ಕೊನೆಗೂ ಸಿಕ್ಕಿಬಿದ್ದ ಮೊಸಳೆ…ಸ್ಥಳೀಯರಲ್ಲಿ ನಿವಾರಣೆಯಾದ ಆತಂಕ…
- Mysore
- November 17, 2022
- No Comment
- 212
ಕೊನೆಗೂ ಸಿಕ್ಕಿಬಿದ್ದ ಮೊಸಳೆ…ಸ್ಥಳೀಯರಲ್ಲಿ ನಿವಾರಣೆಯಾದ ಆತಂಕ…
ಮೈಸೂರು,ನ17,Tv10 ಕನ್ನಡ
ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಮೊಸಳೆ ಕೊನೆಗೂ ಸಿಕ್ಕಿಬಿದ್ದಿದೆ.ಅರಣ್ಯ ಇಲಾಖೆ,ಮೈಸೂರು ಮೃಗಾಲಯ ಹಾಗೂ ಮೈಸೂರು ಮಹಾನಗರ ಪಾಲಿಕೆಯು ಸ್ಥಳೀಯರ ನೆರವಿನಿಂದ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.ಇಂದು ನಡೆದ ಇಡೀ ದಿನದ ಕಾರ್ಯಾಚರಣೆಯಲ್ಲಿ ಕಣ್ಣಾಮುಚ್ಚಾಲೆ ಆಡಿಸುತ್ತಿದ್ದ ಮೊಸಳೆ ಸೆರೆ ಸಿಕ್ಕಿದೆ.
ರಾಮಾನುಜಾ ರಸ್ತೆಯ 9 ನೇ ಕ್ರಾಸ್ ಬಳಿ ಚರಂಡಿ ನೀರಿನಲ್ಲಿ ಕಳೆದ ಒಂದು ತಿಂಗಳಿಂದ ಹತ್ತಾರು ಬಾರಿ ಕಾಣಿಸಿಕೊಂಡಿದ್ದ ಮೊಸಳೆ ಸ್ಥಳೀಯರಿಗೆ ಆತಂಕ ಸೃಷ್ಟಿಸಿತ್ತು.ಕೆಲವು ದಿನಗಳ ಹಿಂದೆ ಕರುವೊಂದನ್ನ ಬಲಿ ಪಡೆದಿತ್ತು.ಮೊಸಳೆಯನ್ನ ಸೆರೆ ಹಿಡಿಯುವಂತೆ ಸ್ಥಳೀಯ ನಿವಾಸಿಗಳು ತೀವ್ರ ಒತ್ತಡ ಹೇರಿದ್ದರು.ಅರಣ್ಯಾಧಿಕಾರಿಗಳು ನಡೆಸಿದ ಕೆಲವು ಪ್ರಯತ್ನಗಳು ವಿಫಲವಾಗಿದ್ದವು.ಚೆಳ್ಳೆಹಣ್ಣು ತಿನ್ನಿಸುತ್ತಾ ಕಣ್ಣಾಮುಚ್ಚಾಲೆ ಆಟವಾಡಿಸುತ್ತಿತ್ತು.ಇಂದು ಕಾರ್ಯಾಚರಣೆಯನ್ನ ತೀವ್ರಗೊಳಿಸಿದ ಸಿಬ್ಬಂದಿಗಳು ಮೊಸಳೆಯನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಸ್ಥಳೀಯ ಕಾರ್ಪೊರೇಟರ್ ಹಾಗೂ ಶಾಸಕ ರಾಮದಾಸ್ ಸಹ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಗೆ ಸಹಕರಿಸಿದ್ದರು.ಇದೀಗ ಮೊಸಳೆ ಸೆರೆಸಿಕ್ಕಿದ್ದು ಸ್ಥಳೀಯರಲ್ಲಿ ಆತಂಕ ನಿವಾರಣೆಯಾದಂತಾಗಿದೆ.ಸೆರೆ ಸಿಕ್ಕ ಮೊಸಳೆಯನ್ನ ಕಬಿನಿ ಜಲಾಶಯದಲ್ಲಿ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ…