ದೇಶದಲ್ಲಿ ಪಿಎಫ್ ಐ ಸಂಘಟನೆ ಬ್ಯಾನ್ ವಿಚಾರ…ನಿಷೇಧದ ಹಿಂದೆ ಸಾಕಷ್ಟು ಅನುಮಾನಗಳಿವೆ…ಶಾಸಕ ತನ್ವೀರ್ ಸೇಠ್…
- Mysore
- September 28, 2022
- No Comment
- 122
ದೇಶದಲ್ಲಿ ಪಿಎಫ್ ಐ ಸಂಘಟನೆ ಬ್ಯಾನ್ ವಿಚಾರ…ನಿಷೇಧದ ಹಿಂದೆ ಸಾಕಷ್ಟು ಅನುಮಾನಗಳಿವೆ…ಶಾಸಕ ತನ್ವೀರ್ ಸೇಠ್…
ಮೈಸೂರು,ಸೆ28,Tv10 ಕನ್ನಡ
ದೇಶದಲ್ಲಿ ಪಿಎಫ್‌ಐ ಸಂಘಟನೆ ಬ್ಯಾನ್ ವಿಚಾರಕ್ಕೆ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದಾರೆ.
ಇದು ರಾಜಕೀಯ ದುರುದ್ದೇಶದಿಂದ ಕೂಡಿದ್ದು ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಈ ರೀತಿ ಮಾಡಲಾಗಿದೆ.
ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಆರೋಪಿಸಿದರು.
ಬ್ಯಾನ್ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ.ಬ್ಯಾನ್ ಹಿಂದೆ ಸಾಕಷ್ಟು ಅನುಮಾನ ಇದೆ.ಕೇವಲ ನಾಲ್ಕು ದಿನದಲ್ಲಿ ತನಿಖೆ ಹಾಕಿ ಬ್ಯಾನ್ ಮಾಡಿದ್ರಾ ?
ವಿಚಾರಣೆ ಏನಾಯ್ತು ? ಅವರ ಬಳಿ ಏನು ಸಿಕ್ಕಿದೆ ? ಏನು ಸಂಚು ಗೊತ್ತಾಗಬೇಕಲ್ಲ ಎಂದು ಕಿಡಿ ಕಾರಿದರು. ಚುನಾಯಿತ ಪ್ರತಿನಿಧಿಗಳ ಹತ್ಯೆ ಆರೋಪ ವಿಚಾರ ಉಲ್ಲೇಖವಾಗಿದೆ.
ನನ್ನ ಮೇಲೆ ಹಲ್ಲೆ ನಡೆದ ಪ್ರಕರಣದಲ್ಲೂ ಈ ರೀತಿಯ ಯಾವುದೇ ವಿಚಾರ ತನಿಖಾ ವರದಿಯಲ್ಲಿ ಇಲ್ಲ.ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಹೇಳಿದ್ದಾರೆ.ನನ್ನ ಮೇಲೆ ಹಲ್ಲೆ ಮಾಡಿದ್ದರ ಹಿಂದೆ ಪಿಎಫ್‌ಐ ಎಸ್ ಡಿ ಪಿ ಐ ಇದೆ ಅಂತಾ ಸಿಎಂ ಹೇಳಿದ್ರು.ಆದರೆ ತನಿಖಾ ವರದಿಯಲ್ಲಿ ಇದು ಇಲ್ಲ.ನನ್ನ ಪ್ರಕರಣದ ತನಿಖೆ ನಡೆದಿರುವ ಬಗ್ಗೆ ನನಗೇ ತೃಪ್ತಿ ಇಲ್ಲ
ನನ್ನ ಮೇಲಿನ ಹಲ್ಲೆಗೆ, ನಾನು ನಿರಂತರವಾಗಿ ಗೆಲ್ಲುತ್ತಿರುವುದು ಕಾರಣ ಅಂತಾ ಹೇಳಿದ್ದಾರೆ.8 ಜನ ಆರೋಪಿಗಳು ಇದೇ ರೀತಿ ಹೇಳಿದ್ದಾರೆ.ಆದರೆ ಇಷ್ಟೇ ಅಲ್ಲ ಬೇರೆ ಬೇರೆ ವಿಚಾರವೂ ಇದೆ.
ಅದೆಲ್ಲವೂ ಕೂಲಂಕುಷವಾಗಿ ತನಿಖೆಯಾಗಬೇಕು.
ಹೀಗಾಗಿ ನನಗೆ ನ್ಯಾಯ ಸಿಕ್ಕಿಲ್ಲ.ನನ್ನ ಮೇಲಿನ ಹಲ್ಲೆ ಪ್ರಕರಣ ಮರು ತನಿಖೆಯಾಗಬೇಕು.
ಈ ಬಗ್ಗೆ ನಾನು ಅಧಿಕೃತವಾಗಿ ಮನವಿ ಮಾಡುತ್ತೇನೆ.ಮುಸ್ಲಿಂ ಸಂಘಟನೆ ಮಾತ್ರವಲ್ಲ, ಮುಸ್ಲಿಂರನ್ನು ಟಾರ್ಗೆಟ್ ಮಾಡಲಾಗುತ್ತಿದೆ.
ಪ್ರಚೋದನೆ, ಕೋಮು ಸಂಘರ್ಷ ಮಾಡುವ ಸಂಘಟನೆಗಳಿವೆ.
ದೇಶದ ಭದ್ರತೆ ಸುರಕ್ಷತೆ ವಿಚಾರ ಬಂದಾಗ ಈ ರೀತಿಯ ಎಲ್ಲಾ ಸಂಘಟನೆಗಳನ್ನು ಬ್ಯಾನ್ ಮಾಡಲಿ ಎಂದು ಶಾಸಕ ತನ್ವೀರ್ ಸೇಠ್ ಒತ್ತಾಯಿಸಿದ್ದಾರೆ…