ಶ್ರೀರಂಗಪಟ್ಟಣ,ನ.14-ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಖಾಸಗಿ ಸಂಸ್ಥೆಯಾದ ಜುವಾರಿ ಡೆವಲರ‍್ಸ್ ಸರ್ಕಾರಿ ಬಂಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ತಡೆಗೋಡೆ ನಿರ್ಮಿಸಿಕೊಂಡಿರುವುದಾಗಿ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಜಂಟಿ ಸರ್ವೆ ನಡೆಸುವಂತೆ ಆದೇಶಿಸಿದ ಹಿನ್ನಲೆಯಲ್ಲಿ ಸೋಮವಾರ
- TV10 Kannada Exclusive
- November 15, 2022
- No Comment
- 187
ಶ್ರೀರಂಗಪಟ್ಟಣ,ನ.14-ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಖಾಸಗಿ ಸಂಸ್ಥೆಯಾದ ಜುವಾರಿ ಡೆವಲರ‍್ಸ್ ಸರ್ಕಾರಿ ಬಂಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ತಡೆಗೋಡೆ ನಿರ್ಮಿಸಿಕೊಂಡಿರುವುದಾಗಿ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಜಂಟಿ ಸರ್ವೆ ನಡೆಸುವಂತೆ ಆದೇಶಿಸಿದ ಹಿನ್ನಲೆಯಲ್ಲಿ ಸೋಮವಾರ ಸರ್ವೆ ಕಾರ್ಯ ನಡೆಸಿದರು.
ಗ್ರಾಮದ ಸರ್ವೆ ನಂ. ೧೦೫, ೧೦೬, ೧೦, ೧೧, ೧೦೪, ೧೨೩ರ ಮಧ್ಯೆ ಹಾದು ಹೋಗಿರುವ ಸರ್ಕಾರಿ ಬಂಡಿ ರಸ್ತೆಯನ್ನು ಜುವಾರಿ ಡೆವಲರ‍್ಸ್ನ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದಲ್ಲದೇ ತಡೆಗೋಡೆ ನಿರ್ಮಿಸಿ, ಸಾರ್ವಜನಿಕರು ತಿರುಗಾಡಲು ತೊಂದರೆ ನೀಡಿದ್ದಾರೆ. ಒತ್ತುವರಿ ಜಾಗವನ್ನು ತೆರವುಗಳಿಸಲು ಕೋರಿರುವ ಹಿನ್ನಲೆಯಲ್ಲಿ ಬೆಳಗೊಳ ಹೋಬಳಿ ರಾಜಸ್ವ ನಿರೀಕ್ಷಕರು ಮತ್ತು ತಾಲೂಕು ಭೂಮಾಪಕರು ಜಂಟಿ ಕಾರ್ಯಚರಣೆ ಮೂಲಕ ಅಳತೆ ಕಾರ್ಯ ನಡೆಸಿ ಒಂದು ವೇಳೆ ಒತ್ತುವರಿಯಾಗಿದ್ದಲ್ಲಿ ೧೦ ದಿನಗಳ ಒಳಗಾಗಿ ಒತ್ತುವರಿಯನ್ನು ತೆರವುಗೊಳಿಸಿ ಸ್ಥಳದ ಮಹಜರ್, ಸ್ಕೆಚ್ ಮತ್ತು ಜಿಪಿಆರ್‌ಎಸ್ ಭಾವಚಿತ್ರ ಸಹಿತ ವರದಿ ಸಲ್ಲಿಸುವಂತೆ ತಹಸೀಲ್ದಾರ್ ರವರ ಆದೇಶದ ಹಿನ್ನಲೆಯಲ್ಲಿ ತಾಲೂಕು ಸರ್ವೆಯರ್ ಬಸವರಾಜು, ಗ್ರಾಮ ಲೆಕ್ಕಿಗ ರಮೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಕಾರ್ಯ ನಡೆಸಿದರು.
ತಾಲೂಕು ಸರ್ವೆಯರ್ ಬಸವರಾಜು ಪ್ರತಿಕ್ರಿಯಿಸಿ, ಜುವಾರಿ ಡೆವಲರ‍್ಸ್ ಖಾಸಗಿ ಸಂಸ್ಥೆಯು ಕೆಆರ್‌ಎಸ್ ರಸ್ತೆಯಿಂದ ಹೊಂಗಹಳ್ಳಿಗೆ ಸಂಪರ್ಕ ಕಲ್ಪಿಸುವ ಸರ್ಕಾರಿ ಬಂಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದಲ್ಲದೇ ಎರಡು ಬದಿಗಳಲ್ಲಿ ತಡೆಗೋಡೆ ನಿರ್ಮಿಸಿ ಕಾನೂನು ಉಲ್ಲಂಘಟನೆ ಮಾಡಿರುವುದು ಕಂಡು ಬಂದಿದೆ. ಹಾಗೂ ಈ ರಸ್ತೆ ಮಧ್ಯ ಗಿಡಗಳನ್ನು ನೆಟ್ಟು, ಉದ್ಯಾನವನ ಮಾಡಿಕೊಂಡಿರುತ್ತಾರೆ, ಕೆಲವೆಡೆ ರಸ್ತೆ ಬಿಟ್ಟಿದ್ದು, ಈ ರಸ್ತೆ ಜುವಾರಿ ಡೆವಲರ‍್ಸ್ ಸಂಸ್ಥೆಯ ವಿಲ್ಲಾ ಮಾಲೀಕರುಗಳು ಮಾತ್ರ ಓಡಾಡಲು ರಸ್ತೆಯ ಎರಡೂ ಬದಿಗಳಲ್ಲಿ ಬೃಹದಾಕಾರದ ತಡೆಗೋಡೆಗಳನ್ನು ನಿರ್ಮಿಸಿಕೊಂಡು ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡದಂತೆ ಅತಿಕ್ರಮಣ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬAಧ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಗ್ರಾ.ಪಂ ಸದಸ್ಯ ಮಜ್ಜಿಗೆಪುರ ಮಂಜುನಾಥ್: ಜುವಾರಿ ಡೆವಲರ‍್ಸ್ ಖಾಸಗಿ ಸಂಸ್ಥೆಯವರು ಕಳೆದ ೧೦-೧೫ ವರ್ಷಗಳಿಂದ ಸರ್ಕಾರಿ ಬಂಡಿ ರಸ್ತೆಯನ್ನು ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡು ಸಾರ್ವನಿಕರು ಹಾಗೂ ರೈತರಿಗೆ ತೊಂದರೆ ನೀಡಿದ್ದಾರೆ. ಇಲ್ಲಿಯವರೆವಿಗೂ ಈ ಸಂಬAಧ ಯಾವೊಬ್ಬ ಅಧಿಕಾರಿಯೂ ಸಹ ಸಾರ್ವಜನಿಕರಿಗೆ ಹಾಗೂ ರೈತರಿಗೆ ನ್ಯಾಯದೊರಕಿಸಿಕೊಟ್ಟಿಲ್ಲ. ಕೇಲವ ೨-೩ ಕಿ.ಮೀ ಕ್ರಮಿಸಬೇಕಾದ ನಮ್ಮ ಜಮೀನಿಗೆ ಸುಮಾರು ೮-೧೦ ಕಿ.ಮೀ ಕೆಆರ್‌ಎಸ್ ಗ್ರಾಮ ಬಳಸಿಕೊಂಡು ಅವರವರುಗಳ ಜಮೀನುಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬAಧ ಪಟ್ಟ ಅಧಿಕಾರಿಗಳು ಶೀಗ್ರ ಒತ್ತುವರಿಯಾಗಿರುವ ಬಂಡಿ ರಸ್ತೆಯನ್ನು ತೆರವುಗೊಳಿಸಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಒಂದು ವಾರದೊಳಗೆ ಒತ್ತುವರಿ ರಸ್ತೆ ತೆರವುಗೊಳಿಸದೇ ಇದ್ದಲ್ಲಿ ಗ್ರಾಮಸ್ಥರ ಜೊತೆಗೂಡಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ವೇಳೆ ಸದಸ್ಯರಾದ ಮಜ್ಜಿಗೆಪುರ ಮಂಜುನಾಥ್, ಕರಿಗೌಡ, ಗ್ರಾಮಸ್ಥರಾದ ರಾಜಣ್ಣ, ಇತರರು ಇದ್ದರು.