• February 17, 2023

ವಿದ್ಯಾರ್ಥಿಗಳು ಕಲಿಕೋತ್ಸಾಹದಿಂದ ಮುನ್ನಡೆಯಬೇಕು: ಎನ್.ಎಂ.ಶಿವಪ್ರಕಾಶ್.

ವಿದ್ಯಾರ್ಥಿಗಳು ಕಲಿಕೋತ್ಸಾಹದಿಂದ ಮುನ್ನಡೆಯಬೇಕು: ಎನ್.ಎಂ.ಶಿವಪ್ರಕಾಶ್.

ವಿದ್ಯಾರ್ಥಿಗಳು ಕಲಿಕೋತ್ಸಾಹದಿಂದ ಮುನ್ನಡೆಯಬೇಕು: ಎನ್.ಎಂ.ಶಿವಪ್ರಕಾಶ್.

ಕೆ.ಆರ್.ಪೇಟೆ: ಪರೀಕ್ಷೆ ಎಂಬುದು ಭವಿಷ್ಯ ಕಟ್ಟಿಕೊಡುವ ಭವ್ಯ ಮಂದಿರದಂತೆ. ಸಮಾಧಾನದ ಅಧ್ಯಯನದ ಮೂಲಕ ಅದನ್ನು ಪ್ರವೇಶಿಸಿ ಸಾಧನೆ ಮಾಡಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಕಲಿಕೋತ್ಸಾಹದಿಂದ ಮುನ್ನಡೆಯಬೇಕು ಎಂದು ಪಾಂಡವಪುರದ ಸ.ಪ.ಪೂ.ಕಾಲೇಜಿನ ಉಪನ್ಯಾಸಕರಾದ ಎನ್.ಎಂ.ಶಿವಪ್ರಕಾಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬಲ್ಲೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿದರು. ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಗುರಿಯನ್ನು ತಲುಪಬೇಕು. ಉತ್ಸಾಹ ಮತ್ತು ಆಸಕ್ತಿಯಿಂದ ಮಾತ್ರ ಗುರಿಸಾಧನೆ ಸಾಧ್ಯ. ಆಸಕ್ತಿ ಇರುವ ವಿದ್ಯಾರ್ಥಿಗಳು ಅನ್ಯ ವಿಷಯಗಳ ಕಡೆಗೆ ಗಮನ ಕೊಡದೆ, ಅಧ್ಯಯನದಲ್ಲಿ ಮಾತ್ರ ಏಕಾಗ್ರತೆಯಿಂದಿರುತ್ತಾರೆ. ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಹೋಗುತ್ತಾರೆ. ಬದುಕಿನ ಸಾರ್ಥಕತೆಯನ್ನು ಮೆರೆಯುತ್ತಾರೆ. ಅದಕ್ಕಾಗಿ ಎಲ್ಲರೂ ಉತ್ಸಾಹ ಮತ್ತು ಆಸಕ್ತಿಯಿಂದ ಅಧ್ಯಯನ ಮಾಡಬೇಕೆಂದೂ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿಗೆ ಸಾಕ್ಷಿಯಾದ ಕಾಲೇಜು ಸಂಚಿಕೆಯಾದ ಸೇವಂತಿಗೆ-೩ ಎಂಬ ಕಿರುಹೊತ್ತಿಗೆಯನ್ನು ಉಪಪ್ರಾಂಶುಪಾಲರಾದ ಶ್ರೀ ಅಸ್ಗರ್ ಅಲಿಯವರು ಬಿಡುಗಡೆ ಮಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಮಾತನಾಡಿದರು. ಇಂದಿನ ಕಿರುಗವನಗಳ ಬರವಣಿಗೆಯು ಮುಂದಿನ ಮಹಾಕಾವ್ಯಕ್ಕೆ ನಾಂದಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿ.ಟಿ.ಪ್ರಕಾಶ್ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ತಮ್ಮದಾಗಲೆಂದು ಶುಭಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಸಿ ಆರ್ ದಿನೇಶ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಂದೆ ತಾಯಿಯ ಕನಸನ್ನು ಮಕ್ಕಳು ನನಸು ಮಾಡಬೇಕು. ಬಡತನ ಎಂಬುದನ್ನು ಸಮಸ್ಯೆಯನ್ನಾಗಿಸಿಕೊಳ್ಳದೆ, ಸವಾಲಾಗಿಸಿಕೊಂಡು ಅದನ್ನು ಮೆಟ್ಟಿ ನಿಲ್ಲಬೇಕು ಎಂದು ಹೇಳಿ ಈ ವರ್ಷ ವಿದ್ಯಾರ್ಥಿಗಳಿಗೆ ನಾನಾ ರೂಪಗಳಲ್ಲಿ ಸಹಾಯಹಸ್ತ ಚಾಚಿದ ಕೊಡುಗೈ ದಾನಿಗಳನ್ನು ಸ್ಮರಿಸಿದರು. ದಾನಿಗಳು ಹಾಗೂ ಮಹಾನ್ ಸಾಧಕರ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಪರೀಕ್ಷೆಯ ಸಮಯದಲ್ಲಿ ಮೊಬೈಲ್ ನಿಂದ ದೂರವಿರಬೇಕು. ಆರೋಗ್ಯವನ್ನು ಕಾಪಾಡಿಕೊಂಡು ಪರೀಕ್ಷೆಯನ್ನು ಎದುರಿಸಿರೆಂದು ಕಿವಿ ಮಾತು ಹೇಳಿದರು. ಕ್ರೀಡೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೆನಪಿನ ಕಾಣಿಕೆಯನ್ನು ವಿದ್ಯುತ್‌ ಗುತ್ತಿಗೆದಾರ ಬಿ.ಎಸ್ ರಾಮು ವಿತರಿಸಿದರು. ಕಾಲೇಜಿನ ವರದಿಯನ್ನು ಸಂಜಯ್ ಬಿ.ಆರ್. ನಿರೂಪಣೆಯನ್ನು ರಕ್ಷತಾ ಮಾಡಿದರು .ಕಾರ್ಯಕ್ರಮದಲ್ಲಿ ರಂಗರಾಜು ರಾಜೇ ಗೌಡ ಬೃಂದಾ ವೀಣಾ ಚೈತ್ರ ಅನಿಲ್ ಶ್ರೀಕಾಂತ ಉಪಸ್ಥಿತರಿದ್ದರು .

Spread the love

Leave a Reply

Your email address will not be published.