
ಮನೆ ಮನೆ ದಸರಾ…ಆಟೋಟಗಳಲ್ಲಿ ಭಾಗಿಯಾದ ಪೌರಕಾರ್ಮಿಕರು…
- Mysore
- September 30, 2022
- No Comment
- 165
ಮನೆ ಮನೆ ದಸರಾ…ಆಟೋಟಗಳಲ್ಲಿ ಭಾಗಿಯಾದ ಪೌರಕಾರ್ಮಿಕರು…
ಮೈಸೂರು,ಸೆ30,Tv10 ಕನ್ನಡ
ನಗರದ ಸ್ವಚ್ಛತೆಯಲ್ಲೇ ಮುಳುಗಯವ ಪೌರಕಾರ್ಮಿಕರೂ ಸಹ ದಸರಾ ಸಂಭ್ರಮದಲ್ಲಿ ಭಾಗಿಯಾದರು.ವಾರ್ಡ್ 55 ರಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆ ಮನೆ ದಸರಾ ಕಾರ್ಯಕ್ರಮದಲ್ಲಿ ಇಂದು ಆಯೋಜಿಸಲಾಗಿದ್ದ ಆಟೋಟ ಸ್ಪರ್ಧೆಗಳಲ್ಲಿ ಪೌರಕಾರ್ಮಿಕರು ಭಾಗಿಯಾಗಿ ಸಂಭ್ರಮಿಸಿದರು.55 ನೇ ವಾರ್ಡಿನ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರು ಚಾಲನೆ ನೀಡಿದರು.
ಮ್ಯೂಸಿಕಲ್ ಚೇರ್, ಲೆಮನ್ & ಸ್ಪೂನ್, ಬಕೆಟ್ ನಲ್ಲಿ ಬಾಲ್ ಹಾಕುವುದು, ಮಡಿಕೆ ಹೊಡೆಯುವುದು ಸ್ಪರ್ಧೆಗಳಲ್ಲಿ ಪೌರಕಾರ್ಮಿಕರು ಭಾಗವಹಿಸಿದರು.ಪೊರಕೆ ಹಿಡಿವ ಕೈಲಿ ಆಟದ ಪರಿಕರಗಳು ಕಂಡುಬಂತು.ಈ ವೇಳೆ ಮುಖಂಡರಾದ ಸಿ ಸಂದೀಪ್, ವಿ ಮಂಜುನಾಥ್, ಮಂಜುಳ, ಧರ್ಮೇಂದ್ರ, ಲಲಿತಾಂಬ, ದೇವೇಂದ್ರ ಸ್ವಾಮಿ, ಮಧು, ಬಸವರಾಜು, ರವಿ, ಶೇಖರ್ ಮುಂತಾದವರು ಹಾಜರಿದ್ದರು…