ದಸರಾ ಉದ್ಘಾಟನೆಗೆ ಕ್ಷಣಗಣನೆ…ರಾಷ್ಟ್ರಪತಿಗಳಿಂದ ಚಾಲನೆ…

ದಸರಾ ಉದ್ಘಾಟನೆಗೆ ಕ್ಷಣಗಣನೆ…ರಾಷ್ಟ್ರಪತಿಗಳಿಂದ ಚಾಲನೆ…

  • Mysore
  • September 26, 2022
  • No Comment
  • 148

ದಸರಾ ಉದ್ಘಾಟನೆಗೆ ಕ್ಷಣಗಣನೆ…ರಾಷ್ಟ್ರಪತಿಗಳಿಂದ ಚಾಲನೆ…

ಮೈಸೂರು,ಸೆ26,Tv10 ಕನ್ನಡ
ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.
ಇಂದು ದೇಶದ ಮೊದಲ ಪ್ರಜೆಯಿಂದ ದಸರಾ ಉದ್ಘಾಟನೆಯಾಗಲಿದೆ.ಸಾಂಸ್ಕೃತಿಕ ರಾಜಧಾನಿಗೆ ರಾಷಗಟ್ರಪತಿಗಳು ಆಗಮಿಸಲಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ರಾಷ್ಟ್ರಪತಿಗಳಿಗೆ ಅದ್ದೂರಿ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ.
ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.
ಇಂದು ಬೆಳಗ್ಗೆ 9:45 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 9:45 ರಿಂದ 10:05 ರೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ದಸರಾಗೆ ಚಾಲನೆ ದೊರೆಯಲಿದೆ.
ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ರಾಷ್ಟ್ರಪತಿಗಳು ದಸರಾ ಉದ್ಘಾಟನೆ ಮಾಡಲಿದ್ದಾರೆ.
ದಸರಾ ಉದ್ಘಾಟನೆಗೆ ಸಾಕ್ಷಿಯಾಗಲು ಎರಡೂ ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 6.15ಕ್ಕೆ ವಿಶೇಷ ವಿಮಾನದಲ್ಲಿ ದೆಹಲಿಯಿಂದ ಮೈಸೂರಿಗೆ ಆಗಮಿಸುತ್ತಿರುವ ರಾಷ್ಟ್ರಪತಿ
ಬೆಳಗ್ಗೆ 9 ಗಂಟೆಗೆ ಮಂಡಕಳ್ಳಿ ಏರ್​ಪೋರ್ಟ್​​ಗೆ ತಲುಪಲಿದ್ದಾರೆ.
ಮಂಡಕಹಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ನಂತರ ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ರಾಷ್ಟ್ರಪತಿಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಯಿ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ.
ದಸರಾ ಉದ್ಘಾಟನೆ ಬಳಿಕ ಚಾಮುಂಡಿಬೆಟ್ಟದಿಂದ ಹುಬ್ಬಳ್ಳಿಗೆ ತೆರಳಲಿದ್ದಾರೆ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *