
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸಿದ ಆರೋಪ ಪ್ರಕರಣ…ತಹಸೀಲ್ದಾರ್ ಗಿರೀಶ್ ಸ್ಪಷ್ಟನೆ…
- TV10 Kannada Exclusive
- October 12, 2022
- No Comment
- 200
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸಿದ ಆರೋಪ ಪ್ರಕರಣ…ತಹಸೀಲ್ದಾರ್ ಗಿರೀಶ್ ಸ್ಪಷ್ಟನೆ…
ಮೈಸೂರು,ಅ12,Tv10 ಕನ್ನಡ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸುವ ಸಂಚು ಆರೋಪ ಹಿನ್ನಲೆ ತಹಸೀಲ್ದಾರ್ ಸೇರಿದಂತೆ ಐವರ ವಿರುದ್ದ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬಗ್ಗೆ ತಹಸೀಲ್ದಾರ್ ಗಿರೀಶ್ ಸ್ಪಷ್ಟನೆ ನೀಡಿದ್ದಾರೆ.
ವಿನಃಕಾರಣ ನನ್ನ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಪೌತಿ ಖಾತೆ ಪ್ರಕರಣದಲ್ಲಿ ತಹಸೀಲ್ದಾರ್ ಪಾತ್ರ ಇರುವುದಿಲ್ಲ.
ವಿಎ, ಆರ್‌ಐ ತಪ್ಪು ಮಾಡಿದ್ದರೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಬಹುದಿತ್ತು.ನಾನೇ ತಪ್ಪು ಮಾಡಿದ್ದರೆ ಜಿಲ್ಲಾಧಿಕಾರಿಗೆ ದೂರು ಕೊಡಬಹುದಿತ್ತು.ಆದರೆ ಯಾರ ಗಮನಕ್ಕೂ ತಾರದೆ ಎಫ್‌ಐಆರ್ ದಾಖಲು ಮಾಡಿದ್ದಾರೆ.
ನನ್ನ ಕೆಲಸ ಸಹಿಸಲಾರದೆ ಎಫ್‌ಐಆರ್‌ಗೆ ಹೆಸರು ಸೇರಿಸಿದ್ದಾರೆ.ಕಂದಾಯ ಇಲಾಖೆ ನಿಯಮಗಳ ಪ್ರಕಾರ ಪೊಲೀಸರು ಸಿವಿಲ್ ಪ್ರಕರಣಗಳಿಗೆ ಮಧ್ಯಪ್ರವೇಶ ಮಾಡುವಂತಿಲ್ಲ.ಯಾರ ಪ್ರಭಾವ ಕೆಲಸ ಮಾಡಿದೆ ಎಂಬುದನ್ನು ನಾನು ತಿಳಿದುಕೊಳ್ಳಬೇಕು.
ಇದುವರೆಗೂ ನನಗೆ ಪೊಲೀಸ್ ಇಲಾಖೆ ಅಥವಾ ಕೋರ್ಟ್‌ನಿಂದ ಮಾಹಿತಿ ಬಂದಿಲ್ಲ.
ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಎಂದು
ಮೈಸೂರು ತಹಸೀಲ್ದಾರ್ ಗಿರೀಶ್ ಸ್ಪಷ್ಟನೆ ನೀಡಿದ್ದಾರೆ…