
ಅಪರಿಚಿತ ವಾಹನ ಢಿಕ್ಕಿ ಚಿರತೆ ಮರಿ ಸಾವು…
- MysoreTV10 Kannada Exclusive
- September 27, 2022
- No Comment
- 161
ಅಪರಿಚಿತ ವಾಹನ ಢಿಕ್ಕಿ ಚಿರತೆ ಮರಿ ಸಾವು…


ಟಿ.ನರಸೀಪುರ,ಸೆ27,Tv10 ಕನ್ನಡ
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿ ಸಾವನ್ನಪ್ಪಿರುವ ಘಟನೆ
ತಿ.ನರಸೀಪುರ ತಾಲ್ಲೂಕಿನ ಹಸುವಟ್ಟಿ ಗ್ರಾಮದ ಬಳಿ ನಡೆದಿದೆ.
6 ತಿಂಗಳ ಹೆಣ್ಣು ಚಿರತೆ ಸಾವನ್ನಪ್ಪಿದೆ.
ಹಲವು ದಿನಗಳಿಂದ ಸೋಸಲೆ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ ಮರಿಯನ್ನ ಹಿಡುಯುವಂತೆ
ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು.
ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಚಿರತೆ ಮರಿ ಸಾವನ್ನಪ್ಪಿದೆ ಎಂಬ ಆರೋಪ ಮಾಡಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಶಶಿಧರ್ ಭೇಟಿ ನೀಡಿ
ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ…