ಏಕಾಗ್ರತೆ ಸಾಧನೆಗೆ ಸೋಪಾನ: ಲಯನ್ ಸಿ.ಆರ್ .ದಿನೇಶ್
- TV10 Kannada Exclusive
- February 19, 2023
- No Comment
- 77
ಏಕಾಗ್ರತೆ ಸಾಧನೆಗೆ ಸೋಪಾನ: ಲಯನ್ ಸಿ.ಆರ್ .ದಿನೇಶ್
ಬೂಕನಕೆರೆ : ವಿದ್ಯಾರ್ಥಿಗಳು ಆಸಕ್ತಿಯಿಂದ ಓದಬೇಕು. ಯಾವುದೇ ವಿಷಯದ ಮೇಲಾಗಲಿ ಏಕಾಗ್ರತೆ ಇರಬೇಕು. ಏಕೆಂದರೆ ಏಕಾಗ್ರತೆ ಸಾಧನೆಗೆ ಸೋಪಾನ ಎಂದು ಬಲ್ಲೇನಹಳ್ಳಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್ .ದಿನೇಶ್ ರವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇಂದು ಕಾಲೇಜಿನಲ್ಲಿ ನಡೆದ ಕಾಲೇಜಿನ ವಾರ್ಷಿಕೋತ್ಸವ,ಶಾರದಾ ಪೂಜೆ ಮತ್ತು ದ್ವಿತೀಯ ಪಿ.ಯು.ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಕಾರ್ಯಕ್ರಮದ ಉದ್ಘಾಟನೆಯನ್ನು ವಹಿಸಿ ಮಾತನಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಉಳಿದಿರುವ ದಿನಗಳ ಲೆಕ್ಕದ ಮೇಲೆ ಉಪನ್ಯಾಸಕರ ಮಾರ್ಗದರ್ಶನ ಪಡೆದು ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಸಮಯಪಾಲನೆಯ ಮೂಲಕ ಶಾಂತತೆಯಿಂದ ಅಧ್ಯಯನದಲ್ಲಿ ತೊಡಗಬೇಕೆಂದು ತಿಳಿಸಿ, ಅನ್ಯವಿಷಯಗಳ ಕಡೆಗೆ ಯಾವುದೇ ಕಾರಣಕ್ಕೂ ಗಮನ ನೀಡಬಾರದೆಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೆಂಪರಾಜು ರವರು ಎಲ್ಲ ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಬೇಕು. ಯಾವುದೇ ಪರೀಕ್ಷೆಯನ್ನು ಎದುರಿಸಲು ಬೇಕಾಗಿರುವ ಮೊದಲ ಲಕ್ಷಣ ಇದಾಗಿದೆ. ಹಂತ ಹಂತವಾಗಿ ಓದುತ್ತಾ ವಿಷಯಗಳು ಸಂಗ್ರಹವಾಗುತ್ತಿದ್ದಂತೆಯೇ ಮಾನಸಿಕ ದೃಢತೆ ಹೆಚ್ಚುತ್ತದೆ. ಬಲ್ಲೇನಹಳ್ಳಿ ಕಾಲೇಜಿನ ಆಂಗ್ಲ ಉಪನ್ಯಾಸಕರಾದ ಹೆಚ್ . ರಂಗರಾಜು ಮುಂದೆ ನಡೆಯುವ ಪರೀಕ್ಷೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಆಗ ಮಾತ್ರ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ತೆಗೆಯಲು ಸಾದ್ಯ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಕೆ.ಈಶ್ವರ್ ರಾಮಕೃಷ್ಣ ಮಂಜುನಾಥ್ ವಿಜಯಾ ರೇಖಾ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಿ.ಆರ್ ನಾಗರಾಜ್ ಉಪಸ್ಥಿತರಿದ್ದರು .ಕಾಲೇಜಿನಿಂದ ಪದವಿ ಕಾಲೇಜಿಗೆ ವರ್ಗಾವಣೆ ಆದಾ ವಾಣಿಜ್ಯಶಾಸ್ತ ಉಪನ್ಯಾಸಕರಾದ ದೀಪಿಕಾ ರವರಿಗೆ ಬಿಳ್ಕೋಡುಗೆ ನೀಡಲಾಯಿತು .