ಜಮೀನು ವಿವಾದ…ಮದ್ದೂರು ತಾಲೂಕು ಕಚೇರಿಯಲ್ಲಿ ಕೊಲೆ ಯತ್ನ…ಮೊಚ್ಚಿನಿಂದ ಮಾರಣಾಂತಿಕ ಹಲ್ಲೆ…
- Crime
- January 24, 2023
- No Comment
- 89
ಜಮೀನು ವಿವಾದ…ಮದ್ದೂರು ತಾಲೂಕು ಕಚೇರಿಯಲ್ಲಿ ಕೊಲೆ ಯತ್ನ…ಮೊಚ್ಚಿನಿಂದ ಮಾರಣಾಂತಿಕ ಹಲ್ಲೆ…
ಮದ್ದೂರು,ಜ24,Tv10 ಕನ್ನಡ
ಜಮೀನು ವಿವಾದ ಹಿನ್ನಲೆ ತಾಲೂಕು ಕಚೇರಿಯಲ್ಲಿ ಹತ್ಯೆಗೆ ಯತ್ನ ನಡೆಸಿದ ಘಟನೆ ಮದ್ದೂರಿನಲ್ಲಿ ನಡೆದಿದೆ.ತಹಶೀಲ್ದಾರ್ ಕೋರ್ಟ್ ಗೆ ಬಂದಿದ್ದಾಗ ಕೃತ್ಯ ನಡೆದಿದೆ.ಇಂದು ತಹಶೀಲ್ದಾರ್ ಕೋರ್ಟ್ ನಲ್ಲಿ ವಿಚಾರಣೆ ಇತ್ತು.
ನಂದನ್ ಕುಟುಂಬಕ್ಕೆ ಸೇರಿದ ಜಮೀನನ್ನ ಚೆನ್ನರಾಜು ಎಂಬುವರು ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದ ಪ್ರಕರಣ ಇತ್ತು.ಈ ಸಂಭಂಧ
ಚನ್ನರಾಜು ಮತ್ತು ನಂದನ್ ಕುಟುಂಬದ ನಡುವೆ ವೈಮಷ್ಯ ಇತ್ತು.
ಪ್ರಕರಣ ಸಂಬಂಧ ತಹಶೀಲ್ದಾರ್ ಕೋರ್ಟ್ ಮೆಟ್ಟಿಲೇರಿತ್ತು.ಜಮೀನು ಕಬಳಿಸಿದ ಆರೋಪದ ಹಿನ್ನೆಲೆ ಚನ್ನರಾಜು ಮೇಲೆ ನಂದನ್ ವೈಷಮ್ಯ ಬೆಳೆಸಿಕೊಂಡಿದ್ದ.
ಇಂದು ತಹಶೀಲ್ದಾರ್ ಕೋರ್ಟ್ ಬಳಿ ವಾದ-ವಿವಾದ ನಡೆದಿತ್ತು.ಮೊದಲೇ ಕುಡುಗೋಲು ತಂದಿದ್ದ ನಂದನ್
ಮೊದಲ ಮಹಡಿಯಲ್ಲಿರುವ ತಹಶೀಲ್ದಾರ್ ಕಚೇರಿಯಿಂದ ಮಚ್ಚಿನಿಂದ ದಾಳಿ ಮಾಡಿದ್ದಾನೆ. ಹಲ್ಲೆ ನಡೆಸುತ್ತಲೇ ಓಡಿಸಿಕೊಂಡು ಬಂದಿದ್ದಾನೆ.
ತಹಶೀಲ್ದಾರ್ ಕಚೇರಿ ಕೆಳಗಡೆ ಕಾಂಪೌಂಡ್ ಬಳಿ ಉರುಳಿ ಬಿದ್ದಾಗ ಮನಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಹಲ್ಲೆ ಮಾಡ್ತಿದ್ದ ನಂದನ್ ಮೇಲೆ ಸಾರ್ವಜನಿಕರು ಕಲ್ಲು ತೂರಿದ್ದಾರೆ.ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ನಂದನ್ ಗೂ ಮನಬಂದಂತೆ ಥಳಿಸಿದ್ದಾರೆ…