
ಎಚ್.ಡಿ.ಕೋಟೆ ಹೆಡತೊರೆ ಗ್ರಾಮದ ಜಮೀನಿನಲ್ಲಿ ಹುಲಿಹೆಜ್ಜೆ ಗುರುತು ಪತ್ತೆ…ಸ್ಥಳೀಯರಲ್ಲಿ ಆತಂಕ…
- Mysore
- January 19, 2023
- No Comment
- 148

ಎಚ್.ಡಿ.ಕೋಟೆ ಹೆಡತೊರೆ ಗ್ರಾಮದ ಜಮೀನಿನಲ್ಲಿ ಹುಲಿಹೆಜ್ಜೆ ಗುರುತು ಪತ್ತೆ…ಸ್ಥಳೀಯರಲ್ಲಿ ಆತಂಕ…

ಹೆಚ್.ಡಿ.ಕೋಟೆ,ಜ19,Tv10 ಕನ್ನಡ
ಹೆಚ್.ಡಿ.ಕೋಟೆ ತಾಲೂಕು ಕೆ.ಹೆಡತೊರೆ ಗ್ರಾಮದ ಜಮೀನಿನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.
ಕಳೆದ ರಾತ್ರಿ ಕೆ.ಹೆಡತೊರೆ ಗ್ರಾಮದ ಜಮೀನಿನಲ್ಲಿ ಹುಲಿ ಗುರುತು ಪತ್ತೆಯಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಹುಲಿ ಸೆರೆಗೆ ಅರಣ್ಯಾಧಿಕಾರಿಗಳು ಸ್ಥಳದಲ್ಲೆ ಬೀಡುಬಿಟ್ಟಿದ್ದಾರೆ. ಶೋಧ ಕಾರ್ಯದಲ್ಲಿ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
ಮೂರುದಿನಗಳ ಹಿಂದೆ ಎಚ್.ಡಿ.ಕೋಟೆ ಪಟ್ಟಣದ ಜಮೀನಿನಲ್ಲಿ ಹುಲಿ ರೈತನ ಕಣ್ಣಿಗೆ ಬಿದ್ದಿತ್ತು…