ಸರ್ಕಾರದ ಬೊಕ್ಕಸಕ್ಕೆ ಕನ್ನ…ಭೂಕಂದಾಯ ರಸೀತಿಯಲ್ಲಿ ವಂಚನೆ…ಕಚೇರಿ ಕಾಪಿಯಲ್ಲಿ ಒಂದು ಮೊತ್ತ…ರೈತರಿಗೆ ಕೊಟ್ಟ ರಸೀತಿಯಲ್ಲಿ ಒಂದು ಮೊತ್ತ…ಗೋಲ್ಮಾಲ್ ಗ್ರಾಮ ಲೆಕ್ಕಿಗ ಆಂಥೋನಿ ಸುನಿಲ್ ರಾಜ್…

ಸರ್ಕಾರದ ಬೊಕ್ಕಸಕ್ಕೆ ಕನ್ನ…ಭೂಕಂದಾಯ ರಸೀತಿಯಲ್ಲಿ ವಂಚನೆ…ಕಚೇರಿ ಕಾಪಿಯಲ್ಲಿ ಒಂದು ಮೊತ್ತ…ರೈತರಿಗೆ ಕೊಟ್ಟ ರಸೀತಿಯಲ್ಲಿ ಒಂದು ಮೊತ್ತ…ಗೋಲ್ಮಾಲ್ ಗ್ರಾಮ ಲೆಕ್ಕಿಗ ಆಂಥೋನಿ ಸುನಿಲ್ ರಾಜ್…

ಸರ್ಕಾರದ ಬೊಕ್ಕಸಕ್ಕೆ ಕನ್ನ…ಭೂಕಂದಾಯ ರಸೀತಿಯಲ್ಲಿ ವಂಚನೆ…ಕಚೇರಿ ಕಾಪಿಯಲ್ಲಿ ಒಂದು ಮೊತ್ತ…ರೈತರಿಗೆ ಕೊಟ್ಟ ರಸೀತಿಯಲ್ಲಿ ಒಂದು ಮೊತ್ತ…ಗೋಲ್ಮಾಲ್ ಗ್ರಾಮ ಲೆಕ್ಕಿಗ ಆಂಥೋನಿ ಸುನಿಲ್ ರಾಜ್…

ಟಿ.ನರಸೀಪುರ,ಜ31,Tv10 ಕನ್ನಡ
ರೈತರು ಜಮೀನುಗಳಿಗೆ ಪಾವತಿಸಿರುವ ಭೂಕಂದಾಯ ಸರ್ಕಾರಿ ಬೊಕ್ಕಸಕ್ಕೆ ಸೇರುವ ಬದಲು ಗ್ರಾಮಲೆಕ್ಕಿಗನ ಜೇಬಿಗೆ ಸೇರಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಮೂಗೂರು ಹೋಬಳಿಯ ಮಾಡ್ರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಮಾಡ್ರಹಳ್ಳಿ ಗ್ರಾಮದ ಗ್ರಾಮ ಲೆಕ್ಕಿಗ ಅಂಥೋನಿ ಸುನಿಲ್ ರಾಜ್ ಮೇಲೆ ಇಂತಹ ಆರೋಪ ಕೇಳಿ ಬಂದಿದೆ.ಕಂದಾಯದ ಹಣ ಪಾವತಿಸಿದ ಭೂ ಮಾಲೀಕರಿಗೆ ವಂಚಿಸಿರುವುದಲ್ಲದೆ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟು ಮಾಡಿದ್ದಾರೆ.ಮೂಲ ಪ್ರತಿಯಲ್ಲೇ ಒಂದು ಮೊತ್ತ ರೈತರಿಗೆ ನೀಡಿದ ರಸೀತಿಯಲ್ಲೇ ಒಂದು ಮೊತ್ತ ನಮೂದಾಗಿದೆ.ಒಂದೇ ಸೀರಿಯಲ್ ನಂಬರ್ ರಸೀತಿಯಲ್ಲಿ ಎರಡು ಮೊತ್ತ ದಾಖಲಾಗಿದೆ.ಒಂದೇ ದಿನಾಂಕದಲ್ಲಿ 7 ರೈತರಿಂದ ಹಣ ಪಾವತಿಸಿಕೊಂಡಿರುವ ಅಂಥೋನಿ ಸುನಿಲ್ ರಾಜ್ ಸರ್ಕಾರಕ್ಕೆ ಸೇರಬೇಕಾದ ಹಣವನ್ನ ತಮ್ಮ ಕಿಸೆಗೆ ಸೇರಿಸಿಕೊಂಡಿದ್ದಾರೆ.

ದಿನಾಂಕ 1-8-2022 ರಂದು 7 ಮಂದಿ ರೈತರು ತಮ್ಮ ಜಮೀನಿಗೆ ಭೂಕಂದಾಯ ಪಾವತಿಸಿದ್ದಾರೆ. 7 ರೈತರಿಗೆ ನೀಡಿರುವ ರಸೀತಿಯ ಮೊತ್ತಕ್ಕೂ ಹಾಗೂ ಸರ್ಕಾರದ ಕಚೇರಿಯ ಪ್ರತಿಯಲ್ಲಿರುವ ಮೊತ್ತಕ್ಕೂ ವೆತ್ಯಾಸ ಕಂಡು ಬಂದಿದೆ.ಒಟ್ಟು ಮೊತ್ತ 8162/- ರೂ ಸಂದಾಯವಾಗಿದೆ.ಸರ್ಕಾರ ಬೊಕ್ಕಸಕ್ಕೆ ಕೇವಲ 440/- ರೂ ಮಾತ್ರ ಸೇರಿದೆ.7722/- ರೂ ಗ್ರಾಮ ಲೆಕ್ಕಿಗನ ಜೇಬು ಸೇರಿದೆ.ಅಂಥೋನಿ ಸುನಿಲ್ ರಾಜ್ ಮಾಡಿರುವ ಗೋಲ್ಮಾಲ್ ವಿವರ ಇಲ್ಲಿದೆ…

ಅಂಥೋನಿ ಸುನಿಲ್ ರಾಜ್ ನ ವಂಚನೆಯನ್ನ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ಬಯಲು ಮಾಡಿದ್ದಾರೆ.ಕೂಡಲೇ ಈತನ ವಿರುದ್ದ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *