TV10 Kannada Exclusive

ಮೈಸೂರಿನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತದಾನ

ಕುವೆಂಪುನಗರದ ಜ್ಞಾನಂಗಂಗಾ (ಮತಗಟ್ಟೆ ಸಂಖ್ಯೆ 26)ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು 2023ರ ಚುನಾವಣಾ ರಾಯಬಾರಿ ಜಾವಗಲ್ ಶ್ರೀನಾಥ್ ಅವರು ಮತದಾನ ಮಾಡಿದರು.
Read More

ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಮತದಾನ…

ಮೈಸೂರು,Tv10 ಕನ್ನಡನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಬಾನತೋಡ್ ಮತಚಲಾಯಿಸಿದರು.ಜಲಪುರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.ಪತ್ನಿ ಸಮೇತ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು…
Read More

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತದಾನ…

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತದಾನ… ಮೈಸೂರು,Tv10 ಕನ್ನಡಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಇಂದು ಮತಗಟ್ಟೆ ಸಂಖ್ಯೆ 139, ಸಿಎಫ್ ಟಿ ಆರ್ ಐ ಶಾಲೆಯಲ್ಲಿ ಮತದಾನ ಮಾಡಿದರು…
Read More

ಮತದಾನ ಜಾಗೃತಿಗೆ ಆಮಂತ್ರಣ ಪತ್ರಿಕೆ…ಮದುವೆ ಮಾದರಿಯಲ್ಲಿ ಮುದ್ರಿಸಿ ಹಕ್ಕು ಚಲಾಯಿಸಲು ಆಹ್ವಾನ…

ಮತದಾನ ಜಾಗೃತಿಗೆ ಆಮಂತ್ರಣ ಪತ್ರಿಕೆ…ಮದುವೆ ಮಾದರಿಯಲ್ಲಿ ಮುದ್ರಿಸಿ ಹಕ್ಕು ಚಲಾಯಿಸಲು ಆಹ್ವಾನ… ಮೈಸೂರು,ಮೇ9,Tv10 ಕನ್ನಡ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.ಉತ್ತಮ ಸರ್ಕಾರ ಆಯ್ಕೆ ಮತದಾರರ ಕೈಲಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕು ಚಲಾಯಿಸುವ ಮೂಲಕ ಉತ್ತಮ ಸರ್ಕಾರ ರಚಿಸಲು ಸಾಧ್ಯ.ಈ ಹಿನ್ನಲೆ ಮತದಾನದಲ್ಲಿ ಭಾಗವಹಿಸುವಂತೆ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ವಿಶೇಷವಾಗಿ ಜಾಗೃತಿ ಮೂಡಿಸಲಾಗಿದೆ. ಮತದಾನಕ್ಕೆ ಮದುವೆ ಮಾದರಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಸಾರ್ವಜನಿಕರಿಗೆ
Read More

ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಿ…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕರೆ…

ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಿ…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕರೆ… ಮೈಸೂರು,ಮೇ9,Tv10 ಕನ್ನಡನಾಳೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸುವಂತೆ ಮತದಾರರಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕರೆ ನೀಡಿದ್ದಾರೆ.ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಮತದನಾನ ಪ್ರಕ್ರಿಯೆ ನಡೆಯಲಿದೆ.ತಮಗೆ ನಿಗದಿಯಾಗಿರುವ ಕೇಂದ್ರಗಳಿಗೆ ತೆರಳಿ ನಿರ್ಭೀತಿಯಿಂದ ಮತಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ…
Read More

ವಿಧಾನಸಭಾ ಚುನಾವಣೆ 2023…ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ…ಪರಿಶೀಲನೆ..

ವಿಧಾನಸಭಾ ಚುನಾವಣೆ 2023…ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ…ಪರಿಶೀಲನೆ.. ಮೈಸೂರು,ಮೇ9,Tv10 ಕನ್ನಡ ನಾಳೆ(ಬುಧುವಾರ 10) ನಡೆಯಲಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತಗಟ್ಟೆ ಅಧಿಕಾರಿಗಳು ಮತ್ತು ಮೈಕ್ರೋ ಅಬ್ಸರ್ವ್ ರ್ ಗಳಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರದಿಂದ ಮಸ್ಟರಿಂಗ್ ಕೇಂದ್ರಕ್ಕೆ ಹೋಗಲು ಇಂದು ಬೆಳಿಗ್ಗೆ 6ಗಂಟೆಗೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ.ಸಿಬ್ಬಂದಿ ತೆರಳಲು ಹಾಗೂ ಅಲ್ಲಿಂದ ಹಿಂದಿರುಗಲು ಒಟ್ಟು 481
Read More

ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಆಚರಿಸಿ…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕರೆ…

ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಆಚರಿಸಿ…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕರೆ… ಮೈಸೂರು,ಮೇ5,Tv10 ಕನ್ನಡಮೇ 10 ರಂದು ನಡೆಯಲಿರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಆಚರಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಕರೆ ನೀಡಿದ್ದಾರೆ.ಇಂದು ನಗರದಲ್ಲಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸ್ವೀಪ್ ವತಿಯಿಂದ ಆಯೋಜಿಸಲಾಗಿದ್ದ ವಿಂಟೇಜ್ ಕಾರು ಮತ್ತು ಟಾಂಗಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಚುನಾವಣಾ ಅಕ್ರಮಗಳನ್ನು ತಡೆಯುವ
Read More

ರೈತರನ್ನು ಉಳಿಸಲು ಏನು ಮಾಡುತ್ತೀರಿ…ಬಿಜೆಪಿ ಗೆ ಅನ್ನದಾತನ ಪ್ರಶ್ನೆ…ಮನೆ ಮನೆಗೆ ಕರಪತ್ರ ಹಂಚಿ ಅಭಿಯಾನ…

ರೈತರನ್ನು ಉಳಿಸಲು ಏನು ಮಾಡುತ್ತೀರಿ…ಬಿಜೆಪಿ ಗೆ ಅನ್ನದಾತನ ಪ್ರಶ್ನೆ…ಮನೆ ಮನೆಗೆ ಕರಪತ್ರ ಹಂಚಿ ಅಭಿಯಾನ… ಮೈಸೂರು,ಮೇ5,Tv10 ಕನ್ನಡಬಿಜೆಪಿ ಆಡಳಿತ ವೈಖರಿ ಬಗ್ಗೆ ಅನ್ನದಾತರಿಗೆ ಅಸಮಾಧಾನವಿದೆ.ರೈತರನ್ನ ಕಡೆಗಣಿಸಿರುವ ಬಿಜೆಪಿ ವಿರುದ್ದ ಸಿಡಿದೆದ್ದಿದ್ದಾರೆ.ರೈತರಿಗೆ ಏನು ಮಾಡುತ್ತೀರಿ ಎಂದು ಬಿಜೆಪಿ ಗೆ ಪ್ರಶ್ನಿಸಿ ಕರಪತ್ರ ಮುದ್ರಿಸಿ ಮನೆ ಮನೆಗೆ ತಲುಪಿಸುವ ಅಭಿಯಾನಕ್ಕೆ ವರುಣಾ ಕ್ಷೇತ್ರದಲ್ಲಿ ಚಾಲನೆ ನೀಡಲಾಗಿದೆ.ಇಂದು ವರುಣಾ ಕ್ಷೇತ್ರದ ಕೋಚನಹಳ್ಳಿ,ಹೆಬ್ಯಾ,ತಾಂಡವ ಪುರ, ಹೆಜ್ಜಿಗೆ, ನಿಮ್ಮಾವು ಹುಳಿಮಾವು, ಹೊಸಕೋಟೆ, ಹದಿನಾರು,ಅಡಕನಹ್ಳಿಹುಂಡಿ,ಬಂಚಳ್ಳಿಹುಂ,ಡಿ ಬಸವನಪುರ, ಕೆಂಪಿಸಿದ್ದನ ಹುಂಡಿ,
Read More

ವಿಧಾನಸಭಾ ಚುನಾವಣೆ ಹಿನ್ನಲೆ…ಮೇ 10 ರಂದು ಸಾರ್ವಜನಿಕ ರಜೆ ಘೋಷಣೆ…

ಮೈಸೂರು,ಮೇ4,Tv10 ಕನ್ನಡಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನಲೆ ರಾಜ್ಯದಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ.ನೆಗೋಷಿಯೆಬಲ್ ಇನ್ಸಟ್ರೂಮೆಂಟ್ ಆಕ್ಟ್ ಅನ್ವಯದಂತೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ,ಪಬ್ಲಿಕ್ ಸೆಕ್ಟಾರ್ ಗಳಿಗೆ,ಕೈಗಾರಿಕೆಗಳಿಗೆ ರಜೆ ಘೋಷಿಸುವಂತೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.ಮೇ 10 ನೇ ತಾರೀಖನ್ನ pay wages holiday ಎಂದು ಪರಿಗಣಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ…
Read More

ಬಾಂಬೆ ಟಿಫಾನಿಸ್ ಮೇಲೆ ಐಟಿ ರೇಡ್…ದಾಖಲೆಗಳ ಪರಿಶೀಲನೆ…ಕೇಂದ್ರ ತಂಡದಿಂದ ದಾಳಿ…

ಮೈಸೂರು,ಮೇ3,Tv10 ಕನ್ನಡಸಿಹಿತಿಂಡಿಗಳ ತಯಾರಿಕಾ ಕ್ಷೇತ್ರದಲ್ಲಿ ಹೆಸರಾದ ಬಾಂಬೆ ಟಿಫಾನಿಸ್ ಮೇಲೆ ಐಟಿ ದಾಳಿ ನಡೆದಿದೆ.ಮೈಸೂರಿನ ಡಿ.ದೇವರಾಜ ಅರಸ್ ರಸ್ತೆಯಲ್ಲಿರುವ ಬಾಂಬೆ ಟಿಫಾನಿಸ್ ಮೇಲೆ ದಾಳಿ ನಡೆದಿದೆ.ಅನಿಲ್ ಎಂಬುವರ ಮಾಲೀಕತ್ವದಲ್ಲಿರುವ ಸಂಸ್ಥೆ ಮೇಲೆ ದಾಳಿ ನಡೆಸಲಾಗಿದೆ.ಯಾದವಗಿರಿಯಲ್ಲಿರುವ ನಿವಾಸ ಹಾಗೂ ಆರ್.ಟಿ.ಓ.ಕಚೇರಿ ಬಳಿ ಇರುವ ನಿವಾಸಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆದಿದೆ.ಮುಂಜಾನೆ 5 ಗಂಟೆ ವೇಳೆಗೆ ದಾಳಿ ನಡೆಸಿದ ಕೇಂದ್ರ ತಂಡ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದೆ.20 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ
Read More