PFI ಮಾಜಿ ಅಧ್ಯಕ್ಷ ಕಲೀಮುಲ್ಲಾ ಬಂಧನ ಹಿನ್ನಲೆ…ಸಿಸಿಬಿ ಕಚೇರಿಗೆ ಬೆಂಬಲಿಗರ ಮುತ್ತಿಗೆ…
- TV10 Kannada Exclusive
- September 24, 2022
- No Comment
- 175
PFI ಮಾಜಿ ಅಧ್ಯಕ್ಷ ಕಲೀಮುಲ್ಲಾ ಬಂಧನ ಹಿನ್ನಲೆ…ಸಿಸಿಬಿ ಕಚೇರಿಗೆ ಬೆಂಬಲಿಗರ ಮುತ್ತಿಗೆ…
ಮೈಸೂರು,ಸೆ22,Tv10 ಕನ್ನಡ
ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾ ಬಂಧನ ಹಿನ್ನೆಲೆ ಬೆಂಬಲಿಗರು
ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕಲೀಮುಲ್ಲಾ ಅವರನ್ನು ಎನ್.ಐ.ಎ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಸಿಸಿಬಿ ಕಚೇರಿಗೆ ಮುಂದೆ ಜಮಾಯಿಸಿದ್ದಾರೆ.
ಪೊಲೀಸರ ವಿರುದ್ದ ಘೋಷಣೆಗಳನ್ನು ಕೂಗಿದ್ದಾರೆ.
ಕಲೀಮುಲ್ಲಾ ಅವರನ್ನು ಪೊಲೀಸ್ ಭದ್ರತೆಯಲ್ಲಿ ಜೀಪಿನಲ್ಲಿ ಪೊಲೀಸರು ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಕರೆದೊಯ್ಯುವಾಗ ಪೊಲೀಸ್ ಜೀಪನ್ನು ಅಡ್ಡಹಾಕಿದ್ದಾರೆ.
ಪೊಲೀಸ್ ಬಿಗಿಭದ್ರತೆಯಲ್ಲಿ ಬೆಂಗಳೂರಿನತ್ತ ಕರದೊಯ್ಯಲಾಗಿದೆ.
ಬೆಂಗಳೂರಿನಲ್ಲಿರೋ ಎನ್.ಐ.ಎ ಕಚೇರಿ ಮುಂದೆ ಪ್ರತಿಭಟನೆಗೆ ಕೆಲ ಕಾರ್ಯಕರ್ತರು ತೆರಳಿದ್ದಾರೆ…