ಚಾಮರಾಜ ಕ್ಷೇತ್ರದಲ್ಲಿ ಶುರುವಾಗಿದೆ ಟಿಕೆಟ್ ಫೈಟ್…ಯಾರಿಗೆ ಒಲಿಯಲಿದೆ ಚುನಾವಣಾ ಕಣ…?
- Politics
- February 3, 2023
- No Comment
- 125
ಚಾಮರಾಜ ಕ್ಷೇತ್ರದಲ್ಲಿ ಶುರುವಾಗಿದೆ ಟಿಕೆಟ್ ಫೈಟ್…ಯಾರಿಗೆ ಒಲಿಯಲಿದೆ ಚುನಾವಣಾ ಕಣ…? ಮೈಸೂರು,ಫೆ3,Tv10 ಕನ್ನಡ
ಚುನವಣೆ ಸಮೀಒಇಸುತ್ತಿದ್ದಂತೆಯೇ ಆಕಾಂಕ್ಷಿಗಳಲ್ಲಿ ತಳಮಳ ಹೆಚ್ಚುತ್ತಿದೆ.ಟಿಕೆಟ್ ಗಾಗಿ ಈಗಿನಿಂದಲೇ ಲಾಬ
ಶುರುವಾಗಿದೆಮೈಸೂರಿನ ಪ್ರತಿಷ್ಠಿತ ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಫೈಟ್ ಶುರುವಾಗಿದೆ.ಮೂರು ಪಕ್ಷಗಳಲ್ಲೂ ಟಿಕೆಟ್ ಗಿಟ್ಟಿಸಲು ಆಕಾಂಕ್ಷಿಗಳು ನಾಯಕರ ಹಿಂದೆ ದುಂಬಾಲು ಬಿದ್ದಿದ್ದಾರೆ.
ತೆರೆಮರೆಯಲ್ಲಿ ಟಿಕೆಟ್ ಗಾಗಿ ಲಾಭಿ ಶುರುವಾಗಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಗಾಗಿ ಆಕಾಂಕ್ಷಿಗಳು ತಮ್ಮದೇ ಆದ ಪ್ರಭಾವ ಬಳಸಲು ಮುಂದಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ವಲಸಿಗ v/s ಹಳೆ ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ನಡೆದಿದೆ.
ಟಿಕೆಟ್‌ಗಾಗಿ ಮಾಜಿ ಶಾಸಕ ಹಾಗೂ
ಹರೀಶ್ ಗೌಡ ನಡುವೆ ಫೈಟ್ ಇದೆ.ಈಗಾಗಲೇ ಒಮ್ಮೆ ಆಯ್ಕೆಯಾಗಿ ಕ್ಷೇತ್ರದ ಪರಿಚಯ ಇರುವ ಮಾಜಿ ಶಾಸಕ ವಾಸು ಪ್ರಬಲ ಆಕಾಂಕ್ಷಿಯಾಗಿದ್ದಾರೆ.ಮತ್ತೊಂದೆಡೆ ಸಿದ್ದರಾಮಯ್ಯ ಬೆಂಬಲಿಗನೆಂದೇ ಗುರುತಿಸಿಕೊಂಡಿರುವ ಸಹ ಕೈ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ವಾಸು ಸೋಲಿಗೆ ಕಾರಣವಾದ ಹರೀಶ್ ಗೌಡ ಇದೀಗ ಕಾಂಗ್ರೆಸ್ ಸೇರಿದ್ದಾರೆ.
ವಾಸು ರವರು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪಮೋಯ್ಲಿ ಅವರ ಅಪ್ಪಟ ಶಿಷ್ಯರಾಗಿದ್ದಾರೆ.ಇಬ್ಬರಲ್ಲಿ ಯಾರಿಗೆ ಟಿಕೆಟ್ ಎಂಬ ವಿಚಾರ ಕುತೂಹಲಕ್ಕೆ ಕಾರಣವಾಗಿದೆ.
ಮತ್ತೊಂದೆಡೆ ಬಿಜೆಪಿಯಲ್ಲೂ ಟಿಕೆಟ್ ಗಾಗಿ ತಳಮಳ ಶುರುವಾಗಿದರ.
ಹಾಲಿ ಶಾಸಕ ಎಲ್.ನಾಗೇಂದ್ರ ನಂದೀಶ್ ಪ್ರೀತಂ, ಡಾ.ಮಂಜುನಾಥ್ ನಡುವೆ ಫೈಟ್ ಶುರುವಾಗಿದೆ.
ನಂದೀಶ್ ಪ್ರೀತಂ, ಮಾಜಿ ಶಾಸಕ ಶಂಕರಲಿಂಗೇಗೌಡ ಪುತ್ರರಾಗಿದ್ದಾರೆ. ಎಲ್.ನಾಗೇಂದ್ರ ಹಾಲಿ ಶಾಸಕರಾಗಿದ್ದಾರೆ.
ಕಳೆದ ಬಾರಿ ಟಿಕೆಟ್ ಆಕಾಂಕ್ಷಿ ಆಗಿದ್ದ ಡಾ.ಮಂಜುನಾಥ್ ಈ ಬಾರಿಯೂ ಕೂಡ ಆಕಾಂಕ್ಷಿಯಾಗಿದ್ದಾರೆ.ಮೂವರಲ್ಲಿ ಯಾರಿಗೆ ಟಿಕೆಟ್…? ಯಾರು ಕಣದಲ್ಲಿ ಉಳಿಯುತ್ತಾರೆ..?ನಾಯಕರ ತೀರ್ಮಾನಕ್ಕೆ ಬಿಟ್ಟಿದೆ.
ಜೆಡಿಎಸ್ ನಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳು ಈಗಾಗಲೇ ನಾಯಕರ ಬೆನ್ನು ಬಿದ್ದಿದ್ದಾರೆ.
ಪಾಲಿಕೆ ಸದಸ್ಯರಾದ ಶ್ರೀಧರ್, ಪ್ರೇಮಾ ಶಂಕರೇಗೌಡ, ಎಸ್ ಬಿಎಂ ಮಂಜು, ಮಾಜಿ ಸದಸ್ಯ ಮಾದೇಶ್ ನಡುವೆ ಫೈಟ್ ಶುರುವಾಗಿದೆ.
ಮೂರು ಪಕ್ಷದಲ್ಲೂ ಯಾರಿಗೇ ಟಿಕೆಟ್ ಸಿಕ್ಕರೂ ಅಸಮಾಧಾನ ಭುಗಿಲೇಳಲಿದೆ.
ಅಂತಿಮವಾಗಿ ಯಾರಿಗೇ ಟಿಕೆಟ್ ದೊರೆತರೋ ಒಳೇಟಿನ ರಾಜಕೀಯ ಎದುರಿಸಬೇಕಿದೆ.
ಒಟ್ಟಾರೆ ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಲಾಭಿ ಶುರುವಾಗಿದೆ…