ತಡರಾತ್ರಿ ಹಳೇ ಕಳ್ಳನ ಬರ್ಭರ ಹತ್ಯೆ…ಹಂತಕರ ಪತ್ತೆಗಾಗಿ ಜಾಲ ಬೀಸಿರುವ ಪೊಲೀಸರು…
- CrimeMysore
- October 13, 2022
- No Comment
- 240
ತಡರಾತ್ರಿ ಹಳೇ ಕಳ್ಳನ ಬರ್ಭರ ಹತ್ಯೆ…ಹಂತಕರ ಪತ್ತೆಗಾಗಿ ಜಾಲ ಬೀಸಿರುವ ಪೊಲೀಸರು…
ಮೈಸೂರು,ಅ13,Tv10 ಕನ್ನಡ
ನಿನ್ನೆ ತಡರಾತ್ರಿ ಮೈಸೂರಿನ ದೇವರಾಜ ಮಾರುಕಟ್ಟೆ ಬಳಿ ಹಳೇ ಕಳ್ಳ(MOB)ನ ಭೀಕರ ಹತ್ಯೆ ಆಗಿದೆ.ಬೋಟಿ ಬಜಾರ್ ನ ಹೋಟೆಲ್ ಒಂದರ ಬಳಿ ಹಂತಕರು ದಾಳಿ ನಡೆಸಿ ಕೊಂದು ಪರಾರಿಯಾಗಿದ್ದಾರೆ.ಘಟನೆ ನಡೆದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಆಗಿದ್ದು ಹಂತಕರ ಪತ್ತೆಗೆ ದೇವರಾಜ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.ಕುಂಬಾರ ಕೊಪ್ಪಲಿನ ನಿವಾಸಿ ಸುನಿಲ್.ಆ.ದತ್ತು (25) ಕೊಲೆಯಾದ ವ್ಯಕ್ತಿ.ಈತ ಹಲವಾರು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದನೆನ್ನಲಾಗಿದೆ.ದೇವರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಜಾಲ ಬೀಸಿದ್ದಾರೆ…