- September 21, 2022
ಗುಂಡಿಗಳಿಂದ ತುಂಬಿದ ರಸ್ತೆ…ಬಿಜೆಪಿ ವಿರುದ್ದ ಆಕ್ರೋಷ…ರಾಜ್ಯ ಹಿಂದುಳಿದ ವ್ಗರದ ವೇದಿಕೆಯಿಂದ ಪ್ರತಿಭಟನೆ…

ಗುಂಡಿಗಳಿಂದ ತುಂಬಿದ ರಸ್ತೆ…ಬಿಜೆಪಿ ವಿರುದ್ದ ಆಕ್ರೋಷ…ರಾಜ್ಯ ಹಿಂದುಳಿದ ವ್ಗರದ ವೇದಿಕೆಯಿಂದ ಪ್ರತಿಭಟನೆ…
ಮೈಸೂರು,ಸೆ17,Tv10 ಕನ್ನಡ
ಗುಂಡಿ ಮುಚ್ಚದ ಮೋದಿಗೆ ಹ್ಯಾಪಿ ಬರ್ತಡೇ, ಹ್ಯಾಪಿ ಬರ್ತಡೇ ಎಂದು ಘೋಷಣೆ ಕೂಗಿ ರಾಜ್ಯ ಹಿಂದುಳಿದ ಜಾಗೃತ ವೇದಿಕೆ ಕಾರ್ಯಕರ್ತರು ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಮೋದಿ ಜನ್ಮ ದಿನ ಅಂಗವಾಗಿ ಮೈಸೂರಿನ ಗುಂಡಿ ಬಿದ್ದ ರಸ್ತೆಗಳಿಗೆ ಬಿಜೆಪಿ ಜನಸ್ಪಂದನಾ ರಸ್ತೆ ಎಂದು ನಾಮಕರಣ ಮಾಡಿ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಗೆ ಮರು ನಾಮಕರಣ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ರಾಜ್ಯ ಅತೀ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಅಣುಕು ಧರಣಿ ನಡೆಯಿತು.
ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು…