
ಕಬ್ಬಿನ ಗದ್ದೆಗೆ ಬೆಂಕಿ…ನಂದಿಸಲು ಯತ್ನಿಸಿದ ರೈತ ಸಜೀವ ದಹನ…
- CrimeMysore
- February 12, 2023
- No Comment
- 125
ಕಬ್ಬಿನ ಗದ್ದೆಗೆ ಬೆಂಕಿ…ನಂದಿಸಲು ಯತ್ನಿಸಿದ ರೈತ ಸಜೀವ ದಹನ…
ಮಂಡ್ಯ,ಫೆ12,Tv10 ಕನ್ನಡ
ಕಬ್ಬಿನ ಗದ್ದೆಗೆ ಬಿದ್ದ ಬೆಂಕಿಯನ್ನ ನಂದಿಸಲು ಯತ್ನಿಸಿದ ರೈತ ಸಜೀವ ದಹನವಾದ ದುರಂತ ಘಟನೆ ಮಂಡ್ಯ ಜಿಲ್ಲೆ ಮೊಡಚಾಕನಹಳ್ಳಿಯಲ್ಲಿ ನಡೆದಿದೆ.ಮಹಾಲಿಂಗಯ್ಯ ಬೆಂಕಿಯ ಕೆನ್ನಾಲಿಗೆ ಸಿಲುಕ ಸಜಾವ ದಹನವಾದ ರೈತ. 20ಕ್ಕೂ ಹೆಚ್ಚು ಎಕರೆ ಕಬ್ಬು ಬೆಂಕಿಯಿಂದ ಭಸ್ಮವಾಗಿದೆ.ಮಧ್ಯಾಹ್ನ 1 ಗಂಟೆ ವೇಳೆಗೆ ಕಬ್ಬಿನ ಗದ್ದೆಯ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕೆಲವೇ ನಿಮಿಷಗಳಲ್ಲಿ ಇಡೀ ಜಮೀನಿಗೆ ವ್ಯಾಪಿಸಿ ಅಕ್ಕಪಕ್ಕದ ಗದ್ದೆಗಳಿಗೂ ಹರಡಿದೆ.
ದಟ್ಟ ಹೊಗೆ ನೋಡಿ ಜಮೀನು ಬಳಿಗೆ ಗ್ತಾಮಸ್ಥರು ಧಾವಿಸಿದ್ದರು.
ತಕ್ಷಣ ಅಕ್ಕಪಕ್ಕದಲ್ಲಿ ಸಿಕ್ಕ ಮಣ್ಣು, ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದರು.
ಅಷ್ಟೊತ್ತಿಗೆ 20 ಎಕರೆಗೂ ಹೆಚ್ಚು ಕಬ್ಬಿಗೆ ಬೆಂಕಿ ವ್ಯಾಪಿಸಿತ್ತು.
ಬೆಂಕಿ ನಂದಿಸುತ್ತಿದ್ದ ಮಹಾಲಿಂಗಯ್ಯ ಸಜೀವವಾಗಿ ದಹನವಾಗಿದ್ದಾರೆ.
ಸಂಪೂರ್ಣ ಸುಟ್ಟು ಕರಕಲಾಗಿರುವ ಮಹಾಲಿಂಗಯ್ಯ ಮೃತದೇಹ.ಮಹೇಶ್ ಎಂಬುವರ 8 ಎಕರೆ, ಜವರೇಗೌಡ ಎಂಬುವರ 1.5 ಎಕರೆ, ಪಾಪಣ್ಣ ಎಂಬುವರ 2 ಎಕರೆ, ಶಂಕರ್ ಎಂಬುವರ 1 ಎಕರೆ ಕಬ್ಬು ಭಸ್ಮವಾಗಿದೆ.
ಮಹೇಶ್ ಎಂಬವರ ಒಂದೂವರೆ ಎಕರೆ ಬಾಳೆ ತೋಟವೂ ಬೆಂಕಿಗಾಹುತಿಯಾಗಿದೆ.
ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…