ಸರ್ಕಾರಕ್ಕೆ 79.29 ಕೋಟಿ ಪಂಗನಾಮ ಪ್ರಕರಣ…ಸಿಐಡಿ ತನಿಖೆಗೆ ತಡೆಯಾಜ್ಞೆ…
- TV10 Kannada Exclusive
- December 30, 2022
- No Comment
- 152
ಮೈಸೂರು,ಡಿ30,Tv10 ಕನ್ನಡ
ನಂಜನಗೂಡು ತಾಲ್ಲೂಕು ಹಿಮ್ಮಾವು ಗ್ರಾಮ, ಸರ್ವೆ ನಂ. 399ರಿಂದ 422 ಮತ್ತು 424 ಜಮೀನುಗಳಿಗೆ ಖಾತೆ ಮಾಡಿರುವ ಸಂಬಂಧ ಸರ್ಕಾರಕ್ಕೆ 79.29 ಕೋಟಿ ನಷ್ಟ ಆಗಿದೆ ಎಂದು ದೂರು ನೀಡಿ ಸರ್ಕಾರದ ವತಿಯಿಂದ FIR ದಾಖಲು ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ತನಿಖೆ CID ಮೆಟ್ಟಿಲೇರಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಡೆಯಾಜ್ಞೆ ನೀಡಿದೆ.ಸಿಐಡಿ
ತನಿಖೆ ಆದೇಶವನ್ನು ಪ್ರಶ್ನಿಸಿ ನಿವೃತ್ತ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹಾಗೂ ಎಸಿ ನವೀನ್ ಜೋಸೆಫ್ಅವರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ನ್ಯಾಯಾಲಯ ನಂಜನಗೂಡಿನ ಪೊಲೀಸ್ ಹಾಗೂ CIDಗೆ ಜನವರಿ 9 ರವರೆಗೂ ಯಾವುದೇ ಕ್ರಮ ಜರುಗಿಸದಂತೆ ತಡೆಯಾಜ್ಞೆ ನೀಡಿದೆ…