
ಸೂರಿಲ್ಲದ ವ್ಯಕ್ತಿಗೆ ಮನೆಯಾದ ಅಂಗನವಾಡಿ ಕಟ್ಟಡ…ನನ್ನದೇ ಮನೆ ಎಂದು ಪಟ್ಟು ಹಿಡಿದು ಕುಳಿತ…
- TV10 Kannada Exclusive
- November 27, 2022
- No Comment
- 144

ಸೂರಿಲ್ಲದ ವ್ಯಕ್ತಿಗೆ ಮನೆಯಾದ ಅಂಗನವಾಡಿ ಕಟ್ಟಡ…ನನ್ನದೇ ಮನೆ ಎಂದು ಪಟ್ಟು ಹಿಡಿದು ಕುಳಿತ…
ಹುಣಸೂರು,ನ27,Tv10 ಕನ್ನಡ
ಸೂರಿಲ್ಲದ ವ್ಯಕ್ತಿಯೊಬ್ಬ ಅಂಗನವಾಡಿ ಕಟ್ಟಡವನ್ನ ಆಶ್ರಯಿಸಿಕೊಂಡ ಘಟನೆ ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಶಿವ ಎಂಬುವವರು ಅಂಗನವಾಡಿ ಕೇಂದ್ರವನ್ನ ತಮ್ಮ ಮನೆಯಾಗಿ ಮಾಡಿಕೊಂಡಿದ್ದಾರೆ.ಹೀಗಾಗಿ ಅಂಗನವಾಡಿಗೆ ಬರಬೇಕಿದ್ದ ಮಕ್ಕಳು ಚಟುವಟಿಕೆಯಿಂದ ದೂರ ಉಳಿಯುವಂತಾಗಿದೆ. ಅಂಗನವಾಡಿ ಜಾಗ ನಮ್ಮ ತಾಯಿ ಹೆಸರಿನಲ್ಲಿ ಇದ್ದು ನಾನು ಕಂದಾಯ ಕಟ್ಟುತ್ತಿದ್ದೇನೆ. ನನ್ನ ಜಾಗವನ್ನು ನನಗೆ ಬಿಟ್ಟುಕೊಡಿ ಎಂದು ಪಟ್ಟು ಹಿಡಿದಿದ್ದಾರೆ.2015 ರಲ್ಲಿ ಅಂಗನವಾಡಿಗೆ ಜಾಗ ಬಿಟ್ಟುಕೊಟ್ಟಾಗ ಬದಲಿ ನಿವೇಶನ ಮನೆ ಮಂಜೂರು ಮಾಡಿಕೊಡುವುದಾಗಿ ಬೀಜಗನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಭರವಸೆ ನೀಡಿತ್ತು.ಲಿಖಿತ ರೂಪದಲ್ಲಿ ಬರೆದು ಕೊಟ್ಟಿದರು. ಆದರೆ ಇಲ್ಲಿವರೆಗೂ ಯಾವುದೇ ನಿವೇಶನವಾಗಲಿ, ಮನೆಯಾಗಲಿ ಮಂಜೂರು ಮಾಡಿಲ್ಲ.ಹೀಗಾಗಿ ನನಗೆ ವಾಸ ಮಾಡಲು ಮನೆ ಇಲ್ಲ. ಪಂಚಾಯಿತಿ ಯವರು ನನಗೆ ಮೋಸ ಮಾಡುತ್ತಿದ್ದಾರೆ. ನಿವೇಶನ ಕೊಡಲಿ ಇಲ್ಲ ಅಂದರೆ ನನ್ನ ಜಾಗವನ್ನು ನನಗೆ ಬಿಟ್ಟುಕೊಡಲಿ ಎಂದು ಪಟ್ಟು ಹಿಡಿದು ಅಂಗನವಾಡಿಯಲ್ಲಿ ಗಂಟು ಮೂಟೆ ಕಟ್ಟಿಕೊಂಡು ಬೀಡುಬಿಟ್ಟಿದ್ದಾರೆ.ಈ ಬೆಳವಣಿಗೆಯಿಂದ ಅಂಗನವಾಡಿಯಲ್ಲಿ ಚಟುವಟಿಕೆ ಸ್ಥಗಿತವಾಗಿದೆ. ಅಂಗನವಾಡಿ ಮಕ್ಕಳು ಮನೆಯಲ್ಲೇ ಉಳಿದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ತಾಲ್ಲೂಕು ಆಡಳಿತ ಬೀಜಗನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿದೆ…