
ಕಬಿನಿ ಹಿನ್ನೀರಿನ ವ್ಯಾಪ್ತಿಯಲ್ಲಿ ಜ್ಯೂ.ಭೋಗೇಶ್ವರನ ಹವಾ…ಪ್ರವಾಸಿಗರಿಗೆ ಮುದ ನೀಡುತ್ತಿರುವ ನೀಳದಂತಕಾಯ ಗಜರಾಜ…
- TV10 Kannada Exclusive
- September 21, 2022
- No Comment
- 168
ಕಬಿನಿ ಹಿನ್ನೀರಿನ ವ್ಯಾಪ್ತಿಯಲ್ಲಿ ಜ್ಯೂ.ಭೋಗೇಶ್ವರನ ಹವಾ…ಪ್ರವಾಸಿಗರಿಗೆ ಮುದ ನೀಡುತ್ತಿರುವ ನೀಳದಂತಕಾಯ ಗಜರಾಜ…
ಮೈಸೂರು,ಸೆ21,Tv10 ಕನ್ನಡ
ಕಬಿನಿ ಹಿನ್ನೀರಿನ ವ್ಯಾಪ್ತಿಯಲ್ಲಿ ಇದೀಗ ಜ್ಯೂ.ಭೋಗೇಶ್ವರನ ಹವಾ ಕಾಣಿಸುತ್ತಿದೆ.ನೀಳದಂತಕಾಯನಾಗಿರುವ ಜ್ಯೂ.ಭೋಗೇಶ್ವರ
ಸಫಾರಿ ವೇಳೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾನೆ.ಬಹುತೇಕ ನೆಲವನ್ನ ತಾಕುವಂತೆ ಬೆಳೆದ ದಂತ ಹೊಂದಿರುವ ಗಜರಾಜ ಸಫಾರಿಗರಿಗೆ ಮುದ ನೀಡುತ್ತಿದ್ದಾನೆ.ಹೆಚ್.ಡಿ.ಕೋಟೆ ತಾಲೂಕು
ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಸಫಾರಿ ವೇಳೆ ಪ್ರವಾಸಿಗರಿಗೆ ಕಾಣಿಸುತ್ತಿದ್ದಾನೆ.
ಈ ಹಿಂದೆ ಇದೇ ರೀತಿಯ ದಂತವುಳ್ಳ ಭೋಗೇಶ್ವರ ಆನೆ ಸಫಾರಿಗರಿಗೆ ಕಾಣಿಸಿಕೊಳ್ಳುತ್ತಿತ್ತು. ಭೋಗೇಶ್ವರ ಆನೆ ನಿಧನದ ನಂತರ ಜ್ಯೂ.ಭೋಗೇಶ್ವರ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿದ್ದಾನೆ.
ಪ್ರವಾಸಿಗರ ಕ್ಯಾಮೆರಾದಲ್ಲಿ ವಿಶೇಷ ಆನೆ ಸೆರೆಯಾಗಿದೆ…