ಮತದಾನ ಜಾಗೃತಿಗೆ ಆಮಂತ್ರಣ ಪತ್ರಿಕೆ…ಮದುವೆ ಮಾದರಿಯಲ್ಲಿ ಮುದ್ರಿಸಿ ಹಕ್ಕು ಚಲಾಯಿಸಲು ಆಹ್ವಾನ…
- MysoreTV10 Kannada Exclusive
- May 9, 2023
- No Comment
- 55
ಮತದಾನ ಜಾಗೃತಿಗೆ ಆಮಂತ್ರಣ ಪತ್ರಿಕೆ…ಮದುವೆ ಮಾದರಿಯಲ್ಲಿ ಮುದ್ರಿಸಿ ಹಕ್ಕು ಚಲಾಯಿಸಲು ಆಹ್ವಾನ…
ಮೈಸೂರು,ಮೇ9,Tv10 ಕನ್ನಡ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.ಉತ್ತಮ ಸರ್ಕಾರ ಆಯ್ಕೆ ಮತದಾರರ ಕೈಲಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕು ಚಲಾಯಿಸುವ ಮೂಲಕ ಉತ್ತಮ ಸರ್ಕಾರ ರಚಿಸಲು ಸಾಧ್ಯ.ಈ ಹಿನ್ನಲೆ ಮತದಾನದಲ್ಲಿ ಭಾಗವಹಿಸುವಂತೆ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ವಿಶೇಷವಾಗಿ ಜಾಗೃತಿ ಮೂಡಿಸಲಾಗಿದೆ. ಮತದಾನಕ್ಕೆ ಮದುವೆ ಮಾದರಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಸಾರ್ವಜನಿಕರಿಗೆ ಹಾಗೂ ಮನೆಮನೆಗೆ ತೆರಳಿ ಆಹ್ವಾನ ಪತ್ರಿಕೆ ತಲುಪಿಸುವ ಮೂಲಕ ಮತದಾನಕ್ಕೆ ಜಾಗೃತಿ ಮೂಡಿಸಿದ್ದಾರೆ.
ಭಾರತ ಸರ್ಕಾರ ಹೆಸರಿನಲ್ಲಿ ಈ ಚುನಾವಣೆ ಆಯೋಗದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ.ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ 1945 ಸರಿಯಾದ ಶ್ರೀಶೋಭಕೃತ್ ನಾಮಸಂವತ್ಸರ ದಿನಾಂಕ 10.5.2023 ರ ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಲ್ಲುವ ಶುಭ ಗಳಿಗೆಯಲ್ಲಿ ಮತದಾನ ಚುನಾವಣೆಯೋತ್ಸವ ನೆರವೇರುವಂತೆ ಭಾರತ ಸರ್ಕಾರ ನಿಶ್ಚಯಿಸಿರುವುದರಿಂದತಾವು ಸಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಸ್ವ ಇಚ್ಛೆಯಂತೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಭಾರತದ ಭವಿಷ್ಯವನ್ನು ರೂಪಿಸಬೇಕೆಂದು ಕೋರುವ ತಮ್ಮ ಆಗಮನಾಭಿಲಾಷಿಗಳು. ಭಾರತ ಚುನಾವಣೆ ಆಯೋಗ ಸ್ಥಳ ತಮ್ಮ ತಮ್ಮ ಮತಗಟ್ಟೆ ಕೇಂದ್ರ ಎಂದು ಆಹ್ವಾನ ಕೊರಲಾಗಿದೆ.ವಿಶೇಷ ಸೂಚನೆಯಾಗಿ ದಯವಿಟ್ಟು ಉಡುಗೊರೆ ಕೊಡಬೇಡಿ ಮತ್ತು ಪಡೆಯಬೇಡಿ ಬಲಿಷ್ಠ ಭಾರತ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ.ಹಣ ಕೇಳದೆ ಮತನೀಡಿ ಆಶೀರ್ವದಿಸಿ ಎಂದು ಮುದ್ರಿಸಲಾಗಿದೆ. ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ವಿಶೇಷವಾಗಿ ಮತದಾನ ಜಾಗೃತಿ ಮೂಡಿಸಲಾಗಿದೆ.
ಇದೇ ಸಂದರ್ಭದಲ್ಲಿ ಕೆ ಎಂ ಪಿ ಕೆ ಚರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಎಸ್ ಎನ್ ರಾಜೇಶ್,ಆನಂದ್, ಆದರ್ಶ್, ಗಿರೀಶ್, ಸುಚೇಂದ್ರ, ಚಕ್ರಪಾಣಿ, ಹಾಗೂ ಭಾಗವಹಿಸಿದರು…