ರಾಖಿಸಾವಂತ್ ಪತಿ ಆದಿಲ್ ಖಾನ್ ಗೆ ಮತ್ತದು ಕಂಟಕ…ಮೈಸೂರಿನಲ್ಲಿ ಎಫ್.ಐ.ಆರ್.ದಾಖಲು…ಇರಾನ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ…
- CrimeMysore
- February 11, 2023
- No Comment
- 92
ರಾಖಿಸಾವಂತ್ ಪತಿ ಆದಿಲ್ ಖಾನ್ ಗೆ ಮತ್ತದು ಕಂಟಕ…ಮೈಸೂರಿನಲ್ಲಿ ಎಫ್.ಐ.ಆರ್.ದಾಖಲು…ಇರಾನ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ…
ಮೈಸೂರು,ಫೆ11,Tv10 ಕನ್ನಡ
ರಾಖಿ ಸಾವಂತ್ ಪತಿ ಆದಿಲ್ ಖಾನ್ ಗೆ ಮತ್ತೊಂದು ಕಂಟಕ ಎದುರಾಗಿದೆ.ಇರಾನ್ ದೇಶದಿಂದ ವಿಧ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರ,ವಂಚನೆ,ಬೆದರಿಕೆ,ಬ್ಲಾಕ್ ಮೇಲ್ ಮಾಡಿದ ಆರೋಪ ಆದಿಲ್ ಖಾನ್ ಮೇಲೆ ಬಂದಿದೆ.ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ 5 ವರ್ಷಗಳಿಂದ ಮೈಸೂರಿನಲ್ಲಿ ಡಾಕ್ಟರ್ ಆಫ್ ಫಾರ್ಮೆಸಿ ಮಾಡಲು ಬಂದ ಇರಾನ್ ದೇಶದ ವಿಧ್ಯಾರ್ಥಿಗೆ ಆದಿಲ್ ಖಾನ್ ಪರಿಚಯವಾಗಿದ್ದಾನೆ.ಮದುವೆ ಆಗುವುದಾಗಿ ನಂಬಿಸಿ ವಿವಿ ಪುರಂ ನಲ್ಲಿರು ಅಪಾರ್ಟ್ ಮೆಂಟ್ ಒಂದರಲ್ಲಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.ಇತ್ತೀಚೆಗೆ 5 ತಿಂಗಳಿಂದ ಮದುವೆ ವಿಚಾರದಲ್ಲಿ ಆದಿಲ್ ಖಾನ್ ಮಾತು ತಪ್ಪಿದ್ದಾನೆ.ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದಾಗ ಇಬ್ಬರೂ ಇರುವ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನ ಕಳುಹಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ.ಇದರಿಂದ ಮನನೊಂದ ವಿಧ್ಯಾರ್ಥಿನಿ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ರಾಖಿ ಸಾವಂತ್ ನೀಡಿರುವ ದೂರಿನ ಬೆನ್ನ ಹಿಂದೆಯೇ ಆದಿಲ್ ಖಾನ್ ಗೆ ಮತ್ತೊಂದು ಪ್ರಕರಣ ಕಂಟಕವಾಗಿದೆ…