
ಹಸಿರು ಬಾವುಟ ಕಿತ್ತು ಕೇಸರಿ ದ್ವಜ ಹಾರಿಸಿದ ಪ್ರಕರಣ…ನಾಲ್ವರ ಮೇಲೆ FIR ದಾಖಲು…
- TV10 Kannada Exclusive
- December 5, 2022
- No Comment
- 174

ಹಸಿರು ಬಾವುಟ ಕಿತ್ತು ಕೇಸರಿ ದ್ವಜ ಹಾರಿಸಿದ ಪ್ರಕರಣ…ನಾಲ್ವರ ಮೇಲೆ FIR ದಾಖಲು…

ಶ್ರೀರಂಗಪಟ್ಟಣ,ಡಿ5,Tv10 ಕನ್ನಡ
ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಗಂಜಾಂನಲ್ಲಿ ಹಸಿರು ಬಾವುಟ ಕಿತ್ತು ಹಾಕಿ ಕೇಸರಿ ಬಾವುಟ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣ ಪೊಲೀಸ್ ಠಾಣೆಗೆ ಸುಮಾರು 40ಕ್ಕೂ ಹೆಚ್ಚು ಮುಸ್ಲಿಂ ಜನರು ಭೇಟಿ ನೀಡಿ ಶಾಂತಿಯುತ ಯಾತ್ರೆ ವೇಳೆ ಕೆಲವರು ನಡೆಸಿದ ಕೋಮು ಪ್ರಚೋದನೆ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದರು. ಗಂಜಾಂನ ಪೇಟೆ ಬೀದಿಯ ನಿವಾಸಿ ಸೈಯದ್ ರೆಹಮನ್ ಎಂಬುವರ ಮನೆ ಮೇಲೆ ಹಲವು ವರ್ಷಗಳಿಂದ ಅಳವಡಿಸಿದ್ದ ಹಸಿರು ಧ್ವಜವನ್ನು ಸಂಕೀರ್ತನಾ ಯಾತ್ರೆ ವೇಳೆ ನಾಲ್ವರು ಹನುಮ ಮಾಲಾಧಾರಿಗಳು ದುರುದ್ದೇಶಪೂರ್ವಕವಾಗಿ ಮನೆ ಮೇಲೆ ಹತ್ತು ಧ್ವಜ ಕಿತ್ತು ಹಾಕಿ ಕೇಸರಿ ಧ್ವಜ ಹಾರಿಸಿ ಘೋಷಣೆ ಕೂಗಿ ಧರ್ಮ ಪ್ರಚೋದನೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಹಿನ್ನಲೆ ನಾಲ್ವರ ಮೇಲೆ FIR ದಾಖಲಾಗಿದೆ…

