- January 29, 2023
ಉತ್ತಮ ಸಾಧನೆ ಮಾಡಲು ಶಿಕ್ಷಣ ಮುಖ್ಯ ಉದ್ಯೊಮಿ ಬಿಳಿಗೆರೆ ಮಾದೇಗೌಡ

ಉತ್ತಮ ಸಾಧನೆ ಮಾಡಲು ಶಿಕ್ಷಣ ಮುಖ್ಯ ಉದ್ಯೊಮಿ ಬಿಳಿಗೆರೆ ಮಾದೇಗೌಡ

ತಮ್ಮ ಶಿಕ್ಷಣದ ಜೀವನ ನೆನೆದು ಕಣ್ಣೀರಿಟ್ಟ ಸಮಾಜ ಸೇವಕ ಕುರುಬರ ಸಂಘದ ನಿರ್ದೇಶಕ ಉದ್ಯಿಮಿ ಮಾದೇಗೌಡ
ಟಿ ಎಸ್ ಸುಬ್ಬರಾವ್ ಘಾಟ್ಕೆ ಸಾಧನ ಪ್ರಶಸ್ತಿ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು
ಹುಣಸೂರು ತಾಲ್ಲೂಕಿನ ಗಾವಡಗೆರೆ ಟಿ ಎಸ್ ಸುಬ್ಬರಾವ್ ಘಾಟ್ಕೆ ಸರ್ಕಾರಿ ಪಬ್ಲಿಕ್ ಫ್ರೌಡ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು ಹಾಗೂ ಶಿಕ್ಷಣಕ್ಕಾಗಿ ಮತ್ತು ಸಮಾಜದ ಉದ್ಧಾರಕ್ಕಾಗಿ 15ಎಕರೆ ಜಾಗವನ್ನು ದಾನ ಮಾಡಿದ ಟಿ ಎಸ್ ಸುಬ್ಬರಾವ್ ಘಾಟ್ಕೆ ಅವರ ಹೆಸರಿನಲ್ಲಿ ಪ್ರಶಸ್ತಿ ಪುರಸ್ಕಾರ ನೀಡಲಾಯಿತು ಹಾಗೂ ಸುಬ್ಬರಾವ್ ಅವರ ಪತ್ನಿ ಕೃಷ್ಣ ಭಾಯಿ ಅವರಿಗೆ ಸನ್ಮಾನ ಮಾಡಲಾಯಿತು
ಇನ್ನು ಹಳೆಯ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ನೆನೆಸಿಕೊಳ್ಳುವ ಮೂಲಕ ಗುರುಗಳ ಸ್ನೇಹ ಸಂಬಂಧ ಬಗ್ಗೆ ಮೆಲುಕು ಹಾಕಿದರು
ಶಿಕ್ಷಕರಿಗೆ ಸನ್ಮಾನ ಮಾಡಿ ಗೌರವಿಸಿದ ವಿದ್ಯಾರ್ಥಿಗಳು ತಮ್ಮ ಹಳೆಯ ಸ್ನೇಹಿತರನ್ನು ಕಂಡು ಸಂತೋಷ ಪಟ್ಟರು ಇದೇ ಸಂದರ್ಭದಲ್ಲಿ ಗ್ರಾಮದ ಮಾದೇಗೌಡ ಅವರು ನಾನು ಎಸೆಸೆಲ್ಸಿ ಪರೀಕ್ಷೆ ಬರೆಯದೆ ಬೆಂಗಳೂರು ಸೇರಿದೆ ಆದರೆ ಆಮೇಲೆ ಗೊತ್ತಾಗಿದ್ದು ನಾವು ಏನೇ ಮಾಡಿದರೂ ಅದಕ್ಕೆ ವಿದ್ಯಾ ತುಂಬಾ ಮುಖ್ಯ ಎಂದು ಮತ್ತೆ ಎರಡು ವರ್ಷ ಬಿಟ್ಟು ಎಸೆಸೆಲ್ಸಿ ಪರೀಕ್ಷೆ ಬರೆದು ಜಸ್ಟ್ ಪಾಸ್ ಮಾಡಿದೆ ನನ್ನ ಎಲ್ಲ ಶಿಕ್ಷಕರ ಸಹಾಯದಿಂದ ಪರೀಕ್ಷೆ ಬರೆದು ಈವತ್ತು ಎರಡು ಕಂಪನಿ ಮಾಲೀಕ ಆಗಿದ್ದೇನೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಕ್ಕೆದೆ ಆದರೆ ಅವತ್ತು ಇನ್ನು ಹೆಚ್ಚಿನ ಶಿಕ್ಷಣ ಪಡೆದಿದ್ದಾರೆ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಅವಕಾಶ ಇತ್ತು ಅದನ್ನು ಕಳೆದುಕೊಂಡೆ ಎಂದು ಕಣ್ಣೀರಿಟ್ಟರು
ಈಗಿನ ಮಕ್ಕಳು ಶಿಕ್ಷಕರನ್ನು ಗೌರವಿಸಿ ಉತ್ತಮ ಸಂಬಂಧ ಇಟ್ಟಿಕೊಂಡು ಉತ್ತಮ ಶಿಕ್ಷಣ ಪಡೆಯಿರಿ ಯಾವುದೋ ಕೆಟ್ಟ ಚಟಕ್ಕೆ ಬಿದ್ದು ನಿಮ್ಮ ಜೀವನವನ್ನು ಹಾಳುಮಾಡಿಕೊಳ್ಳಬೇಡಿ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಮಕ್ಕಳು ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು