
ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಗ್ರಾಮೀಣ ದಸರಾ ಉದ್ಘಾಟನೆ…
- MysoreTV10 Kannada Exclusive
- September 29, 2022
- No Comment
- 159
ಸಚಿವ ಎಸ್.ಟಿ.ಸೋಮಶೇಖರ್ ರವರಿಂದ ಗ್ರಾಮೀಣ ದಸರಾ ಉದ್ಘಾಟನೆ…

ಮೈಸೂರು,ಸೆ29,Tv10 ಕನ್ನಡ
ಮೈಸೂರಿನ ಜಯಪುರದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ದಸರಾವನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಶಾಸಕರಾದ ಜಿ.ಟಿ.ದೇವೇಗೌಡ ಅವರು ಉದ್ಘಾಟಿಸಿದರು.
ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಸಾಂಸ್ಕೃತಿಕ ಕಲಾತಂಡಗಳ ಜೊತೆಗೆ ಆನೆ, ಕುದುರೆ ಮೆರವಣಿಗೆ, ಕುಂಭಮೇಳ ಸ್ವಾಗತ ಕೋರಲಾಯಿತು.
ನಾಡಹಬ್ಬ ದಸರಾ ನಗರಕ್ಕಷ್ಟೇ ಸೀಮಿತವಾಗಬಾರದು ಗ್ರಾಮಗಳಲ್ಲಿ ಕೂಡ ನಡೆಸಲುವು ಉದ್ದೇಶಿಸಿರುವುದರಿಂದ ಜಯಪುರದಲ್ಲಿ ದಸರಾ ಸಂಭ್ರಮ ಮನೆ ಮಾಡಿತ್ತು. ಸಂಸದರಾದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಪಂ ಸಿಇಒ ಪೂರ್ಣಿಮಾ ಸೇರಿದಂತೆ ಹಲವು ಗಣ್ಯರು ಜೊತೆಯಲ್ಲಿದ್ದರು…