ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವ ಸಂಭ್ರಮ…ಇಂದು ಪ್ರ ಧಾನ ಯಾಗ…ಆಯುಷ್ಯ ಹಾಗೂ ಲಕ್ಷ್ಮಿನಾರಾಯಣ ಹೋಮ…

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವ ಸಂಭ್ರಮ…ಇಂದು ಪ್ರ ಧಾನ ಯಾಗ…ಆಯುಷ್ಯ ಹಾಗೂ ಲಕ್ಷ್ಮಿನಾರಾಯಣ ಹೋಮ…

  • Temples
  • February 4, 2023
  • No Comment
  • 204

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವ ಸಂಭ್ರಮ…ಇಂದು ಪ್ರ ಧಾನ ಯಾಗ…ಆಯುಷ್ಯ ಹಾಗೂ ಲಕ್ಷ್ಮಿನಾರಾಯಣ ಹೋಮ…

ಮೈಸೂರು,ಫೆ4,Tv10 ಕನ್ನಡ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಎಂಬತ್ತನೆ ವರ್ಷದ ಜನ್ಮದಿನೋತ್ಸವದ ಪ್ರಯುಕ್ತ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವದ ಸಂಭ್ರಮ ಮನೆ ಮಾಡಿದೆ.ಹಲವು ದಿನಗಳಿಂದ ಧಾರ್ಮಿಕ ಕೈಂಕರ್ಯಗಳು ಅದ್ದೂರಿಯಿಂದ ಸಾಗುತ್ತಿದೆ.ಆಶ್ರಮಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.ದೇಶ ವಿದೇಶಗಳಿಂದ ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡು ಸ್ವಾಮೀಜಿಗಳ ಕೃಪೆಗೆ ಪಾತ್ರರಾಗಿದ್ದಾರೆ.

ಇಂದು ಬೆಳಿಗ್ಗೆ ಪ್ರಧಾನಯಾಗ-ಆಯುಷ್ಯ ಹೋಮ ಮತ್ತು ಲಕ್ಷ್ಮಿ ನಾರಾಯಣ ಹೋಮ ನೆರವೇರಿದೆ.
ನಂತರ ದಶದಾನಗಳನ್ನು ಋತ್ವಿಕರಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೀಡಿದ್ದಾರೆ.
ಗಣಪತಿ ಸೇರಿ ಎಲ್ಲಾ ದೇವರುಗಳಿಗೆ ಶ್ರೀ ಗಣಪತಿ ಸ್ವಾಮೀಜಿ ಹಾಗೂ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಧನ ಕನಕ ಸಹಿತ ಪೂಜೆ ನೆರವೇರಿಸಿದ್ದಾರೆ. ವಿಷ್ಣುಸಹಸ್ರ ನಾಮ ಪಾರಾಯಣವು ಸಹ ನಡೆದಿದೆ.ಅತ್ಯಂತ ಪ್ರಮುಖವಾದ ಕನಕಾಭಿಷೇಕವನ್ನು ಸದ್ಭಕ್ತರ ಪರವಾಗಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ನೆರವೇರಿಸಿದ್ದಾರೆ.
ಶ್ರೀಗಳ ಶಿರದ ಮೇಲೆ ಚಿನ್ಮದ ನಾಣ್ಯಗಳನ್ನು ಇಟ್ಟು ದೇವಾನುದೇವತೆಗಳನ್ನು ಆವಾಹನೆ ಮಾಡಿದ ಜಲದಿಂದ ಕಿರಿಯ ಶ್ರೀಗಳು ಅಭಿಷೇಕ ಮಾಡಿ ಪೂಜಿಸಿ ನಮಸ್ಕರಿಸಿದರು.

ಸಾಮಾನ್ಯವಾಗಿ ಎಂಬತ್ತು ವರ್ಷ ತುಂಬಿದ ಹಿರಿಯರು ಈ ಸಹಸ್ರಚಂದ್ರ ದರ್ಶನ ಶಾಂತಿ ಮಾಡಿಕೊಂಡು ಕನಕಭಿಷೇಕ ಮಾಡಿಸಿಕೊಳ್ಳುವುದು ರೂಢಿ.ಈಗ ಆಧ್ಯಾತ್ಮಿಕ ಮೇರು ಪರ್ವತವಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಸಹಸ್ರಚಂದ್ರ ದರ್ಶನ ಶಾಂತಿ, ಕನಕಾಭಿಷೇಕ ನಡೆಯುತ್ತಿರುವುದು ಭಕ್ತರಲ್ಲಿ ಅತ್ಯಂತ ಸಡಗರ ಸಂಭ್ರಮ ತಂದಿದೆ.ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಲೋಕ ಕಲ್ಯಾಣಾರ್ಥವಾಗಿ ಇದನ್ನೆಲ್ಲಾ ಮಾಡುತ್ತಿದ್ದು ನಾಡಿನಲ್ಲಿ ಉತ್ತಮ ಮಳೆ, ಬೆಳೆ ಆಗಿ ಸುಭಿಕ್ಷವಾಗಲಿ. ಧನ ಧಾನ್ಯ ಸಮೃದ್ಧವಾಗಲಿ ದೇಶದಲ್ಲಿ ಕಷ್ಟ ಕಾರ್ಪಣ್ಯ ಹೋಗಲಿ, ಎಲ್ಲರಿಗೂ ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ…

Spread the love

Related post

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…

Leave a Reply

Your email address will not be published. Required fields are marked *