ಹುಣಸೂರಿನಲ್ಲಿ ಇಂದು ಹನುಮ ಜಯಂತಿ…ಬಿಗಿ ಪೊಲೀಸ್ ಭದ್ರತೆ…
- Temples
- December 7, 2022
- No Comment
- 116
ಹುಣಸೂರಿನಲ್ಲಿ ಇಂದು ಹನುಮ ಜಯಂತಿ…ಬಿಗಿ ಪೊಲೀಸ್ ಭದ್ರತೆ…
ಹುಣಸೂರು,ಡಿ7,Tv10 ಕನ್ನಡ
ಹುಣಸೂರಿನಲ್ಲಿ ಇಂದು ಹನುಮ ಜಯಂತಿ ಸಂಭ್ರಮ ಮನೆ ಮಾಡಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿಪೊಲೀಸ್ ಭದ್ರತೆ ಒದಗಿಸಲಾಗಿದೆ.ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ತಾಲೂಕಿನಾದ್ಯಂತ ಮೂರು ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಇಂದು ಹುಣಸೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹನುಮ ಜಯಂತಿ ಶೋಭಾಯಾತ್ರೆಯ ಸಾಗಲಿರುವ ಮಾರ್ಗಗಳನ್ನ ಎಸ್ಪಿ ಆರ್. ಚೇತನ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ.
ಹನುಮ ಜಯಂತಿ ಶಾಂತಿಯುತವಾಗಿ ಆಚರಿಸಲು ಅಗತ್ಯಕ್ರಮ ಕೈಗೊಳ್ಳಲಾಗಿದೆ.
ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಶೋಭಾಯಾತ್ರೆ ಆರಂಭವಾಗಲಿದೆ.
ಕಾನೂನು ಸುವ್ಯವಸ್ಥೆಗಾಗಿ 1700 ಪೊಲೀಸರು,
9 ಡಿಎಆರ್, 8 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ನಗರಸಭೆ ವತಿಯಿಂದ 70 ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ.
ಅನುಮತಿ ಪಡೆದ ವಾಹನಗಳಿಗೆ ಮಾತ್ರ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ.
ವಾಹನಗಳ ಮೇಲೆ ಹತ್ತುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಡಿ.ಜೆ. ಬಳಕೆಗೆ ಅವಕಾಶವಿಲ್ಲ. ಸಂಜೆ 5ರವರೆಗೆ ಮಾತ್ರ ಮೆರವಣಿಗೆಗೆ ಅವಕಾಶ.
ಮೆರವಣಿಗೆ ಸಾಗುವ ಎಲ್ಲಾ ಮಾರ್ಗಗಳ ಪರಿಶೀಲನೆ ನಡೆದಿದೆ.
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 30 ಮಂದಿ ಆರೋಪಿತರ ಪಟ್ಟಿ ಸಿದ್ದಪಡಿಸಲಾಗಿದ್ದು ಅವರ ಚಲನವಲನದ ಮೇಲೆ ಒಬ್ಬರಿಗೆ ಒಬ್ಬ ಪೊಲೀಸರು ನಿಗಾವಹಿಸಲಾಗುತ್ತದೆ.
ನಗರ ಪ್ರವೇಶಿಸುವ 6 ಕಡೆ, ಜಿಲ್ಲೆಯ ಎರಡು ಕಡೆಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ.
ಎಲ್ಲಾ ವಾಹನಗಳ ತಪಾಸಣೆ ನಡೆಯಲಿಧ.
ಏನೇ ದೂರುಗಳಿದ್ದರೂ ಸಹಾಯವಾಣಿ 112ಗೆ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ನಗರಸಭೆಯ ಅನುಮತಿಯೊಂದಿಗೆ ನಿಗದಿತ ಸ್ಥಳದಲ್ಲಿ ಮಾತ್ರ ಬಾವುಟ, ಫ್ಲೆಕ್ಸ್ ಅಳವಡಿಕೆಗೆ ಅವಕಾಶ ಕಲ್ಪಿಸಲಾಗಿದೆ…