
ಜೆ.ಸಿ.ಬಡಾವಣೆಯಲ್ಲಿ ಚಿರತೆ ದಾಳಿಗೆ ಕರು ಬಲಿ…ಸ್ಥಳೀಯರಲ್ಲಿ ಆತಂಕ…
- CrimeMysore
- January 25, 2023
- No Comment
- 219
ಜೆ.ಸಿ.ಬಡಾವಣೆಯಲ್ಲಿ ಚಿರತೆ ದಾಳಿಗೆ ಕರು ಬಲಿ…ಸ್ಥಳೀಯರಲ್ಲಿ ಆತಂಕ…
ಮೈಸೂರು,ಜ25,Tv10 ಕನ್ನಡ
ಮೈಸೂರಿನ ಜೆ ಸಿ ಬಡಾವಣೆಯಲ್ಲಿ ಚಿರತೆ ದಾಳಿಗೆ ಕರು ಬಲಿಯಾಗಿದೆ.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಜೆ ಸಿ ಬಡಾವಣೆಯಲ್ಲಿ ಘಟನೆ ನಡೆದಿದೆ.
ಚಿರತೆ ಕಂಡು ಸ್ಥಳೋಯರು ಆತಂಕಗೊಂಡಿದ್ದಾರೆ.
ಚಾಮುಂಡಿಬೆಟ್ಟದ ಕಿರು ಅರಣ್ಯದಿಂದ ಬಂದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ನಜರ್‌ಬಾದ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಅಭಯ ನೀಡಿದ್ದಾರೆ.ಜನರು ಸುರಕ್ಷಿತವಾಗಿರುವಂತೆ ಸೂಚನೆ ನೀಡಿದ್ದಾರೆ…