ನಾಟಕದಲ್ಲಿ ಸಿದ್ದರಾಮಯ್ಯ,ಡಿಕೆಶಿ ಬಗ್ಗೆ ವ್ಯಂಗ್ಯ…ಸಿಡಿದೆದ್ದ ಕೈ ಕಾರ್ಯಕರ್ತರು…
- Mysore
- January 2, 2023
- No Comment
- 137
ಮೈಸೂರು,ಜ2,Tv10 ಕನ್ನಡ
ಟಿಪ್ಪು ಇತಿಹಾಸ ತಿರುಚಿದ ಆರೋಪ ಹೊತ್ತ ರಂಗಾಯಣ ಮತ್ತೆ ವಿವಾದಕ್ಕೀಡಾಗಿದೆ.
ಚಂದ್ರಶೇಖರ್ ಕಂಬಾರರ ನಾಟಕದಲ್ಲಿ ಸಿದ್ದರಾಮಯ್ಯರ ಬಗ್ಗೆ ಅವಹೇಳಕಾರಿಯಾಗಿ ಅಪಹಾಸ್ಯ ಮಾಡಿ ಕೈ ಕಾರ್ಯಕರ್ತರ ಸಿಟ್ಟಿಗೆ ಗುರಿಯಾಗಿದೆ.
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಗ್ಗೆ ವ್ಯಂಗ್ಯ ಮಾಡಿ ನಾಟಕ ಪ್ರದರ್ಶಿಸಿ ಕೈ ಕಾರ್ಯಕರ್ತರ ಆಕ್ರೋಷಕ್ಕೆ ಸಿಲುಕಿದ್ದಾರೆ.
ರೋಚ್ಚಿಗೆದ್ದ ಸಿದ್ದು ಅಭಿಮಾನಿಗಳು
ವೇದಿಕೆಗೆ ನುಗ್ಗಿ ನಾಟಕಕ್ಕೆ ಬ್ರೇಕ್ ಹಾಕಿದ ಘಟನೆ ನಡೆದಿದೆ.
ಸಿದ್ದರಾಮಯ್ಯರ ಆಡಳಿತ ವೈಖರಿ ಬಗ್ಗೆ ಕೇವಲವಾಗಿ ಚಿತ್ರಣ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಸಿದ್ದರಾಮಯ್ಯ, ಡಿಕೆಶಿ ಯನ್ನ ಟೀಕಿಸಿದ ನಾಟಕ ತಂಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಟಿಪ್ಪು ಇತಿಹಾಸ ತಿರುಚಿದ ಆರೋಪ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮೇಲಿದೆ.
ಇದೀಗ ಅಡ್ಡಂಡ ಕಾರ್ಯಪ್ಪನ ಶಿಷ್ಯನಿಂದ ಕಾಂಗ್ರೆಸ್ ಮೇಲೆ ವಕ್ರ ದೃಷ್ಟಿ ಬಿದ್ದಂತಾಗಿದೆ.
ನಾಟಕದಲ್ಲಿ ಕಾಂಗ್ರೆಸ್ ಅಧಿನಾಯಕಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಗ್ಗೆ ಹೀನಾಯವಾಗಿ ಚಿತ್ರಿಸಿ ಪ್ರದರ್ಶನ ಮಾಡಿದ್ದಾರೆಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಮೊನ್ನೆ ಚಂದ್ರಶೇಖರ್ ಕಂಬಾರರ ಸಾಂಬಶಿವ ಪ್ರಹಸನ ನಾಟಕ ಪ್ರದರ್ಶನ
ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶನಗೊಂಡಿತು. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಶಿಷ್ಯ ಕಾರ್ತಿಕ್ ಉಪಮನ್ಯು ಎಸ್ ನಾಟಕ ನಿರ್ದೇಶಿಸಿದ್ದರು.
ಮೂಲ ನಾಟಕದಲ್ಲಿಲ್ಲದ ಅಂಶಗಳನ್ನ ಸೇರಿಸಿ ಕಾಂಗ್ರೆಸ್ ನಾಯಕರ ಬಗ್ಗೆ ಅಪಹಾಸ್ಯ ಮಾಡಿದ್ದರು.
ನಿರ್ದೇಶಕ ಕಾರ್ತಿಕ್ ಉಪಮನ್ಯುನನ್ನ ತರಾಟೆಗೆ ತೆಗೆದುಕೊಂಡರು.
ನಾಟಕದ ನಿರ್ದೇಶಕ ಕಾರ್ತಿಕ್ ಉಪನ್ಯು, ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ನಾಟಕದಲ್ಲಿ ಸಿದ್ದರಾಮಯ್ಯರ ಬಗ್ಗೆ ಅವಹೇಳನಕಾರಿಯಾಗಿ ಬಳಸಿದ್ದು ಸತ್ಯವೆಂದ ಅಧಿಕಾರಿ, ನಿರ್ದೇಶಕ ಇಬ್ಬರೂ ಒಪ್ಪಿಕೊಂಡರು.ಈ ವೇಳೆ
ಅಧಿಕಾರಿ ನಿರ್ಮಲಾ ಮಠಪತಿ, ನಿರ್ದೇಶಕ ಕಾರ್ತಿಕ್ ಉಪಮನ್ಯುವಿಗೆ ಅಭಿಮಾನಿಗಳು ಬಿಸಿ ಮುಟ್ಟಿಸಿದರು.
ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದರು.
ಅಡ್ಡಂಡ ಕಾರ್ಯಪ್ಪ, ಅವನ ಶಿಷ್ಯ ಕಾರ್ತಿಕ್ ಉಪಮನ್ಯು ಎಸ್ ಬಿಜೆಪಿ ಕಾರ್ಯಕರ್ತರೋ, ಅಥವಾ ಕಲಾವಿದರೋ…? ಎಂಬ ಪ್ರಶ್ನೆ ಉದ್ಭವವಾಗಿದೆ.
ರಂಗಾಯಣವನ್ನ ಬಿಜೆಪಿಮಯ ಮಾಡುತ್ತಿದ್ದಾರೆಂದು ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಪ್ರತಿಭಟನೆ ನಡೆಸಲು ಕೈ ಕಾರ್ಯಕರ್ತರು, ಸಿದ್ದು ಅಭಿಮಾನಿಗಳು ರಸ್ತೆಗೆ ಇಳಿಯಲಿದ್ದಾರೆ…