ಮೈಸೂರು ಕಲಾವಿದನ ಕೈ ಚಳಕದಿಂದ ಅರಳಿದ ಡಾ.ವಿಷ್ಣು ಪ್ರತಿಮೆ…ಸ್ಮಾರಕದ ಬಳಿ ಇಂದು ಸ್ಥಾಪನೆ…
- Uncategorized
- January 29, 2023
- No Comment
- 140
ಮೈಸೂರು ಕಲಾವಿದನ ಕೈ ಚಳಕದಿಂದ ಅರಳಿದ ಡಾ.ವಿಷ್ಣು ಪ್ರತಿಮೆ…ಸ್ಮಾರಕದ ಬಳಿ ಇಂದು ಸ್ಥಾಪನೆ…
ಮೈಸೂರು,ಜ29,Tv10 ಕನ್ನಡ
ಉದ್ಭೂರಿನ ಹಾಲಾಳು ಗ್ರಾಮದಲ್ಲಿ ಇಂದು ಲೋಕಾರ್ಪಣೆಯಾಗಲಿರುವ ಡಾ.ವಿಷ್ಣುವರ್ಧನ್ ಸ್ಮಾರಕದಲ್ಲಿ ಮತ್ತೊಂದು ಆಕರ್ಷಣೆ ಅಭಿಮಾನಿಗಳನ್ನ ಸೆಳೆಯಲಿದೆ. ಮೈಸೂರಿನ ಕಲಾವಿದ ಅರುಣ್‌ಯೋಗಿರಾಜ್ ಕೈಯಲ್ಲಿ ಅರಳಿದ ಡಾ. ವಿಷ್ಣುವರ್ಧನ್ ಪ್ರತಿಮೆ ಇಂದು ಸ್ಥಾಪನೆಯಾಗಲಿದೆ.
ಅರುಣ್ ಯೋಗಿರಾಜ್ ನೇತೃತ್ವದ 4 ಜನರ ತಂಡದಿಂದ 10 ದಿನಗಳಲ್ಲಿ ಪ್ರತಿಮೆ ತಯಾರಾಗಿದೆ.
11 ಲಕ್ಷ ವೆಚ್ಚದಲ್ಲಿ ಮೂರ್ತಿ ನಿರ್ಮಾಣವಾಗಿದೆ.ಸರ್ಕಾರದ ವತಿಯಿಂದ ತಯಸರಾದ ವಿಷ್ಣುವರ್ಧನ್ ಪ್ರತಿಮೆಗೆ ಕೃಷ್ಣಶಿಲೆ ಬಳಕೆ ಮಾಡಲಾಗಿದೆ.
ಸುಮಾರು 7 ಟನ್ ಕೃಷ್ಣ ಶಿಲೆ ಬಳಕೆ ಮಾಡಲಾಗಿದೆ.ಸುಮಾರು 7 ಅಡಿ ಎತ್ತರದ ಮೂರ್ತಿ ಒಂದೂ ಮುಕ್ಕಾಲು ಟನ್ ತೂಕ ಹೊಂದಿದೆ. ಆಕರ್ಷಕವಾದ ವಿಷ್ಣು
ಕೃಷ್ಣಶಿಲೆಯ ವಿಶೇಷತೆ ಎಂದರೆ ಬೆಂಕಿ, ಆ್ಯಸಿಡ್, ಗಾಳಿ ಬಿಸಿಲು ನೀರು ಸೇರಿದಂತೆ ಪ್ರತಿರೋಧಕ ಶಕ್ತಿ ಹೊಂದಿದೆ.
ಸತತ ಹತ್ತು ದಿನಗಳ ಸಮಯದಲ್ಲಿ ಮೂರ್ತಿ ತಯಾರಿಸಲಾಗಿದೆ. ಅರುಣ್ ಯೋಗಿರಾಜ್ ರವರ ಕಲೆಗೆ ಭಾರತಿ ವಿಷ್ಣುವರ್ಧನ್ ಮೆಚ್ಚುಗೆ ಸೂಚಿಸಿದ್ದಾರೆ…
ಇಂದು ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಯಾಗುತ್ತಿದೆ.ಇದು ಸಂತಸದ ವಿಚಾರ.ನಾನು ವಿಷ್ಣುವರ್ಧನ್ ಅಭಿಮಾನಿಯಾಗಿರೋದ್ರಿಂದ ನನಗೂ ಬಹಳ ಖುಷಿ ಇದೆ.ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದಾರೆ…