟದಲ್ಲಿ ಇಂತಹ ಗೊನೆ ಬೆಳೆದಿದೆ.ಹೆಚ್ಚಿನ ಭಾರದಿಂದಾಗಿ ಗಿಡದಿಂದ ಗೊನೆ ಕಳಚಿ ಬಿದ್ದಿದೆ.ಆದ್ರೂ ಹಣ್ಣುಗಳಿಗೆ ಯಾವುದೇ ಹಾನಿ ಆಗಿಲ್ಲ. ಗೊನೆಯನ್ನ ಪ್ರದರ್ಶಿಸಿದ ಸರ್ವೇಯರ್ ಮಂಜುನಾಥ್ ಇದೊಂದು ದಾಖಲೆ ಬೆಳೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ…