ಮೈಸೂರುದಿನಾಂಕ: 24-01-2023 ಮಂಗಳವಾರದಂದು ಬೆಳಿಗ್ಗೆ: 9.30 ರಿಂದ 11.00ರ ವರೆಗೆ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಶ್ರೀಧರ್ ಹಾಗೂ ಪೈಲ್ವಾನ್ ಶ್ರೀನಿವಾಸ್ ಹಾಗೂ ಶ್ರೀಮತಿ ಉಷಾ ಕುಮಾರ್, ಶ್ರೀ ಚಿಕ್ಕವೆಂಕಟ ರವರುಗಳ ಉಪಸ್ಥಿತಿಯಲ್ಲಿ
- MysoreTV10 Kannada Exclusive
- January 24, 2023
- No Comment
- 83
ಮೈಸೂರುದಿನಾಂಕ: 24-01-2023 ಮಂಗಳವಾರದಂದು ಬೆಳಿಗ್ಗೆ: 9.30 ರಿಂದ 11.00ರ ವರೆಗೆ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಶ್ರೀಧರ್ ಹಾಗೂ ಪೈಲ್ವಾನ್ ಶ್ರೀನಿವಾಸ್ ಹಾಗೂ ಶ್ರೀಮತಿ ಉಷಾ ಕುಮಾರ್, ಶ್ರೀ ಚಿಕ್ಕವೆಂಕಟ ರವರುಗಳ ಉಪಸ್ಥಿತಿಯಲ್ಲಿ ವಾರ್ಡ ನಂ 3, 4, ಹಾಗೂ 5 ರ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ, ಎಸ್.ಎಫ್.ಸಿ ಅನುದಾನ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದ ಒಟ್ಟು ಮೊತ್ತ ರೂ: 4 ಕೋಟಿ 32 ಲಕ್ಷದ ವಿವಿಧ ಕೆಳಕಂಡ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಚಾಲನೆ ನೀಡಿದರು
ಅಭಿವೃದ್ದಿ ಕಾಮಗಾರಿಗಳಾದ
ವಾರ್ಡ ನಂ-3 ರ ರೈಲ್ವೆ ಬಡಾವಣೆಯ ರೈಲ್ವೆ ಪಾರ್ಕ ಪಕ್ಕದ ಹಾಗೂ ಮಹದೇಶ್ವರನಗರದ ರಸ್ತೆಗಳ ಅಭಿವೃದ್ದಿ ಕಾಮಗಾರಿಯ ರೂ: 150.00 ಲಕ್ಷದ ಮೊತ್ತದ ಕಾಮಗಾರಿಗೆ
ಶ್ರೀನಿವಾಸ್ ಸ್ಟೀಲ್ ನಿಂದ ರಿಂಗ್ ರಸ್ತೆ ಸರ್ವಿಸ್ ರಸ್ತೆಗೆ ಹೋಗುವ ನಂದಿ ಸ್ಟೋರ್ಸ ಬಳಿಯಲ್ಲಿ ವಾರ್ಡ ನಂ-4 ರ ವ್ಯಾಪ್ತಿಯ ಲೋಕನಾಯಕನಗರದ ಅಡ್ಡರಸ್ತೆಗಳು ಹಾಗೂ ಬೈರವೇಶ್ವರನಗರ ಶ್ರೀನಿವಾಸ ಸ್ಟೀಲ್ ಎದುರಿನ ಹೊರವರ್ತುಲ ರಸ್ತೆವರೆಗೆ ಹಾಗೂ ಬಸವೇಶ್ವರ ನಗರದ ರಸ್ತೆ & ಇತರೆ ಅಡ್ಡರಸ್ತೆಗಳ ಅಭಿವೃದ್ದಿ ಕಾಮಗಾರಿಯ ರೂ: 200.00 ಲಕ್ಷದ ಮೊತ್ತದ ಕಾಮಗಾರಿಗೆ
ನಿಂಗಯ್ಯನಕೆರೆ ಕಾಲೋನಿ ಅಂಬೇಡ್ಕರ್ ಸಮುದಾಯಭವನದ ಬಳಿಯಲ್ಲಿ ವಾರ್ಡ ನಂ-4 ರ ವ್ಯಾಪ್ತಿಯ ನಿಂಗಯ್ಯನಕೆರೆ ಕಾಲೋನಿಯಲ್ಲಿ ರಸ್ತೆಗಳ ಅಭಿವೃದ್ದಿ ಕಾಮಗಾರಿಯ ರೂ: 25.00 ಲಕ್ಷದ ಮೊತ್ತದ ಕಾಮಗಾರಿಗೆ
ವಾರ್ಡ ನಂ-4 ರ ವ್ಯಾಪ್ತಿಯ ನಿಂಗಯ್ಯನಕೆರೆಯಿಂದ 60ಅಡಿ ರಸ್ತೆ ಕಡೆಗೆ ಹರಿಯುವ ದೊಡ್ಡ ಮಳೆನೀರು ಚರಂಡಿ ಅಭಿವೃದ್ದಿ ಕಾಮಗಾರಿಯ ರೂ: 45.00 ಲಕ್ಷದ ಮೊತ್ತದ ಕಾಮಗಾರಿಗೆ
ಕುಂಬಾರಕೊಪ್ಪಲು ಗ್ರಾಮಾಭ್ಯುದಯ ಸಂಘಕ್ಕೆ ಸೇರಿದ ರಾಮಮಂದಿರ ಕಟ್ಟಡದ ಸಮಗ್ರ ಜೀರ್ಣೋದ್ದಾರದ ರೂ: 12.00 ಲಕ್ಷದ ಕಾಮಗಾರಿಗೆ
ಹೀಗೆ ಒಂದು ಒಟ್ಟಾರೆ ಅನುದಾನ ರೂ. 4 ಕೋಟಿ 32 ಲಕ್ಷದ ಕಾಮಗಾರಿಗಳಿಗೆ ಚಾಲನೆ ನೀಡಿದರು
*ಅಂತಿಮವಾಗಿ ಕುಂಬಾರಕೊಪ್ಪಲು ಮೇಗಲ ರಾಮಮಂದಿರದಲ್ಲಿ ಸುಮಾರು 73 ಜನರಿಗೆ ವಿಧವಾ ವೇತನ, ಸಂದ್ಯಾಸುರಕ್ಷಾ, ಅಂಗವಿಕಲ ಪಿಂಚಣಿ, ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಭಾ.ಜ.ಪ ಪ್ರಧಾನ ಕಾರ್ಯದರ್ಶಿ ಪುನೀತ್ ಗೌಡ ವಾರ್ಡ್ ಗಳ ಅಧ್ಯಕ್ಷರುಗಳಾದ ಶ್ರೀನಾಥ್, ರಾಮೇಗೌಡ, ನರಸಿಂಹ, ಆರಾಧನಾ ಸಮಿತಿ ಸದಸ್ಯ ಭೈರಪ್ಪ, ರೈತ ಮೋರ್ಚಾ ಅಧ್ಯಕ್ಷ ಎಂ.ಕುಮಾರ್, ಮೈಸೂರು ಚೇಂಬರ್ ಆಫ್ ಕಾಮರ್ಸ ಅಧ್ಯಕ್ಷ ಶ್ರೀ ನಿಂಗರಾಜು, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ರಾಮಕೃಷ್ಣ, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ಮಹಿಳಾ ಮೋರ್ಚಾ ಪುಷ್ಪ ವೆಂಕಟೇಶ್ ರವರುಗಳು,
ಮಹದೇಶ್ವರ ಬಡಾವಣೆಯಲ್ಲಿ ಮಾದೇಶ್, ಶಿವರಾಂ, ಗೋಪಿ, ನೀಲಕಂಠ, ಸತೀಶ್, ಸೀನ ಗೋಲ್ಡ್, ಪ್ರತಾಪ್, ಕೀರ್ತಿ, ಸತೀಶ್ ಚಂದ್ರ, ಅಭಿಲಾಷ್, ಅವಿನಾಶ್, ಶೋಭಾ, ಪದ್ಮಶ್ರೀ, ಪದ್ಮ, ಪ್ರೇಮ, ಯಮುನ, ಸುನೀತ, ನಾಗರತ್ನ, ಮುಂತಾದವರು,
ಲೋಕನಾಯಕನಗರದ ಭೂಮಿ ಪೂಜೆಯಲ್ಲಿ ದಿನೇಶ್, ಮಹೆಂದ್ರ, ಅರುಣ್, ಆರ್ಟ್ಸ ರಾಮು, ಶ್ರೀನಿವಾಸಗೌಡ, ಅವದೇವ್ ಸಿಂಗ್, ದೇವೇಗೌಡ, ಆಟೋ ಚಂದ್ರು, ಸಿ.ಎಂ. ಕೃಷ್ಣ, ಬಸವರಾಜು, ಮಹೇಶ್, ಬೋರೇಗೌಡ, ಪಳನಿ, ಕೃಷ್ಣಪ್ಪ ಮುಂತಾದವರು.
ಕುಂಬಾರಕೊಪ್ಪಲು ಭೂಮಿ ಪೂಜೆ ಕಾರ್ಯಕ್ರಮದಲ್ಲಿ, ದಳಪತಿ ರಾಮೇಗೌಡರು, ಬಸವೇಗೌಡರು, ನರಸಿಂಹ, ಅಶ್ವಥ, ಪ್ರಮೋದ್, ನವೀನ, ಮಾಜಿ ಕಾರ್ಪೋರೇಟರ್ ಜಯರಾಮ್, ರಮೇಶ್, ರಾಮು, ಮೈಕ್ ಭೈರಪ್ಪ, ಪ್ರವೀಣ್, ಮೋಹನ್ ಮುಂತಾದವರು,
ಅಧಿಕಾರಿಗಳಾದ ಮಹಾನಗರಪಾಲಿಕೆ ಕಾರ್ಯಪಾಲಕ ಇಂಜಿನಿಯರ್, ಮಧುಸೂಧನ್, ಅಭಿವೃದ್ದಿ ಅಧಿಕಾರಿ ಮನುಗೌಡ, ಇಂಜಿನಿಯರುಗಳಾದ ಅಶ್ವಿನಿ, ಅರ್ಚನಾ, ಗುತ್ತಿಗೆದಾರರಾದ ಶ್ರೀ ಅಶೋಕ್ ಗೋವಿಂದೇಗೌಡ ಹಾಗೂ ಹರ್ಷ, ಉಪ ತಹಸೀಲ್ದಾರ್ ಶ್ರೀಮತಿ ರೂಪ, ರಾಜಸ್ವ ನಿರೀಕ್ಷಕ ಮಹೇಂಧ್ರ ಮುಂತಾದವರು ಹಾಜರಿದ್ದರು.