
ಬಸವ ಬಳಗ ಚಾಮುಂಡಿಪುರಂ ಸಂಘದ ಸದಸ್ಯತ್ವ ನೊಂದಣಿ ಕಾರ್ಯಕ್ರಮಕ್ಕೆ ಸುತ್ತೂರು ಜಗದ್ಗುರುಗಳಾದಂತ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಯವರು ಚಾಲನೆ ನೀಡಿದರು
- Mysore
- November 17, 2022
- No Comment
- 142

ಬಸವ ಬಳಗ ಚಾಮುಂಡಿಪುರಂ ಸಂಘದ ಸದಸ್ಯತ್ವ ನೊಂದಣಿ ಕಾರ್ಯಕ್ರಮಕ್ಕೆ ಸುತ್ತೂರು ಜಗದ್ಗುರುಗಳಾದಂತ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಯವರು ಚಾಲನೆ ನೀಡಿದರು
ಮೈಸೂರಿನ ಚಾಮುಂಡಿಪುರಂ ನಲ್ಲಿರುವ ಬಸವ ಬಳಗದ ಸದಸ್ಯರು ಕಳೆದ ಹತ್ತು ವರ್ಷಗಳಿಂದ ಬಸವೇಶ್ವರರ ಜಯಂತಿಯ, ರಾಮನವಮಿ, ಚಾಮುಂಡೇಶ್ವರಿ ಹಬ್ಬ ಹಾಗೂ ವಿವಿಧ ಹಬ್ಬಗಳ ಆಚರಣೆ ಚಾಮುಂಡಿಪುರಂ ವೃತ್ತದಲ್ಲಿ ಆಚರಿಸುತ್ತಾ ಬಂದಿದ್ದು, ಸಮಾಜಮುಖಿ ಕೆಲಸಗಳಲ್ಲಿ ನಿರತವಾಗಿದ್ದು ಇತ್ತೀಚಿನ ದಿನಗಳಲ್ಲಿ “ಬಸವ ಬಳಗ ಚಾಮುಂಡಿಪುರಂ” ಹೆಸರಿನಲ್ಲಿ ಸಂಘವನ್ನು ನೋಂದಣಿಯಾಗಿದ್ದು ಇದರ ಸದಸ್ಯತ್ವ ನೊಂದಣಿ ಕಾರ್ಯಕ್ರಮಕ್ಕೆ ಸುತ್ತೂರು ಜಗದ್ಗುರು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಯವರು ಚಾಲನೆ ನೀಡಿದರು
ಇದೇ ಸಂಧರ್ಭದಲ್ಲಿ ಬಸವ ಬಳಗ ಚಾಮುಂಡಿಪುರಂ ಸಂಘದ ಗೌರವಾಧ್ಯಕ್ಷರಾದ ಅಂಬಳೆ ಶಿವಣ್ಣ, ಅಧ್ಯಕ್ಷರಾದ ಸಂದೀಪ್ ಚಂದ್ರಶೇಖರ್, ಉಪಾಧ್ಯಕ್ಷರಾದ ಎಂ ಬಸವರಾಜು, ಕಾರ್ಯದರ್ಶಿಗಳಾದ ಮಲ್ಲಪ್ಪ ಖಜಾಂಜಿ ವಿ ಬಸವರಾಜು, ನಿರ್ದೇಶಕರಗಳಾದ ಜಿ ಮಹದೇವಪ್ಪ, ವಿ ಮಂಜುನಾಥ್, ಯೋಗೇಶ್, ನವೀನ್, ಡಿ ಸಿ ಮಂಜುಳಾ, ಕೆ ಎಂ ಸೋಮೇಶ್, ಎನ್ ಧರ್ಮೇಂದ್ರ, ಹಾಗೂ ಸಮಾಜ ಮುಖಂಡರಾದ ಮೋಹನ್, ಶಿವಣ್ಣ, ದೇವೇಂದ್ರ ಸ್ವಾಮಿ, ಚನ್ನಪ್ಪ, ರುದ್ರಸ್ವಾಮಿ, ದೀಪಕ್, ಸಂದೇಶ್, ಪ್ರದೀಪ್, ವಿನಯ್, ಸುರೇಶ್, ಪಾರ್ವತಿ, ಗಾಯತ್ರಿ , ಮಧುರ, ರೇಖಾ, ನಾಗಮ್ಮ, ನಾಗರಾಜ್, ನಾಗೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು