ನನ್ನನ್ನ ಸ್ವಾಭಿಮಾನ ಚಕ್ರವರ್ತಿ ಅಂತ ಕರೀತಾರೆ ಮಿಸ್ಟರ್ ವಿಶ್ವನಾಥ್…ಹಳ್ಳಿಹಕ್ಕಿಗೆ ತಿರುಗೇಟು ಕೊಟ್ಟ ಶ್ರೀನಿವಾಸ್ ಪ್ರಸಾದ್…

ನನ್ನನ್ನ ಸ್ವಾಭಿಮಾನ ಚಕ್ರವರ್ತಿ ಅಂತ ಕರೀತಾರೆ ಮಿಸ್ಟರ್ ವಿಶ್ವನಾಥ್…ಹಳ್ಳಿಹಕ್ಕಿಗೆ ತಿರುಗೇಟು ಕೊಟ್ಟ ಶ್ರೀನಿವಾಸ್ ಪ್ರಸಾದ್…

  • Politics
  • December 16, 2022
  • No Comment
  • 168

ನನ್ನನ್ನ ಸ್ವಾಭಿಮಾನ ಚಕ್ರವರ್ತಿ ಅಂತ ಕರೀತಾರೆ ಮಿಸ್ಟರ್ ವಿಶ್ವನಾಥ್…ಹಳ್ಳಿಹಕ್ಕಿಗೆ ತಿರುಗೇಟು ಕೊಟ್ಟ ಶ್ರೀನಿವಾಸ್ ಪ್ರಸಾದ್…

ಮೈಸೂರು,ಡಿ16,Tv10 ಕನ್ನಡ
ಅಲೆಮಾರಿ ರಾಜಾ ಎಂದು ಕರೆದ ವಿಶ್ವನಾಥ್ ಗೆ ಸಂಸದ ಶ್ರೀನಿವಾಸ್ ಪ್ರಸಾದ್ ಮೈಸೂರಿನಲ್ಲಿ ತಿರುಗೇಟು ಕೊಟ್ಟಿದ್ದಾರೆ.ನನ್ನನ್ನ ಜನ ಸ್ವಾಭಿಮಾನ ಚಕ್ರವರ್ತಿ ಅಂತಾ ಕರಿತಾರೆ ಮಿಸ್ಟರ್ ವಿಶ್ವನಾಥ್.ನನ್ನ ಅಲೆಮಾರಿಯ ರಾಜ ಅಂತಾ ಕರೀತಿರಾ…?
ಈವರೆಗೂ ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ.ವಿಶ್ವನಾಥ್ ನೆನಪಿಸಿಕೋ.ಬೆನ್ನಿಗೆ ಚೂರಿಗೆ ಹಾಕಿ ದೇವರಾಜ ಅರಸ್ ಬಿಟ್ಟು ಇಂದಿರಾ ಕಾಂಗ್ರೆಸ್ ಗೆ ರಾತ್ರೋ ರಾತ್ರಿ ಓಡಿ ಬಂದಿದ್ದು ನೀನೆ ಅಲ್ಲವೇ.
ಇಂದಿರಾ ಕಾಂಗ್ರೆಸ್ ಗೆ ಓಡಿ ಬಂದದ್ದು ನೆನಪಿಲ್ವಾ ವಿಶ್ವನಾಥ್
ಕೆ.ಆರ್. ನಗರದಲ್ಲಿ ಏನೆಲ್ಲಾ ಮಾಡಿದೆ ಎಂದು ಕಿಡಿ ಕಾರಿದರು.
ನಿನ್ನ ವಿರುದ್ದ ಸ್ಪರ್ಧೆ ಮಾಡಿದ್ರು ಅನ್ನೊ ಕಾರಣಕ್ಕೆ ಎಚ್.ಎಸ್. ನಂಜಪ್ಪ,‌ ಮಂಚನಹಳ್ಳಿ ಮಹದೇವು ಎಲ್ಲರ ಮೇಲೂ ಆಣೆ ಪ್ರಮಾಣ ಮಾಡಿದೆ
ನಿನ್ನನ್ನು ಕೆ.ಎಚ್. ಪಾಟೀಲರು ಪುಂಡ ಅಂತಾ ಕರೀತಿದ್ರು
ಯಾವ ಕಾರಣಕ್ಕೂ ಟಿಕೆಟ್ ಕೊಡಲ್ಲ ಅಂತಾ ಹಠ ಮಾಡಿದ್ರು.
ನಾನು ರಾಜೀವ್ ಗಾಂಧಿ ಹತ್ತಿರವಿದ್ದೆ.
ನಾನು 40 ರಿಂದ 42 ಟಿಕೇಟ್ ಕೊಡಿಸಿದ್ದೆ.
ಡಿ.ಕೆ.ಶಿವಕುಮಾರ್ ಗೂ ನಾನು ಟಿಕೆಟ್ ಕೊಡಿಸಿದ್ದೆ.ವಿಶ್ವನಾಥ್ ಪುಂಡಾಟ ಆಂತಾ ಹೇಳಿದ್ರು.ಯೂತ್ ಕಾಂಗ್ರೆಸ್ ಆಧ್ಯಕ್ಷರ ಮಾತಿಗೆ ಗೌರವ ಕೊಡಬೇಕು ಅಂತಾ ಟಿಕೆಟ್ ಕೊಟ್ರು
ಹಿಂದುಳಿದ ವರ್ಗ, ವಕೀಲ ಅಂತಾ ನಾನು ಹೇಳಿ ಚುನಾವಣಾ ಸಮಿತಿಗೆ ಹೇಳಿದ್ದೆ.
ನಾನು ಸಮಿತಿಯವ್ರಿಗೆ ಹೇಳಿ ನಿನ್ನ ಹೆಸ್ರನ್ನ ಶಿಫಾರಸು ಮಾಡಿ ಕಳುಹಿಸಿದ್ದೆ.ನಾನು ಪ್ರೀತಿ ವಿಶ್ವಾಸ ಗಳಿಸಿದ್ದೇನೆ ಎಲ್ಲರ ಬಳಿಯೂ ವಿಶ್ವನಾಥ್, ನಿನ್ನ ರೀತಿ ಬಾಯಿಗೆ ಬಂದ ಹಾಗೆ ಮಾತನಾಡೋಲ್ಲ.
1985 ರಲ್ಲಿ ವಿಶ್ವನಾಥ್ ಸೋತಾಗ ರಾಜಕೀಯ ಜನ್ಮ ಕೊಟ್ಟಿದ್ದು ಯಾರು.1989 ರಲ್ಲಿ ಟಿಕೇಟ್ ಕೊಟ್ರು, ಎರಡು ಕೈ ಮುಗಿದು ಮಂತ್ರಿ ಮಾಡಿ ಆಂತಾ ಕೇಳಿದ್ದೆ.ವಿಶ್ವನಾಥ್ ಯಾರಪ್ಪ ನಿನ್ನ ಮಂತ್ರಿ ಮಾಡಿದ್ದು.
ಪ್ರಮಾಣವಚನದ ವೇಳೆ ಇವ್ರ ಹೆಸರೇ ಇರಲಿಲ್ಲ.
ನಾನು ಮೊಯ್ಲಿ ಅವ್ರೆ ಇವ್ರನ್ನ ಡೆಪ್ಯೂಟಿ ಸ್ಪೀಕರ್ ಮಾಡೋದಲ್ಲ.
ಪ್ಲೈಟ್ ಲ್ಯಾಂಡ್ ಆಗೋದ್ರ ಒಳಗೆ ನೀವು ಮಂತ್ರಿ ಮಾಡಿಲ್ಲ ಅಂದ್ರೆ ನಿಮ್ಮ ವಿರುದ್ಧ ತಿರುಗಿ ಬೀಳಬೇಕಾಗುತ್ತದೆ ಎಂದೆ.ಫ್ಲೈಟ್ ಇಳಿದ ಮೇಲೆ ಹೆಸರು ಸೇರಿಸಿದ್ರು ರಾಜಭವನದಲ್ಲಿ .
ಆಗ ವಿಶ್ವನಾಥ್ ಎಲ್ಲಿದ್ರು, ಕೆ.ಆರ್. ನಗರದಲ್ಲಿ ಕಂಬಳಿ ಹೊಸ್ಕೊಂಡು ಮಲಗಿದ್ದ.ನಾನು ಪೋನ್ ಮಾಡಿ ಕರೆಸಿ ಮಂತ್ರಿ ಮಾಡಿಸಿದೆ.
ನಾನು ಡೆಲ್ಲಿಯಲ್ಲಿ ವಿಶ್ವನಾಥ್ ನನ್ನು ನಾಲ್ಕು ವರ್ಷ ಸಾಕಿದೆ.
ನಿಮ್ಮ ಪತ್ನಿಗೆ ನಾನು ಮಾಡಿದ ಸಹಾಯ ಗೊತ್ತು.ದೀಪ ಹಚ್ಚುವ ವೇಳೆ ನಿಮ್ಮನ್ನು
ನೆನೆಸಿಕೊಳ್ಳುತ್ತೇವೆ ಅಂದ್ರು.ಕೆ.ಆರ್.ನಗರದ ರೇಡಿಯೋ ಮೈದಾನದಲ್ಲಿ ನನ್ನ ಬಗ್ಗೆ ವಿಶ್ವನಾಥ್ ಹೇಳಿದ್ದೇನು.ನನ್ನ ಪಾಲಿಗೆ ತಿರುಪತಿ ತಿಮ್ಮಪ್ಪ ಅಂದ್ರಿ.ಆಮೇಲೆ ನಂಜನಗೂಡು ಬೈ ಎಲೆಕ್ಷನ್ ಸಂದರ್ಭ ಮಾಡಿದ್ದೇನು ನೀನು
ನಂಜುಂಡೇಶ್ವನ ಬಳಿಗೆ ಹೋಗಿ ನಾನು ಸೋಲಲಿ ಅಂತಾ ಈಡುಗಾಯಿ ಹೊಡೆದೆ.
ನಾನು 1985ರಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸದಿದ್ರೆ ನಿನ್ನ ರಾಜಕೀಯ ಅಧ್ಯಾಯವೇ ಮುಗಿದು ಹೋಗುತ್ತಿತ್ತು
1989ರಲ್ಲಿ ವೀರಪ್ಪ ಮೊಯಿಲಿ ಸಿಎಂ ಆದಾಗ ನಿನ್ನನ್ನು ಮಂತ್ರಿ ಮಾಡೋಕೆ ಹೋರಾಟ ಮಾಡಿದ್ಯಾರು ಎಂದು
ಖಾಸಗಿ ಹೋಟೆಲ್ ನಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸುದ್ದಿಗೋಷ್ಟಿಯಲ್ಲಿ ವಾಗ್ಧಾಳಿ ನಡೆಸಿದರು…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *