ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…ಕೊಲೆ ಪ್ರಕರಣ ದಾಖಲು…ಗಂಡ,ಮಾವ ಅರೆಸ್ಟ್…ತಡವಾಗಿ ಬೆಳಕಿಗೆ ಬಂದ ಪ್ರಕರಣ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…ಕೊಲೆ ಪ್ರಕರಣ ದಾಖಲು…ಗಂಡ,ಮಾವ ಅರೆಸ್ಟ್…ತಡವಾಗಿ ಬೆಳಕಿಗೆ ಬಂದ ಪ್ರಕರಣ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…ಕೊಲೆ ಪ್ರಕರಣ ದಾಖಲು…ಗಂಡ,ಮಾವ ಅರೆಸ್ಟ್…ತಡವಾಗಿ ಬೆಳಕಿಗೆ ಬಂದ ಪ್ರಕರಣ…

ನಂಜನಗೂಡು,ಸೆ24,Tv10 ಕನ್ನಡ
ವರದಕ್ಷಿಣೆ ದಾಹಕ್ಕೆ ಗೃಹಿಣಿ ಬಲಿಯಾದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ.ಘಟನೆಗೆ ಸಂಭಂಧಿಸಿದಂತೆ ಪತಿ ಸೇರಿದಂತೆ 5 ಮಂದಿ ವಿರುದ್ದ FIR ದಾಖಲಾಗಿದೆ.ಹುಲ್ಲಹಳ್ಳಿ ಠಾಣೆ ಪೊಲೀಸರು ಗಂಡ ಹಾಗೂ ಮಾವನನ್ನ ಅರೆಸ್ಟ್ ಮಾಡಿದ್ದಾರೆ.ಘಟನೆ ನಡೆದು 22 ದಿನಗಳ ನಂತರ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮಮತಾ(20) ಮೃತ ದುರ್ದೈವಿ.ಪತಿ ಪ್ರೇಮಚಂದ್ರ ನಾಯಕ ಹಾಗೂ ಮಾವ ಶಂಕರನಾಯಕ ಇದೀಗ ಪೊಲೀಸರ ಅತಿಥಿ.2021 ಮಾರ್ಚ್ ನಲ್ಲಿ ಮಮತಾ ಹಾಗೂ ಪ್ರೇಮಚಂದ್ರನಾಯಕ ವಿವಾಹ ಜರುಗಿತ್ತು.ಮದುವೆ ಸಂಧರ್ಭದಲ್ಲಿ 30 ಗ್ರಾಂ ಚಿನ್ನ 80 ಸಾವಿರ ನಗದು ವರದಕ್ಷಿಣೆಯಾಗಿ ನೀಡಿ ಅದ್ದೂರಿಯಿಂದ ಮದುವೆ ಮಾಡಿಕೊಡಲಾಗಿತ್ತು.ನಂತರದ ದಿನಗಳಲ್ಲಿ ವರದಕ್ಷಿಣೆ ವಿಚಾರದಲ್ಲಿ ಕ್ಯಾತೆ ತೆಗೆದ ಅಳೀಮಯ್ಯ ಮಮತಾ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದ.ಇದಕ್ಕೆ ಮನೆಯವರ ಕುಮ್ಮಕ್ಕೂ ಇತ್ತು.ಗರ್ಭಿಣಿ ಆಗಿದ್ದ ಸಂಧರ್ಭದಲ್ಲಿ ಗರ್ಭಪಾತ ಮಾಡಿಸಿ ಅಟ್ಟಹಾಸ ಮೆರೆದಿದ್ರು.ಹೀಗಿದ್ದೂ ಕಿರುಕುಳ ನೀಡುತ್ತಿದ್ದ ಕಾರಣ ಮಗಳನ್ನ ಹೆತ್ತವರು ಮನೆಗೆ ಕರೆತಂದಿದ್ರು.ಈ ಮಧ್ಯೆ ತನ್ನ ತಪ್ಪಿನ ಅರಿವಾಗಿದೆ ಎಂದು ಕಾರಣ ನೀಡಿದ ಅಳೀಮಯ್ಯ ಅತ್ತೆ ಮನೆ ಸೇರಿಕೊಂಡ.ಕಳೆದ ತಿಂಗಳು ಗೌರಿಗಣೇಶ ಹಬ್ಬದ ದಿನ ಮಮತ ನೇಣಿನ ಕುಣಿಕೆಯಲ್ಲಿ ಕಾಣಿಸಿಕೊಂಡಳು.ಮಮತ ಸಾವನ್ನಪ್ಪಿದ ಮರುಕ್ಷಣವೇ ಪ್ರೇಮಚಂದ್ರನಾಯಕ್ ಎಸ್ಕೇಪ್ ಆದ.ಮಗಳನ್ನ ಪತಿ ಪ್ರೇಮಚಂದ್ರನಾಯಕ ಕೊಲೆ ಮಾಡಿದ್ದಾನೆ.ಕೃತ್ಯಕ್ಕೆ ಮನೆಯವರು ಕುಮ್ಮಕ್ಕು ನೀಡಿದ್ದಾರೆಂದು ಮಮತಾ ತಾಯಿ ಭಾಗ್ಯ ತಡವಾಗಿ ಪ್ರಕರಣ ದಾಖಲಿಸಿದ್ದಾರೆ.ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರೇಮನಾಯಕ,ಯಶೋಧ,ಚಿನ್ನ,ಶಂಕರನಾಯಕ,ಅನುಜ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ…

Spread the love

Related post

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ.. ಮೈಸೂರು,ಅ15,Tv10 ಕನ್ನಡ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನಲೆ ಕಾಮುಕನಿಗೆ ಶಿಕ್ಷೆ ಪ್ರಕಟವಾಗಿದೆ.ಮೈಸೂರು…

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್ ಮೈಸೂರು,ಅ13,Tv10 ಕನ್ನಡ ದಸರಾ ವೇಳೆ ಅನಾಹುತ ಸೃಷ್ಠಿಸುವುದಾಗಿ ಅನಾಮಧೇಯ ವ್ಯಕ್ತಿ ಬೆದರಿಕೆ ಸಂದೇಶ ಪೋಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಈ…
ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…

Leave a Reply

Your email address will not be published. Required fields are marked *