ಮೈ- ಬೆಂ ಹೆದ್ದಾರಿಯಲ್ಲಿ ವಿದ್ಯುತ್ ಕಂಬಗಳ ಅಡ್ಡಪಟ್ಟಿ ಕಳವು: ಅಪಾಯಕ್ಕೆ ಆಹ್ವಾನ
- Uncategorized
- January 31, 2023
- No Comment
- 128
ಮೈ- ಬೆಂ ಹೆದ್ದಾರಿಯಲ್ಲಿ ವಿದ್ಯುತ್ ಕಂಬಗಳ ಅಡ್ಡಪಟ್ಟಿ ಕಳವು: ಅಪಾಯಕ್ಕೆ ಆಹ್ವಾನ
ಮೈ- ಬೆಂ ನೂತನ ದಶಪಥ ಹೆದ್ದಾರಿಯ ಬಹುತೇಕ
ಮುಗಿಯುವ ಹಂತದಲ್ಲಿ ಇದೆ. ಇನ್ನೇನು ಉಧ್ಘಾಟನೆಗೆ ಕೂಡ ಸಿದ್ದವಾಗಿದ್ದು, ಈಗಾಗಲೇ ಹಲವೆಡೆ ಈ ಹೊಸ ಹೆದ್ದಾರಿಯಲ್ಲಿ ವಾಹನಗಳು ಕೂಡ ಸಂಚಾರ ಮಾಡ್ತಿವೆ. ಆದ್ರೆ ಕಬ್ಬಿಣದ ಕಳ್ಳರ ಕಾಟ ಇದೀಗ ಹೆದ್ದಾರಿಯಲ್ಲಿ ಸಂಚರಿಸುವರಿಗೆ ಕಂಟಕ ತಂದ್ದೊ
ಡಿದೆ. ಈ ಕಳ್ಳರ ಕಾಟದಿಂದ ಹೆದ್ದಾರಿ ಬದಿಯಲ್ಲಿ ನಿರ್ಮಿಸಿರೋ ಬೃಹತ್ ಎತ್ತರದ ವಿದ್ಯುತ್ ಕಂಬಗಳು ವಾಲುತ್ತಿದ್ದು ರಸ್ತೆಗೆ ಉರುಳುವ ಆತಂಕ ಎದುರಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಿದೆ.
ಹೌದು! ಕೆಲ ದಿನಗಳ ಹಿಂದೆಯಷ್ಟೆ ಬೆಂಗಳೂರಿನಲ್ಲಿ ಮೆಟ್ರೋ ಕಾಮ ಗಾರಿ ಸ್ಥಳದಲ್ಲಿ ಕಬ್ಬಿಣದ ಪಿಲ್ಲರ್ ಕಂಬ ಬೈಕ್ ನಲ್ಲಿ ಹೋಗುತ್ತಿ ದ್ದ ಕುಟುಂಬದ ಮೇಲೆ ಉರುಳಿ ಬಿದ್ದು ಎರಡು ಜೀವಗಳು ಬಲಿಯಾಗಿವೆ. ಇದೇ ರೀತಿಯ ಪ್ರಕರಣ ಇದೀಗ ನೂತನ ಮೈ- ಬೆಂ
ಹೆದ್ದಾರಿಯಲ್ಲಿ ನಡೆಯುವ ಸಾಧ್ಯತೆ ಇದ್ದು ವಾಹನ ಸವಾರರಲ್ಲಿ
ಆತಂಕ ತಂದಿದೆ.ಯಾಕೆಂದ್ರೆ ಈ ನೂತನ ಹೆದ್ದಾರಿಯ ಎರಡು ಬದಿಯಲ್ಲಿ ನಿರ್ಮಿಸಿರೋ ಎತ್ತರದ ವಿದ್ಯುತ್ ತಳಪಾಯದ ಅಡ್ಡಪಟ್ಟಿ ಬಹುತೇಕ ಕಳ್ಳತನವಾಗಿದೆ. ಇದರಿಂದಾಗಿ ಈ ಬೃಹತ್ ಎತ್ತರದ ವಿದ್ಯುತ್ ಕಂಬಗಳು ಅಸ್ಥಿ ಪಂಜರದಂತೆ ಕಾಣುತ್ತಿದ್ದು, ರಸ್ತೆ
ಮದ್ಯೆ ವಾಲುವ ಹಂತದಲ್ಲಿವೆ. ಜೋರಾಗಿ ಗಾಳಿ ಬೀಸಿದರೆ ಈ ವಿದ್ಯುತ್ ಕಂಬಗಳು ಮುರಿದು ಬಿದ್ದು ಅಪಾಯ ಸಂಭವಿಸುವ
ಸಾಧ್ಯತೆ ಇದ್ದು,ಜನರು ಮತ್ತು ವಾಹನಗಳ ಮೇಲೆ ಬಿದ್ದರೆ ಮತ್ತೊಂದು ಬೆಂಗಳೂರಿನಂತ ಪ್ರಾಣಾಪಾಯದ ದುರ್ಘಟನೆ ಸಂಭವಸಲಿದ್ದು ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದವರು ಎಚ್ಚೆ ತ್ತುಕೊಳ್ಳಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.
ಬೈಕ್ ಸವಾರ:ಇನ್ನು ಮಂಡ್ಯ ಜಿಲ್ಲೆಯಲ್ಲಿ ಮದ್ದೂರು ಮಂಡ್ಯ,ಶ್ರೀರಂಗ ಪಟ್ಟಣ ಮಾರ್ಗವಾಗಿ ಈ ನೂತನ ಹೆದ್ದಾರಿ ಹಾದುಹೋಗಿದೆ.ಈ ಹೆದ್ದಾರಿ ಬದಿಯಲ್ಲಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಬೃಹತ್
ಕಬ್ಣಿಣ ಮತ್ತು ಉಕ್ಕಿನಿಂದ ಎತ್ತರದ ವಿದ್ಯುತ್ ಕಂಬಗಳನ್ನು ನಿರ್ಮಿಸಿಸಿದ್ದಾರೆ. ಆದ್ರೆ ಈ ವಿದ್ಯುತ್ ಕಂಬಗಳಲ್ಲಿನ ತಳಬದಿಯ
ಅಡ್ಡಪಟ್ಟಿನ್ನು ಕಳ್ಳರು ಕದ್ದೋಯ್ದಿದ್ದಾರೆ.ಇದರಿಂದಾಗಿ ಈ ಕಂಬಗಳು ಅಸ್ಥಿ ಪಂಜರದಂತೆ ಹೆದ್ದಾರಿ ಬದಿಯಲ್ಲಿ ನಿಂತಿವೆ. ಈ ಕಂಬಗಳು ನೆಲದಿಂದ ಸುಮಾರು 25 ಅಡಿ ಎತ್ತರವಿದ್ದು ಇದರಲ್ಲಿ 12 ಅಡಿಗಳ ಎತ್ತರದಷ್ಟು ಕಂಬದ ಕೆಳಗಿನ ಅಡ್ಡಪಟ್ಟಿಗಳನ್ನು ಕಳ್ಳರು ಬಿಚ್ಚಿ ಕದ್ದೋಯ್ದಿದ್ದಾರೆ. ಇದರಿಂದಾಗಿ ಈ ಕಂಬಗಳು ಬಹುತೇಕ ಕಡೆ ವಾಲಿದ್ದು ಜೋರಾಗಿ ಗಾಳಿ ಬೀಸಿದರೆ ಹೆದ್ದಾರಿಗೆ ಉರುಳಿ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಹಲವು ಬಾರಿ ರಸ್ತೆ ಬದಿಯ ಜಮೀನ ರೈತರು ಹೆದ್ದಾರಿ ಪ್ರಾದಿಕಾರದವರಿಗೆ ಕಳ್ಳರು ಮತ್ತು ಕುಡುಕ ಈ ಕಂಬಗಳ ಅಡ್ಡಪಟ್ಟಿಯನ್ನು ಬಿಚ್ಚೋಯ್ದತ್ತಿರುವ ಮಾಹಿತಿ ನೀಡಿದ್ರು, ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎಂದು ರೈ ತರು ಆರೋಪಿದ್ದಾರೆ.
ಕುಳ್ಳೇಗೌಡ ರೈತ: ಇನ್ನು ಈಗಾಗಲೇ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಓ ಡಾಟ ಕೂಡ ಆರಂಭವಾಗಿದ್ದು ಜೋರಾದ ಗಾಳಿ ಬೀಸಿದರೆ ಖಂಡಿತ ಅಪಾಯ ಸಂಭವಿಸಲಿದೆ. ಅಪಾಯ ಸಂಭವಿಸಿ ಜೀವಹಾನಿಯಾಗುವ ಮುನ್ನಾ ಈ ಕೂಡಲೇ ಹೆದ್ದಾರಿ ಅಧಿಕಾರಿಗಳು ಇತ್ತ ಗಮನ ಹರಿಸಿ ಇದರ ರಕ್ಷಣೆಗೆ ಕ್ರಮ ವಹಿಸಿ ವಾಲುವ ಸ್ಥಿತಿ ಯಲ್ಲಿರುವ ವಿದ್ಯುತ್ ಕಂಬಗಳನ್ನು ದುರಸ್ಥಿ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.