ಜಯಲಕ್ಷ್ಮಿಪುರಂ ಪೊಲೀಸರ ಕಾರ್ಯಾಚರಣೆ…ಇಬ್ಬರು ಸರಗಳ್ಳರ ಬಂಧನ…14 ಲಕ್ಷ ಮೌಲ್ಯದ ಚಿನ್ನದ ಸರಗಳು ವಶ…
- Crime
- February 9, 2023
- No Comment
- 226
ಜಯಲಕ್ಷ್ಮಿಪುರಂ ಪೊಲೀಸರ ಕಾರ್ಯಾಚರಣೆ…ಇಬ್ಬರು ಸರಗಳ್ಳರ ಬಂಧನ…14 ಲಕ್ಷ ಮೌಲ್ಯದ ಚಿನ್ನದ ಸರಗಳು ವಶ…
ಮೈಸೂರು,ಫೆ9,Tv10 ಕನ್ನಡ
ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಇಬ್ಬರು ಸರಗಳ್ಳರು ಸಿಕ್ಕಿಬಿದ್ದಿದ್ದಾರೆ.ಬಂಧಿತರಿಂದ 14 ಲಕ್ಷ ಮೌಲ್ಯದ 8 ಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಳ್ಳಲಾಗಿದೆ.ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.ಮಂಜು(32) ಹಾಗೂ ಚಂದನ್(27) ಬಂಧಿತ ಆರೋಪಿಗಳು.ಚಂದು ತಲೆ ಮರೆಸಿಕೊಂಡಿರುವ ಆರೋಪಿ.
ರಾತ್ರಿ ಗಸ್ತಿನ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.ಮೊದಲ ಆರೋಪಿ ಮಂಜು ಈಗಾಗಲೇ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ.ಜೈಲಿನಲ್ಲಿದ್ದಾಗಲೇ ಚಂದನ್ ನ ಪರಿಚಯ ಮಾಡಿಕೊಂಡು ಮೂವರು ಆರೋಪಿಗಳು ಸೇರಿ ಕೃತ್ಯವೆಸಗಿದ್ದಾರೆ.
ಜಯಲಕ್ಷ್ಮಿಪುರಂ,ಕುವೆಂಪುನಗರ,ಆಲನಹಳ್ಳಿ,ಉದಯಗಿರಿ,ಕೊಳ್ಳೇಗಾಲ,ನಂಜನಗೂಡು,ಕೆ.ಆರ್.ನಗರ,ಟಿ.ನರಸೀಪುರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಸರಗಳುವು ಪ್ರಕರಣಗಳು ಪತ್ತೆಯಾಗಿದೆ.
ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಮುತ್ತುರಾಜ್ ಹಾಗೂ ಡಿಸಿಪಿ (ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ ಎನ್.ಆರ್.ವಿಭಾಗದ ಎಸಿಪಿ ಅಶ್ವತ್ಥನಾರಾಯಣ್ ರವರ ಮೇಲ್ವಿಚಾರಣೆಯಲ್ಲಿ ಜಯಲಕ್ಷ್ಮಿಪುರಂ ನ ಇನ್ಸ್ಪೆಕ್ಟರ್ ಗೋವಿಂದರಾಜು ನೇತೃತ್ವದಲ್ಲಿ ಪಿಎಸ್ಸೈ ರಂಗಸ್ವಾಮಿ ಸಿಬ್ಬಂದಿಗಳಾದ ಪ್ರಭುರಾಜ್,ಅಭಿಷೇಕ್ ಬೆಂಜಮಿನ್,ದೇವರಾಜು,ಅಮಿಸಿದ್ದ ಖೋತ್,ಕಾಂತರಾಜು,ಮಾಯಪ್ಪ ಕರಂಗಾವಿ,ಮನೋಹರ್,ಕುಮಾರ್.ಎನ್.ಅರ್.ಎಸಿಪಿ ಸ್ಕ್ವಾಡ್ ನ ಎಎಸ್ಸೈ ಅನಿಲ್ ಶಂಕಪಾಲ್,ರಮೇಶ್,ಲಿಂಗರಾಜಪ್ಪ,ಸುರೇಶ್,ಜೀವನ್,ಹರೀಶ್,ಹನುಮಂತ ಕಲ್ಲೇದ್ ನಗರ ಪೊಲೀಸ್ ಆಯುಕ್ತರ ಕಚೇರಿಯ ತತ್ರಿಕ ವಿಭಾಗದ ಸಿಬ್ಬಂದಿಗಳಾದ ಕುಮಾರ್,ಗುರುದೇವಾರಾಧ್ಯ,ಮಂಜು,ಶ್ಯಾಂಸುಂದರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ.
ಅಧಿಕಾರಿ ಸಿಬ್ಬಂದಿಗಳ ಯಶಸ್ವಿ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಪ್ರಶಂಸಿಸಿದ್ದಾರೆ…